ಲೋಕದರ್ಶನ ವರದಿ
ಸಿದ್ದಾಪುರ,30; ಇಂದು ಕೃಷಿ ಕಾರ್ಯವೆಂದರೇ ಅಸಡ್ಡೆ ತೋರುವವರೇ ಜಾಸ್ತಿ, ಆದ್ರೆ ಶ್ರಮಪಟ್ಟು ದುಡಿಯುವವರಿಗೇನು ಕಡಿಮೆಯಿಲ್ಲಾ. ಆದ್ರು ವರ್ಷದ ಕೊನೆಗೆ ಸರಿಯಾದ ಬೆಳೆ ಬರಲಿಲ್ಲವೆಂದು ಬಾಯಿ ಬಡಿದುಕೊಳ್ಳುವರೋಷ್ಟೋ ಮಂದಿ. ಆದ್ರೆ ಇಲ್ಲೋಂದು ವಿಚಿತ್ರ ಘಟನೆ ನಡೆದಿದೆ ಉತ್ತದೆ ಭಿತ್ತದೆ ಭತ್ತದ ಫಸಲು ತೆಗೆದಿದ್ದಾರೆ. ಇದು ತಾಲೂಕಿನ ಕಡಕೇರಿಯಲ್ಲಿ ರೈತರೋರ್ವರು ಉತ್ತದೆ ಭಿತ್ತದೆ ಬೆಳೆ ತೆಗೆದಿದ್ದಾರೆ.
ಕಡಕೇರಿಯ ನಾಟಿ ವೈದ್ಯ ಗೋವಿಂದ ಜಿ. ನಾಯ್ಕ ಮಘೇಗಾರು ಗ್ರಾಮದ ಅರ್ಧ ಎಕರೆ ಜಮೀನನ್ನು ತೋಟಮಾಡುವ ಉದ್ದೇಶದಿಂದ ಹಾಗೆ ಬಿಟ್ಟಿದ್ದರು. ಹಿಂದಿನ ಸಾಲಿನಲ್ಲಿ ಉದುರಿದ ಭತ್ತ ಹಾಗೂ ಕೂಳೆಯೇ ಸೊಗಸಾಗಿ ಬೆಳೆದು ಉತ್ತಮ ಫಸಲು ಬಂದಿತ್ತು. ಇಳುವರಿ ಚೆನ್ನಾಗಿರುವುದನ್ನು ಅರಿತ ಮಾಲಿಕರು ಕೆಲಸಾಗಾರರೊಂದಿಗೆ ಕಟಾವು ಮಾಡಿ ತಂದಿದ್ದಾರೆ. ಎಂಟು ಚೀಲ ಭತ್ತದ ನಿರೀಕ್ಷೆಯಲ್ಲಿದ್ದಾರೆ. ಇದು ಆಶ್ಚರ್ಯಕರವಾದ್ರು ಸತ್ಯ ಘಟನೆಯಾಗಿದ್ದು, ಊರಲ್ಲಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಅಚ್ಚರಿಯನ್ನುಂಟು ಮಾಡಿದೆ.
ಭೂತಾಯಿ ಕೊಡಬೇಕೆಂದರೇ ಯಾವುದಾದರು ರೂಪದಲ್ಲಿ ಕೊಡುತ್ತದೆ. ಭೂಮಿ ತಾಯಿ ತನ್ನ ಸಮತೋಲನ ಕಾಯ್ದುಕೊಳ್ಳುವುದನ್ನು ಮರೆತಿಲ್ಲ. ಈ ವರ್ಷ ವಿಪರೀತ ಮಳೆಯಾದ್ರು ತಕ್ಕ ಮಟ್ಟಿಗೆ ಬೆಳೆ ಬಂದಿರೋದು ಸಮಾದಾನ ತಂದಿದೆ.
ನಾವು ತೋಟ ಮಾಡುವ ಉದ್ದೇಶದಿಮದ ಹಾಗೇ ಬಿಟ್ಟಿದ್ದವಿ, ಉಳುಮೆಯು ಮಾಡಿಲ್ಲ. ಗೊಬ್ಬರ ಹಾಕಿಲ್ಲ. ನೀರು ಕಟ್ಟಿಲ್ಲ. ಗದ್ದೆ ಹೇಗಿದಾವೆ ಅಂತಾನು ನೋಡಿಲ್ಲ. ಭೂಮಿ ಹುಣ್ಣಿಮೆ ದಿನ ಚರಗ ಬೀರಲು ಹೋದಾಗ ನೋಡಿದಾಗ ನಮಗೆ ಆಶ್ಚರ್ಯವಾಯ್ತು. ಪೈರು ಚೆನ್ನಾಗಿ ಬಂದಿತ್ತು. ನಂತರ ಕಟಾವಿಗೆ ಬಂದ ಮೇಲೆ ಆರು ಜನರು ಕೊಯ್ದು ಮನೆಗೆ ತಂದು ರಾಶಿ ಮಾಡಿದ್ದೇವೆ ಅಂತಾರೆ ಗೋವಿಂದ ಜಿ. ನಾಯ್ಕ.