ಹಗರಿಬೊಮ್ಮನಹಳ್ಳಿ29: ತಾಲೂಕಿನ ಹಿರಿಯ ರಂಗಕಮರ್ಿ ಕೋಗಳಿ ಪಂಪಣ್ಣರಿಗೆ ರಾಜ್ಯ ಸಕರ್ಾರ ರಂಗಭೂಮಿ ವಿಭಾಗದಲ್ಲಿ ಕನರ್ಾಟಕ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಇವರು 12 ನೇ ವರ್ಷದ ಬಾಲ್ಯದಿಂದಲೇ ರಂಗ ಪ್ರವೇಶಿಸಿ ಸ್ತ್ರೀ ಪಾತ್ರದಿಂದಲೇ ಪ್ರಖ್ಯಾತಿಗಳಿಸಿದವರು. ಪುಟ್ಟರಾಜ ಗವಾಯಿಗಳ ಶಿಷ್ಯರಾಗಿ, ಅಂಬಳಿ ದೇವರಾಜ ಗವಾಯಿಗಳ ಗರಡಿಯಲ್ಲಿ ತರಬೇತಿಯನ್ನು ಪಡೆದು ಪೌರಾಣಿಕ, ಸಾಮಾಜಿಕ ನಾಟಕಗಳ ಪಾತ್ರಗಳಿಗೆ ಜೀವ ತುಂಬಿದವರು.
ಬಳ್ಳಾರಿ ಜಿಲ್ಲೆಯ ಅಗ್ರಪಂಕ್ತಿಯ ಕಲಾವಿದರಾಗಿದ್ದು ಡಿ.ದುರ್ಗದಾಸ್ ವಿರಚಿತ ನಿರ್ಮಲ ಸಾಮಾಜಿಕ ನಾಟಕದಲ್ಲಿ ಭಾರತಿ ಸ್ತ್ರೀ ಪಾತ್ರದಿಂದ ವೃತ್ತಿ ಆರಂಭಿಸಿ, ದಶಕದವರೆಗೆ ಹೆಣ್ಣಿನ ಪಾತ್ರ ನಿರ್ವಹಿಸಿ ಪ್ರತಿಭೆ ಮೆರೆದವರು.
ಸೀತಾ ಸ್ವಯಂವರ ನಾಟಕದಲ್ಲಿ ಸೀತೆಯಾಗಿ, ಪ್ರಪಂಚ ಪರೀಕ್ಷೆ ನಾಟಕದಲ್ಲಿ ಚಂಪಕ ಹಾಗೂ ಭಾನುಮತಿಯಾಗಿ ಹೀಗೆ ಅಸಂಖ್ಯಾತ ಸ್ತ್ರೀ ಪಾತ್ರಗಳನ್ನು ಮಾಡಿ ರಂಗಾಸ್ತಕರ ಮನದಲ್ಲಿ ಅಚ್ಚಳಿಯದಂತೆ ಉಳಿದಿದ್ದಾರೆ.
ನಾಟಕ ರಚನೆ, ನಿದರ್ೇಶನ, ಸಿನಿಮಾ ನಟ, ಕವಿ, ಉತ್ತಮ ವಾಗ್ಮಿ ಹೀಗೆ ಬಹುಮುಖಪ್ರತಿಭೆಗಳಲ್ಲಿ ಗುರುತಿಸಿಕೊಂಡು ಇವರು, ರಕ್ತರಾತ್ರಿ, ಸಂಗ್ಯಾಬಾಳ್ಯ, ಅಂಗುಲಿಮಾಲ, ಅಣ್ಣತಮ್ಮ, ಮಾತಂಗ ಕನ್ಯೆ, ನಿರ್ಮಲ, ಪ್ರಪಂಚ ಪರೀಕ್ಷೆ, ಹರಿಶ್ಚಂದ್ರ, ಅಮ್ರಪಾಲಿ, ಕುರುಕ್ಷೇತ್ರ ಹೀಗೆ 85 ನಾಟಕಗಳಲ್ಲಿ ಬಣ್ಣ ಹಚ್ಚಿದ್ದಾರೆ.
321 ನಾಟಕಗಳನ್ನು ನಿದರ್ೇಶಿಸಿ, 500 ಕ್ಕೂ ಹೆಚ್ಚು ನಾಟಕಗಳನ್ನು ಪ್ರದರ್ಶನ ನೀಡಿದ್ದಾರೆ. 70 ನೇ ವಯಸ್ಸಿನಲ್ಲಿಯೂ ಕನರ್ಾಟಕದ ವಿವಿಧ ಭಾಗಗಳಲ್ಲಿ ನಾಟಕಗಳನ್ನು ನಿದರ್ೇಶಿಸಲು ಸದಾ ಸಿದ್ದರಿದ್ದಾರೆ.
ದೊರೆತ ಪ್ರಶಸ್ತಿಗಳು:1993 ರಲ್ಲಿ ಗುಲ್ಬಗರ್ಾ ವಿಭಾಗ ಮಟ್ಟದ ಅತ್ಯುತ್ತಮ ನಟ ಪ್ರಶಸ್ತಿ,2006 ರಲ್ಲಿ ನಾಟಕ ಕಲಾಭೂಷಣ ಪ್ರಶಸ್ತಿ, 2009 ರಲ್ಲಿ ಬಳ್ಳಾರಿ ರಾಘವ ಪ್ರಶಸ್ತಿ,ಮರಿಯಮ್ಮನಹಳ್ಳಿಯ ಲಲಿತ ಕಲಾರಂಗದಿಂದ ಅತ್ಯುತ್ತಮ ನಟ ಪ್ರಶಸ್ತಿ, ವಿಶ್ವಾಮಿತ್ರನ ಪಾತ್ರಕ್ಕೆ ವಿಶೇಷ ಪ್ರಶಸ್ತಿ, ರೌದ್ರನಟ ಪ್ರಶಸ್ತಿ, ಕಲಾಕಂಠೀರವ ಪ್ರಶಸ್ತಿಗಳು ಲಭಿಸಿವೆ ಎಂದು ತಿಳಿಸಿದ್ದಾರೆ.