ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಸಮಾರೋಪ

Panchakalyana Pratistha Mahotsava concludes

ಪಂಚಕಲ್ಯಾಣ ಪ್ರತಿಷ್ಠಾ ಮಹೋತ್ಸವ ಸಮಾರೋಪ  

ಯಮಕನಮರಡಿ 10: ಇಂದಿನ ಆಧುನಿಕ ಯುಗದಲ್ಲಿ ಮಕ್ಕಳಲ್ಲಿ ಆಧ್ಯಾತ್ಮಿಕ ಪೂಜಾ ಸಮಾರಂಭಗಳು ಮೂಡಿದಲ್ಲಿ ಮಾತ್ರ ಆಧ್ಯಾತ್ಮಿಕ ಉಳಿಯಲು ಸಾಧ್ಯ. ಇಂತಹ ಪುಣ್ಯಮಯ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ನನಗೆ ಅವಕಾಶ ಸಿಕ್ಕಿದ್ದು ಸಂತೋಷವನ್ನುಂಟು ಮಾಡಿದೆ. ಇಲ್ಲಿ ಕೂಡಿದ್ದ ಎಲ್ಲ ಹೆಣ್ಣುಮಕ್ಕಳು ಶೃಂಗಾರದೊಂದಿಗೆ ಭಗವಾನ ಪಾರ್ಶ್ವನಾಥರ ಸ್ಮರಣೆಯಲ್ಲಿ ಪಾಲ್ಗೋಂಡು ಪುನೀತರಾಗಿದ್ದಾರೆ ಎಂದು ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಹೇಳಿದರು.ಅವರು ಹುಕ್ಕೇರಿ ತಾಲೂಕಿನ ಉ ಖಾನಾಪುರ ದಿ.3ರಿಂದ 9ರವರೆಗೆ ಜರುಗಿದ ಪ್ರತಿಷ್ಠಾನ ಮಹೋತ್ಸವ ಸಮಾರಂಭದ ಸಮಾರೋಪ ಕಾರ್ಯಕ್ರಮದಲ್ಲಿ ಪಾಲ್ಗೊಂಡು  ಶುಭಕೋರುವುದರೊಂದಿಗೆ ಸನ್ಮಾನ ಸ್ವೀಕರಿಸಿ ಮಾತನಾಡಿದರು. 

ದಿವ್ಯ ಸಾನಿದ್ಯ ವಹಿಸಿದ್ದ ವಾತ್ಸಲ್ಯ ವಾರಿಧಿ ಧರ್ಮಕೇಸರಿ ಆಚಾರ್ಯ ಜಿನಸೇನ ಮುನಿ ಮಹಾರಾಜರ ಆಶೀರ್ವಾದವು ನಮಗೂ ಇರಲೆಂದು ಬೇಡಿಕೊಂಡರು. ಉತ್ಸವ ಕಮೀಟಿ ಅಧ್ಯಕ್ಷರು ಉಪಾಧ್ಯಕ್ಷರು, ಶ್ರಾವಕ ಶ್ರಾವಕಿಯರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ವಿಗೊಳಿಸಿದರು. ಹೆಲಿಕಾಪ್ಟರ ಮೂಲಕ ಪುಷ್ಪವೃಷ್ಠಿ ಮಾಡಲಾಯಿತು.