ಇಂಡಿ 18:ಬಾಗಲಕೋಟ ತಾಲೂಕಿನ ಹುನಗುಂದದಲ್ಲಿ ನಡೆಯುತ್ತಿರುವ ಲಿಂಗಾಯತ ಪಂಚಮಸಾಲಿ ಸಮಾಜದ ಸಮಾವೇಶಕ್ಕೆ ಇಂಡಿ ತಾಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿಯಾಗಬೇಕೆಂದು ಲಿಂಗಾಯತ ಪಂಚಮಸಾಲಿ ನಗರಘಟಕದ ಅಧ್ಯಕ್ಷ ಸೋಮಶೇಖರ ದೇವರ ಹೇಳಿದರು.
ಪಟ್ಟಣದ ಬಸವೇಶ್ವರ ವೃತ್ತದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮನವರ ಜ್ಯೋತಿ ಯಾತ್ರೆ ವಾಹನಕ್ಕೆ ಪೂಜಾ ಕಾರ್ಯಕ್ರಮ ನೆರವೇರಿಸಿ ಸ್ವಾಗತಿಸಿ ಮಾತನಾಡಿದರು.
ರಾಜ್ಯದಲ್ಲಿ ಅತ್ಯಧಿಕ ಜನ ಸಂಖ್ಯೆ ಹೊಂದಿದ ಲಿಂಗಾಯತ ಪಂಚಮಸಾಲಿ ಸಮುದಾಯದ ಶಕ್ತಿ ಪ್ರದರ್ಶನ ನಡೆಯುತ್ತಿದ್ದು ಸಮಾಜದ ಬಾಮಧವರು ಹೆಚ್ಚಿನ ಸಂಖ್ಯೆಯಲ್ಲಿ ಹುನಗುಂದದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಸಮಾಜ ಬಾಂಧವರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಬಸವ ಸಮೀತಿ ಅಧ್ಯಕ್ಷ ಅನೀಲಗೌಡ ಬಿರಾದಾರ, ಬುದ್ದುಗೌಡ ಪಾಟೀಲ, ಭೀಮಾಶಂಕರ ಪ್ರಚಂಡಿ, ಅರುಣ ಕುಸುಗಲ್, ಶರಣಗೌಡ ಬಂಡಿ, ನಿಂಗನಗೌಡ ಬಿರಾದಾರ, ಈರಣ್ಣ ಮುಜಗೊಂಡ, ಅನೀಲ ಬಿರಾದಾರ, ವಿಜಯ ಪಾಟೀಲ, ಶ್ರೀಶೈಲ ಕೋರಳ್ಳಿ, ಪ್ರಶಾಂತ ಬಿರಾದಾರ, ಸಂತೋಶ ದೇವರ ಮತ್ತಿತರರು ಇದ್ದರು