ಲೋಕದರ್ಶನ ವರದಿ
ಸಿಂದಗಿ 19: ಚಿತ್ರಕಲೆಯು ಕೇವಲ ಕಲೆಯಾಗಿರದೇ ಅದು ಶಿಕ್ಷಣವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಹೇಳಿದರು.
ದಿ.18ರಂದು ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ಭವನದಲ್ಲಿ ಕನರ್ಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘ ಜಿಲ್ಲಾ ಘಟಕವು ಹಮ್ಮಿಕೊಂಡ 5ನೇ ಜಿಲ್ಲಾ ಮಟ್ಟದ ಚಿತ್ರಕಲಾ ಶಿಕ್ಷಕರ ಶೈಕ್ಷಣಿಕ ಸಮ್ಮೇಳನದ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.
ಮಕ್ಕಳ ಶೈಕ್ಷಣಿಕ ಮಟ್ಟ ಹೆಚ್ಚಿಸಲು ಚಿತ್ರಕಲೆಯು ಅತ್ಯಂತ ಪ್ರಯೋಜನಕಾರಿಯಾಗಿದೆ ಎಂದು ಶೈಕ್ಷಣಿಕ ಮನೋವಿಜಾನಿಯಗಳು ಒಪ್ಪಿದ್ದಾರೆ. ಚಿತ್ರಕಲೆಯು ಮಕ್ಕಳಲ್ಲಿ ರಚನಾತ್ಮಕ ಶಕ್ತಿ ಹೆಚ್ಚಿಸುತ್ತದೆ. ಆದರೆ ಶಿಕ್ಷಣ ಕ್ಷೇತ್ರದಲ್ಲಿ ಇಂದು ನಾವು ಚಿತ್ರಕಲೆಯ ಬಗ್ಗೆ ನಿರ್ಲಕ್ಷದೊರಣೆ ತೊರುತ್ತಿರುವುದು ವಿಷಾಧಕರ ಸಂಗತಿ ಎಂದು ವಿಷಾದಿಸಿದರು.
ಚಿತ್ರಕಲಾ ಶಿಕ್ಷಕರ ನೇಮಕಾತಿ ಆಗಬೇಕಾಗಿದೆ. ಚಿತ್ರಕಲಾ ಶಿಕ್ಷಣ ನಿರುಪಯುಕ್ತ ಎಂಬ ಮನೋಭಾವನೆ ಸಕರ್ಾರ ಹೊಂದಿದೆ. ಅದೇ ರೀತಿ ಪಾಲಕರಲ್ಲಿಯೂ ಮನೋಬಾವನೆ ಮುಡಿದೆ. ಚಿತ್ರಕಲಾ ಶಿಕ್ಷಕರ ನೇಮಕಾತಿಯಾಗಿಲ್ಲ, ವಿಷಯಕ್ಕೆ ಹೆಚ್ಚು ಪ್ರಾಧ್ಯಾನ್ಯತೆ ನೀಡುತ್ತಿಲ್ಲ. ಗೌರಸಿಗುತ್ತಿಲ್ಲ ಹೀಗೆ ಚಿತ್ರಕಲಾ ಶಿಕ್ಷಕರ ತೊಂದರೆ ಹೆಚ್ಚುತ್ತಿವೆ. ಚಿತ್ರಕಲಾ ಶಿಕ್ಷಣ ನಿರುಪಯುಕ್ತ ಎಂಬ ಮನೋಭಾವನೆ ಎಲ್ಲಿಯವರೆಗೆ ಹೋಗುವುದಿಲ್ಲವೋ ಅಲ್ಲಿಯವರೆಗೆ ಚಿತ್ರಕಲಾ ಶಿಕ್ಷಕರ ಸಮಸ್ಯೆಗಳಿಗೆ ಪರಿಹಾರ ಸಿಗುವುದಿಲ್ಲ. ಆದರೂ ಮುಂಬರುವ ದಿನಗಳಲ್ಲಿ ಚಿತ್ರಕಲಾ ಶಿಕ್ಷಕರ ಸಮಸ್ಯೆಗಳ ಬಗ್ಗೆ ಹೋರಾಟ ಕೈಕೊಳ್ಳಲಾಗುವುದು. ಚಿತ್ರಕಲಾ ಶಿಕ್ಷಕರ ಸಮಸ್ಯೆಗಳಿಗೆ ನಿಮ್ಮ ಧ್ವನಿಯಾಗಿ ಸದನದಲ್ಲಿ ಚಚರ್ಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ಸಧನದಲ್ಲಿ ಚಿತ್ರಕಲಾ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ಧ್ವನಿಯೆತ್ತಬೇಕು ಎಂದು ಚಿತ್ರಕಲಾ ಶಿಕ್ಷಕರು ವಿಧಾನ ಪರಿಷತ್ ಸದಸ್ಯ ಅರುಣ ಶಹಾಪೂರ ಅವರಿಗೆ ಮನವಿ ಸಲ್ಲಿಸಿದರು. ನಂತರ ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ ಅವರನ್ನು ಮತ್ತು ಚಿತ್ರಕಲೆಯಲ್ಲಿ ಸಾಧನೆ ಮಾಡಿದ ವಿದ್ಯಾಥರ್ಿಗಳಿಗೆ ಮತ್ತು ಚಿತ್ರಕಲಾ ಶಿಕ್ಷಕರಿಗೆ ಸನ್ಮಾನಿಸಿ ಗೌರವಿಸಿದರು. ಸ್ಥಳಿಯ ಪ್ರಗತಿ ನ್ಯಾಶನಲ್ ಆಟರ್್ ಪೌಂಡೇಶನ್ ಅವರಿಂದ 105 ಕಲಾಕೃತಿಗಳು ಹಾಗೂ ಕನರ್ಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದಿಂಧ 175 ಕಲಾಕೃತಿಗಳು ಪ್ರದರ್ಶನಗೊಂಡವು.
ಸವರ್ಾಧ್ಯಕ್ಷತೆ ವಹಿಸಿದ ವಿಶ್ರಾಂತ ಚಿತ್ರಕಲಾ ಶಿಕ್ಷಕ ಎಂ.ಆರ್.ಕಬಾಡೆ, ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ, ಕನರ್ಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ತಾಲೂಕಾ ಅಧ್ಯಕ್ಷ ಎಚ್.ಆರ್.ಘಂಟಿ, ಕನರ್ಾಟಕ ಲಲಿತಕಲಾ ಅಕಾಡೆಮಿ ಸದಸ್ಯ ಜಿ.ಎಸ್.ಪಾಟೀಲ, ಮಾಧ್ಯಮಿಕ ಶಾಲಾ ಶಿಕ್ಷಕರ ಸಂಘದ ಬೆಳಗಾವಿ ವಿಭಾಗಿ ಸಂಚಾಲಕ ಸಂತೋಷ ಹೂನಳ್ಳಿ ಅವರು ವೇದಿಕೆ ಮೇಲೆ ಇದ್ದರು. ಕನರ್ಾಟಕ ರಾಜ್ಯ ಚಿತ್ರಕಲಾ ಶಿಕ್ಷಕರ ಸಂಘದ ತಾಲೂಕಾ ಉಪಾಧ್ಯಕ್ಷ ಎಸ್.ಎಸ್.ಕೆಸರಿ, ಕಾರ್ಯದಶರ್ಿ ಎಸ್.ಎಸ್.ಗುಣಾರಿ, ವಿಜಯಕುಮಾರ ಪೂಜಾರಿ, ಖಜಾಂಚಿ ಮೀನಾಕ್ಷಿ ವಾಗ್ಮೋರೆ, ಸಂಘಟನಾ ಕಾರ್ಯದಶರ್ಿ ಎಸ್.ಬಿ.ಬಡಿಗೇರ, ಎಸ್.ಎಸ್.ಕುರುಮಲ್ ಸೇರಿದಂತೆ ವಿಜಯಪುರ ಜಿಲ್ಲೆಯ ವಿವಿಧ ಚಿತ್ರಕಲಾ ಶಿಕ್ಷಕರು ಭಾಗವಹಿಸಿ ತಮ್ಮ ಕಲಾಕೃತಿಗಳನ್ನು ಪ್ರದಶರ್ಿಸಿದರು.