ಮುಗಳಖೋಡ 07: ಪ್ರಪಂಚದಲ್ಲಿಯೇ ಭಾರತೀಯ ಸಂಸ್ಕೃತಿಗೆ ಒಂದು ವಿಶೇಷವಾದ ಸ್ಥಾನ ನೀಡಲಾಗಿದೆ. ಇಂದು ಭಾರತ ವೈವಿಧ್ಯತೆಯಿಂದ ಕೂಡಿದ ದೇಶವಾಗಿದ್ದು, ವಿವಿಧ ಧಮರ್ಾಚರಣೆಗಳುನ್ನು ಒಳಗೊಂಡಿದೆ. ಭಾರತವು ಧಾಮರ್ಿಕ ತಳಹದಿಯಿಂದ ಕೂಡಿದ ಜಗತ್ತಿನ ಏಕೈಕ ಜಾತ್ಯಾತೀತ ರಾಷ್ಟ್ರವಾಗಿದ್ದು, ಇಲ್ಲಿ ಎಲ್ಲ ಧರ್ಮದವರು ಶಾಂತಿ ನೆಮ್ಮದಿಗಾಗಿ ಜಗತ್ತಿನ ಉದ್ಧಾರಕ್ಕಾಗಿ ಕಾಲಕಾಲಕ್ಕೆ ಮಹಾನ ಪುರುಷರು ಹುಟ್ಟುತ್ತಲೆ ಇರುತ್ತಾರೆ. ಹಾಗಾಯೇ ಜೈನ ಧರ್ಮದ ಪ್ರಮುಖರಾದ ಮೂಲನಾಯಕ ಭ. ಮಹಾವೀರ ತೀರ್ಥಂಕರ ಅವತಾರವು ಕೂಡಾ ಒಂದಾಗಿದೆ ಎಂದು ಜಿ.ಪಂ ಮಾಜಿ ಸದಸ್ಯ ಡಾ.ಸಿ.ಬಿ.ಕುಲಿಗೋಡ ಅವರು ಹೇಳಿದರು.
ಅವರು ಮುಗಳಖೋಡ ಪಟ್ಟಣದ ನೀರಲಖೋಡಿ ತೋಟದಲ್ಲಿ ನಿಮರ್ಾಣಗೊಂಡ ನೂತನ ಜೀನಮಂದಿರದಲ್ಲಿ ಮದ್ಧೇವಾದಿದೇವ ಶಾಂತಿನಾಥ ತೀರ್ಥಂಕರರ ಜಿನಬಿಂಬ ಮತ್ತು ಮಾನಸ್ಥಂಭ ಚತುಮರ್ುಖ ಜಿನಬಿಂಬ ಪಂಚಕಲ್ಯಾಣ ಪೂಜಾ ಪ್ರತಿಷ್ಠಾ ಮಹಾಮಹೋತ್ಸವ ಕಾರ್ಯಕ್ರಮದ ಉದ್ಘಾಟಣೆಯ ಸಮಾರಂಭದ ದಿವ್ಯ ಜ್ಯೋತಿಯನ್ನು ಬೆಳಗಿಸಿ ಸಮಾರಂಭಕ್ಕೆ ಚಾಲನೆ ನೀಡಿ ಇಂತಹ ಧರ್ಮ ಪರಂಪರೆ ಶ್ರೇಷ್ಠವಾದದ್ದು, ಇಂದು ನಡೆಯುತ್ತಿರುವ ಕಾರ್ಯಕ್ರಮ ನಮ್ಮ ನಾಡಿನಲ್ಲಿಯೇ ವಿಶೇಷವಾದ ಸಮಾರಂಭವಾಗಿದೆ ನಮ್ಮ ಪಟ್ಟಣದ ಹಾಗೂ ಸುತ್ತಮುತ್ತಲಿನ ಗ್ರಾಮಸ್ತರು ಪಾಲ್ಗೊಂಡು ಜಿನಾಶಿವರ್ಾದವನ್ನು ಪಡೆದುಕೊಳ್ಳಬೇಕೆಂದು ಹೇಳಿದರು.
ಸಮಾರಂಭದವು ಶಾಂತಮೂತರ್ಿ ಆರ್ಷ ಪರಂಪರೆ ರಕ್ಷಕ ಆಚಾರ್ಯ ದೇವಸೇನ ಮುನಿ ಮಹಾರಾಜರ ಸ.ಸಂಘ ಸಾನಿಧ್ಯದಲ್ಲಿ ನೇತೃತ್ವದಲ್ಲಿ ಜರುಗಿತು.
ಪಂಚಕಲ್ಯಾಣ ಮಹಾಮಹೋತ್ಸವದ ಮಾಂಗಲಿಕ ಕಾರ್ಯಕ್ರಮದ ಭವ್ಯವಾದ ಸಮಾರಂಭದಲ್ಲಿ ಮೊದಲನೇ ದಿನ ರವಿವಾರ ದಿ. 07 ರಂದು ಮುಂಜಾನೆ ನಾಂದಿಮಂಗಲ ಯಜಮಾನ ಆಗಮನ ನೇಮಣ್ಣ ಬಾಬನ್ನವರ ಅವರ ಮನೆಯಿಂದ ಭವ್ಯ ಮೆರವಣಿಗೆ ಪ್ರಾರಂಭವಾಗಿ ಆನೆಯ ಮೆರವಣಿಗೆ, ಕುದುರೆ ಮೆರವಣಿಗೆಯೊಂದಿಗೆ ಮಹಾಮಂಟಪವನ್ನು ತಲುಪಿದರು. ನಂತರ ಆಚಾರ್ಯ ನಿಯಂತ್ರಣ, ಇಂದ್ರ ಪ್ರತಿಷ್ಠಾ, ಕಂಕಣ ಬಂಧನ, ಧ್ವಜಾರೋಹಣ, ಮಂಟಪ ಉದ್ಘಾಟಣೆ, ನವಗ್ರಹ ಹೋಮ, ಆನೆಯ ಮೇಲಿಂದ ಮಂಗಲ ಕಲಶ ತರುವುದು, ಯಾಗ ಮಂಡಲ ಆರಾಧನೆ, ಚತು: ದಿಕ್ಷು ಹೋಮ, ಧಾಮ ಸಂಪ್ರೋಕ್ಷಣ ವಾಸ್ತು ವಿಧಾನ ಜರುಗಿದವು.
ಮಧ್ಯಾಹ್ನ ಸಮಯದಲ್ಲಿ ಮಂಗಲ ಪ್ರವಚನ, ವ್ಯಾಖ್ಯಾನ ಸವಾಲ, ಪಂಚಕುಂಭ ವಿನ್ಯಾಸ, ಭೇರಿತಾಡನ ಸಮಾರಂಭಗಳು ನಡೆದವು. ಸಂಜೆ ವೇಳೆಗೆ ಮೃತ್ತಿಕಾ ಸಂಗ್ರಹ ಅಂಕುರಾರೋಹಣ, ಶಾಂತಿಹೋಮ, ಮಾತಾ ಪಿತಾ ಆಗಮನ, ಭದ್ರಕುಂಭ ತರುವುದು ಕಾರ್ಯಕ್ರಮಗಳು ಜರುಗಿದವು.
ನಂತರ ರಾತ್ರಿ ವೇಳೆ ಇಂದ್ರಸಭೆ ಗಭಾವತರಣ ಕಲ್ಯಾಣ ಕಾರ್ಯಕ್ರಮ, 16 ಸ್ವಪ್ನದರ್ಶನ ರತ್ನ ವೃಷ್ಠಿ ಸಾಂಸ್ಕೃತಿಕ ಕಾರ್ಯಕ್ರಮ ಜಾಪ್ಯ ಆರತಿ ಕಾರ್ಯಕ್ರಮಗಳು ನೆರವೇರಿದವು.
ಈ ಎಲ್ಲ ಕಾರ್ಯಕ್ರಮಗಳು ಸಮಾಧಿ ಸಾಮ್ರಾಟ ಶ್ರಮನರತ್ನ ಆಚಾರ್ಯ ಸುಬಲಸಾಗರ ಮುನಿ ಮಹಾರಾಜರ ಪರಮ ಶಿಷ್ಯರಾದ ಪ.ಪೂ. ಶಾಂತಮೂತರ್ಿ ಆರ್ಷ ಪರಂಪರೆ ರಕ್ಷಕ ಆಚಾರ್ಯ ದೇವಸೇನ ಮುನಿ ಮಹಾರಾಜರು. ಆಯರ್ಿಕಾರತ್ನ ಅಜೀತಮತಿ ಮಾತಾಜೀ, ಆಯರ್ಿಕಾರತ್ನ ಸುಮತಿಮತಿ ಮಾತಾಜೀ, ಆಯರ್ಿಕಾ ಸುವರ್ಣಮತಿ ಮಾತಾಜೀ ಹಾಗೂ ಅನೇಕ ತ್ಯಾಗವೃಂಧ ಮತ್ತುಭಟ್ಟಾರಕರ ಸಾನಿಧ್ಯದಲ್ಲಿ ಮತ್ತು ಅನೇಕ ವಿದ್ವಜ್ಞನರ ಸಮ್ಮುಖದಲ್ಲಿ ಎಲ್ಲ ಕಾರ್ಯಕ್ರಮಗಳು ಜರುಗಿದವು.
ಹಿರಿಯರಾದ ಭೀಮಪ್ಪ ಬಾಬನ್ನವರ, ರಾವಸಾಬ ಬಾಬನ್ನವರ, ಬಸಪ್ಪ ಬಾಬನ್ನವರ, ಪ್ರಕಾಶ ಆದಪ್ಪಗೋಳ, ಸಂಜಯ ಕುಲಿಗೋಡ, ಪರಗೌಡ ಖೇತಗೌಡರ, ಹಣಮಂತ ಬಾಬನ್ನವರ, ಜಿನ್ನಪ್ಪ ಮೇಕನಮರಡಿ, ಯಮನಪ್ಪ ಬಾಬನ್ನವರ, ಶ್ರೀಮಂತ ಬಾಬನ್ನವರ, ನೇಮಣ್ಣ ಹುಲ್ಲೋಳ್ಳಿ, ಧನಪಾಲ ಬಾಬನ್ನವರ, ಹಣಮಂತ ಮೇಕನಮರಡಿ, ರಾಜೇಂಧ್ರ ಬಾಬನ್ನವರ, ರಾಯಪ್ಪ ಬಾಬನ್ನವರ, ಕಲ್ಲಪ್ಪ ಆದಪ್ಪಗೋಳ, ಸುರೇಂದ್ರ ಆದಪ್ಪಗೋಳ, ಹಣಮಂತ ವಡ್ರಾಳೆ, ಬುಜಪ್ಪ ಬಾಬನ್ನವರ, ಭಗವಂತ ಆದಪ್ಪಗೋಳ, ಉದಯ ಇದರಗುಚ್ಚಿ ಹಾಗೂ ಪಂಚಕಲ್ಯಾಣ ಪೂಜಾ ಮಹಾಮಹೋತ್ಸವ ಸಮಿತಿ ಎಲ್ಲ ಸದಸ್ಯರು ಹಾಗೂ ವಿವಿಧ ಗ್ರಾಮಗಳಿಂದ ನೂರಾರು ಆಗಮಿಸಿದ ಶಾವಕ ಹಾಗೂ ಶ್ರಾವಿಕೆಯರು ಪಾಲ್ಗೊಂಡಿದ್ದರು.