ಲೋಕದರ್ಶನ ವರದಿ
ಬೈಲಹೊಂಗಲ 17: ತಾಲೂಕಿನ ಬೆಳವಡಿ ಗ್ರಾಮದಲ್ಲಿ ಸುಮಾರು 300 ವರ್ಷಗಳಿಂದ ಪರಿಶಿಷ್ಠ ಜಾತಿ ಜನಾಂಗದ ಸ್ಮಶಾನವಿದ್ದು ಇದನ್ನು ಪಂಚಾಯಿತಿಯವರು ತೆರುವುಗೊಳಿಸಬೇಕೆಂದು ಒತ್ತಾಯ ಮಾಡುತ್ತಿದ್ದು ಈ ಸ್ಮಶಾನ ಜಾಗವನ್ನು ತೆರುವುಗೊಳಿಸದಿರಲು ಆಗ್ರಹಿಸಿ ಬೆಳವಡಿಯ ಪ.ಜಾ ಸಮಾಜದವರು ಬೆಳಗಾವಿಯ ಜಿಲ್ಲಾಧಿಕಾರಿಗಳಿಗೆ ಮನವಿ ಅಪರ್ಿಸಿದರು.
ಬೆಳವಡಿ ಗ್ರಾಮದ ಪ.ಜಾ. ಸಮಾಜದ ಸ್ಮಶಾನ ಭೂಮಿ ಇದ್ದು ಇದು ಸಕರ್ಾರಿ ಜಮೀನು ಇದ್ದು ಈ ಜಮೀನಿನ ರಿ.ಸನಂ. 132 ಇದ್ದು ಈ ಜಾಗೆಯ ಸುತ್ತಲೂ ತಂತಿ ಬೇಲಿ ಹಾಕಿದ್ದು ಈ ಸ್ಮಶಾನದಲ್ಲಿ ನಮ್ಮ ಪೂವರ್ಿಕರ ಶವಸಂಸ್ಕಾರ ಮಾಡಿದ್ದು ಈ ಸ್ಮಶಾನ ಜಾಗೆಯನ್ನು ಯಾವುದೇ ಕಾರಣಕ್ಕೂ ತೆರುವುಗೊಳಿಸಬಾರದು ಒಂದು ವೇಳೆ ಇದನ್ನೂ ಒತ್ತಾಯಪೂರ್ವಕವಾಗಿ ಸ್ತಳಾಂತರ ಮಾಡಿಸಿದರೆ ಬೆಳವಡಿ ಗ್ರಾಮದಲ್ಲಿ ಜಾತಿ ಸೌಹಾರ್ಧತೆಗೆ ಧಕ್ಕೆ ತಂದಂತಾಗುತ್ತದೆ ಎಂದು ಪ.ಜಾ. ಸಮಾಜದವರು ಜಿಲ್ಲಾ ಅಧಿಕಾರಿಗಳಿಗೆ ಮನವಿ ಸಲ್ಲಿಸಿದರು.
ಮಾದಿಗ ಸಮಾಜದ ಜಿಲ್ಲಾ ಅಧ್ಯಕ್ಷ ಯಲ್ಲಪ್ಪ ಕಗದಾಳ, ರಮೇಶ ರಾಯಪ್ಪಗೋಳ, ರಮೇಶ ಹುಲ್ಲೆನ್ನವರ, ಯಲ್ಲಪ್ಪ ಹುದಲಿ, ಯಲ್ಲೇಶ ಬಿಸಲಳ್ಳಿ, ಮಡಿವಾಳಪ್ಪ ಸಾವಂತ್ರಿ. ಗೋಪಾಲ ಸಾವಂತ್ರಿ, ಈರಪ್ಪ ಮರೆಪ್ಪನವರ, ಕರೆಪ್ಪ ಯಲಮೇತ್ರಿ, ಈರಪ್ಪ ಬಿಸಲಳ್ಳಿ, ಪಕ್ಕೀರ ಮದವಾಲ, ವಿಜಯ ಬಿಸಲಳ್ಳಿ, ಮಾರುದ್ರಪ್ಪ ಮರೆಪ್ಪನವರ, ತಳದಪ್ಪ ಕರಜನ್ನವರ, ಈರಣ್ಣ ಸಾವಂತ್ರಿ, ರಾಜು ಬಿಸಲಳ್ಳಿ, ಸನ್ನಪ್ಪ ಕರಜನ್ನವರ, ಯಲ್ಲಪ್ಪ ಸಾವಂತ್ರಿ, ಯಲ್ಲಪ್ಪ ಮಾದರ, ಮುದುಕಪ್ಪ ಶೆಟ್ಟೆಪ್ಪನವರ, ಈರಪ್ಪ ಕಾಪುರಿ ಸೇರಿದಂತೆ ಹಲವಾರು ಸಮಾಜದ ಯುವಕರು ಇದ್ದರು.