ಕೊಪ್ಪಳ 28: ಕ್ರೀಡೆಯಲ್ಲಿ ಭಾಗಿಯಾಗಿ ಮಾನಸಿಕ ಒತ್ತಡಗಳನ್ನು ಕಡಿಮೆ ಮಾಡಿಕೊಳ್ಳುವಂತೆ ಕೊಪ್ಪಳ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಂಜೀವ ವಿ. ಕುಲಕಣರ್ಿ ಅವರು ಪೊಲೀಸರಿಗೆ ಕರೆ ನೀಡಿದರು.
ಕೊಪ್ಪಳ ಜಿಲ್ಲಾ ಪೊಲೀಸ್ ವತಿಯಿಂದ ನಗರದ ಪೊಲೀಸ್ ಕವಾಯತು ಮೈದಾನದಲ್ಲಿ ಮೂರು ದಿನಗಳ ಕಾಲ ಆಯೋಜಿಸಲಾದ "ವಾಷರ್ಿಕ ಕ್ರೀಡಾಕೂಟ" ಕಾರ್ಯಕ್ರಮದಲ್ಲಿ ಬುಧವಾರದಂದು ಕ್ರೀಡಾ ಜ್ಯೋತಿ ಬೆಳಗಿಸಿ, ಪಾರಿವಾಳ ಹಾಗೂ ಬಲೂನಗಳನ್ನು ಹಾರಿಬಿಡುವ ಮೂಲಕ ಕ್ರೀಡಾ ಕೋಟಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಪೊಲೀಸರಲ್ಲಿಯೂ ಸಹ ಅನೇಕ ಪ್ರತಿಭೆಗಳು ಅಡಗಿವೆ. ಕೆಲಸದ ಮದ್ಯೆ ಒತ್ತಡದಲ್ಲಿ ದಿನದ ಇಪ್ಪತ್ನಾಲ್ಕು ಗಂಟೆ ಕೆಲಸದಲ್ಲಿ ಪೊಲೀಸರು ತೊಡಗಿದ್ದಾರೆ. ಕಾನೂನು ಸುವ್ಯವಸ್ಥೆ ಜವಾಬ್ದಾರಿ ಪೊಲೀಸ್ ಮೇಲಿದೆ. ಬೇರೆ ರಾಜ್ಯಗಳಿಗಿಂತಲೂ ನಮ್ಮ ರಾಜ್ಯದ ಪೊಲೀಸರು ಕೆಲಸದಲ್ಲಿ ಮುಂದಿದ್ದು, ಇದು ನಮಗೆಲ್ಲರಿಗೂ ಹೆಮ್ಮೆಯ ವಿಷಯ ಹಾಗೂ ಪ್ರಶಂಸೆಗೆ ಪಾತ್ರವಾಗಿದೆ. ಕರ್ತವ್ಯ ನಿರ್ವಹಣೆ ಹಾಗೂ ಕಾನೂನು ಸುರಕ್ಷಿತೆ ನಾಗರಿಕರ ರಕ್ಷಣೆ ಪೊಲೀಸರ ಹೋಣೆಯಾಗಿದೆ. ಆರೋಗ್ಯ ಭಾಗ್ಯ ದೊಡ್ಡ ಸಂಪತ್ತು, ಸೇವಾ ಕಾರ್ಯದೊಂದಿಗೆ ಆರೋಗ್ಯವನ್ನು ಸಹ ಕಾಪಾಡಿಕೊಳ್ಳಬೇಕು. ಇದರ ನಡುವೆ ಕ್ರೀಡಾ ಚಟುವಟಿಕೆಯಲ್ಲಿ ಭಾಗಿಯಾಗಿ ಆರೋಗ್ಯವನ್ನು ಲೆಕ್ಕಿಸಿದೆ ಕರ್ತವ್ಯ ಮಾಡಬೆಕಾದ ಅನಿವಾರ್ಯತೆ ಪೊಲೀಸ್ ಇಲಾಖೆಯಲ್ಲಿದೆ. ಪೊಲೀಸರು ಯಾವುದೇ ಸಂದರ್ಭದಲ್ಲಿ ಕರ್ತವ್ಯಕ್ಕೆ ಸಿದ್ಧರಾಗಿರಬೇಕು. ಪೊಲೀಸರಲ್ಲಿಯೂ ಹಲವು ಪ್ರತಿಭೆಗಳಿದ್ದು, ಇಂತಹ ಕ್ರೀಡಾ ಕೂಟಗಳು ಅವರಿಗೆ ಸುವರ್ಣ ಅವಕಾಶವಾಗಲಿವೆ. ಆದ್ದರಿಂದ ಈ ಕ್ರೀಡಾ ಕೂಟದ ಸದುಪಯೋಗವನ್ನು ಪಡೆದುಕೊಂಡು ತಮ್ಮ ಪ್ರತಿಭೆಗಳನ್ನು ಅನಾವರಣಗೊಳಿಸಿ, ಇಲಾಖೆಯ ಘನತೆಯನ್ನು ಎತ್ತಿಹಿಡಿದು ಜಿಲ್ಲೆಯ ಕಿತರ್ಿಯನ್ನು ಬೆಳಗಿಸಬೇಕು. ಕ್ರೀಡೆಯಲ್ಲಿ ಬಹುಮಾನ ಪಡೆಯುವುದು ಮುಖ್ಯ ವಲ್ಲ, ಭಾಗವಹಿಸುವುದು ಮುಖ್ಯವಾಗಿದೆ. ಕ್ರೀಡಾ ಚಟುವಟಿಕೆಗಳಲ್ಲಿ ಭಾಗಿಯಾಗಿ ಈ ಅವಧಿಯಲ್ಲಿ ಮನ ಮತ್ತು ಮಾನಸಿಕ ಒತ್ತಡಗಳನ್ನು ಸಹ ಕಡಿಮೆ ಮಾಡಿಕೊಳ್ಳಿ ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಸಂಜೀವ ವಿ. ಕುಲಕಣರ್ಿ ಅವರು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರೇಣುಕಾ ಕೆ. ಸುಕುಮಾರ ಅವರು ಪ್ರಾಸ್ತವಿಕವಾಗಿ ಮಾತನಾಡಿ, ಕ್ರೀಡೆಗಳು ಕೇವಲ ದೈಹಿಕವಾಗಿ ಅಲ್ಲದೆ ಮಾನಸಿಕವಾಗಿಯೂ ಸದೃಡತೆಯನ್ನು ತಂದುಕೊಡುವದಲ್ಲದೆ ಆತ್ಮಸ್ಥೈರ್ಯವನ್ನುಂಟುಮಾಡುತ್ತದೆ. ವಿಶೇಷವಾಗಿ ಸದಾ ಕೆಲಸದ ಒತ್ತಡದಲ್ಲಿದ್ದು, ಕಾರ್ಯಮಾಡುವ ಪೊಲೀಸರಿಗೂ ಕ್ರೀಡೆಯ ಅಗತ್ಯತೆ ಇದೆ. ನಮ್ಮಲ್ಲಿಯೂ ಹಲವರು ಪ್ರತಿಭಾವಂತರಿದ್ದು, ಅವರಿಗೆ ಮತ್ತು ಕ್ರೀಡಾಶಕ್ತಿ ಇರುವವರೆಗೆ ಇದೊಂದು ಒಳ್ಳೆಯ ವೇದಿಕೆಯಾಗಿದೆ. ಮೂರು ದಿನಗಳ ಕಾಲ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳಿಗೆ ಹಮ್ಮಿಕೊಂಡಿರುವ ವಿವಿಧ ಕ್ರೀಡಾ ಚಟುಚಟಿಕಗಳಲ್ಲಿ ಪೊಲೀಸ್ ಕ್ರೀಡಾ ಪಟುಗಳಲ್ಲಿ ಅಡಗಿದ ಪ್ರತಿಭೆಯು ಹೊರಹೋಮ್ಮಲಿದೆ. ವಿಜೇತ ಕ್ರೀಡಾ ಪಟುಗಳಿಗೆ ಮತ್ತು ತಂಡಗಳಿಗೆ ಬಹುಮಾನ, ಪ್ರಶಸ್ತಿ ಪತ್ರಗಳನ್ನು ನೀಡಲಾಗುವುದು. ಈ ಕ್ರೀಡಾ ಕೂಟವನ್ನು ಪ್ರತಿ ವರ್ಷ ಹಮ್ಮಿಕೊಳ್ಳುಲಾಗುತ್ತದೆ ಎಂದರು.
ಕೊಪ್ಪಳ ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿ ಮತ್ತು ಸಿಬ್ಬಂದಿಗಳು ಹಾಗೂ ಕ್ರೀಡಾಪಟುಗಳು ಇದೇ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಆರ್.ಪಿ.ಐ ಪೊಲೀಸ್ ಗಣೇಶ್ ಕಾರ್ಯಕ್ರಮ ನಿರೂಪಿಸಿದರು. ಕೊಪ್ಪಳ ಡಿಎಸ್ಪಿ ಎಸ್.ಎಂ. ಸಂಧಿಗವಾಡ ಕೊನೆಯಲ್ಲಿ ವಂದಿಸಿದರು.