ನಮ್ಮ ಪ್ರದೇಶ ಸಾಂಸ್ಕೃತಿಕವಾಗಿ ಶ್ರೀಮಂತಿಕೆ ಹೊಂದಿದೆ : ಶಾಸಕ ಹೆಬ್ಬಾರ

ಲೋಕದರ್ಶನ ವರದಿ

ಯಲ್ಲಾಪುರ,27 : ನಮ್ಮ ಪ್ರದೇಶ ಸಾಂಸ್ಕೃತಿಕವಾಗಿ ಶ್ರೀಮಂತಿಕೆಯನ್ನು ಹೊಂದಿದೆ. ಯಾವ ಮಹಾನಗರಕ್ಕೂ ಕಮ್ಮಿ ಇಲ್ಲದಂತೆ ರಿಯಾಲಿಟಿ ಶೋ ಮಾದರಿಯಲ್ಲಿ  ತಾಲೂಕಿನಲ್ಲಿ ಆಯೋಜಿಸಿರುವ ಈ ಸ್ಪಧರ್ಾ ಕಾರ್ಯಕ್ರಮ ಯುವಕರಿಗೆ ಸ್ಪೂತರ್ಿದಾಯಕವಾದ್ದಾಗಿದೆ ಎಂದು ಶಾಸಕ ಶಿವರಾಮ ಹೆಬ್ಬಾರ್ ಹೇಳಿದರು.ಅವರು ರವಿವಾರ ರಾತ್ರಿ ಪಟ್ಟಣದ ಐ.ಬಿ.ಬಳಿಯ ಮಕ್ಕಳ ಉದ್ಯಾನವನದಲ್ಲಿ ವಿಷನ್ ಯಲ್ಲಾಪುರ ವಾಟ್ಸ್ಪ್ ಬಳಗ ಹಮ್ಮಿಕೊಂಡ ಜಿಲ್ಲಾ ಮಟ್ಟದ "ಡ್ಯಾನ್ಸ್ ಯಲ್ಲಾಪುರ ಡ್ಯಾನ್ಸ್" ಕಾರ್ಯಕ್ರಮಕ್ಕೆ ಗಿಡಕ್ಕೆ ನೀರುಣಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು.  

ಸಮಾಜದಲ್ಲಿ ಒಳ್ಳೆಯ ಚಿಂತನೆಯನ್ನು ಕೊಟ್ಟಾಗ, ಉತ್ತಮ ಸಮಾಜ ನಿಮರ್ಾಣವಾಗಲು ಸಹಕಾರಿಯಾಗುತ್ತದೆ.  ವಿದಾಯಕ ಕಾರ್ಯಗಳ ಮೂಲಕ ಸಮಾಜದ ಗಮನ ಸೆಳೆದ ವಿಷನ್ ಯಲ್ಲಾಪುರ ಬಳಗ ಕನ್ನಡ ನಾಡು ನುಡಿಯ ಉಳಿವಿಗಾಗಿ ಕನ್ನಡ ನೃತ್ಯ ಸ್ಪಧರ್ೆಯನ್ನು ಆಯೋಜಿಸಿರುವುದು ಶ್ಲಾಘನೀಯ ಎಂದರು.                  

 

      ಕಲಸರ್್ ಕನ್ನಡ ಚಾನಲ್ ಗಳ ವ್ಯವಹಾರ ಮುಖ್ಯಸ್ಥ ಪರಮೇಶ್ವರ ಗುಂಡ್ಕಲ್ ಮಾತನಾಡಿ,  ನಮ್ಮ ಮನೆಯ ಕಸಗಳನ್ನೂ ರಸ್ತೆಗೆ ಚೆಲ್ಲದೇ ಉತ್ತಮ ಪರಿಸರ ನಿಮರ್ಾಣಮಾಡಿಕೊಳ್ಳುವ ಹೊಣೆ ನಮ್ಮೆಲ್ಲರ ಮೇಲಿದೆ. ಸ್ವಚ್ಚತಾ ಅಭಿಯಾನದ ಕಲ್ಪನೆಯನ್ನಿಟ್ಟುಕೊಂಡ ಬಳಗ ನಿರಂತರ ಶ್ರಮದಾನದ ಮೂಲಕ ನೆರವೇರಿಸಿರುವುದು ಶ್ಲಾಘನೀಯ.   ಬಳಗದೊಂದಿಗೆ ಸೇರಿ ಕಲರ್ಸ ಚಾಲನ್ ಸಹಕಾರದೊಂದಿಗೆ ಉತ್ತಮ ಕಾರ್ಯಕ್ರಮ ಸಂಘಟಿಸುವ ಆಶಯವನ್ನು ಈ ಸಂದರ್ಭದಲ್ಲಿ ವ್ಯಕ್ತಪಡಿಸಿದರು. 

    ಸಂಕಲ್ಪ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಮೋದ ಹೆಗಡೆ ಮಾತನಾಡಿ,  ಸಾಂಸ್ಕೃತಿಕ ಮನಸ್ಸುಗಳನ್ನು ಕಟ್ಟುವ ಮೂಲಕ  ಇಲ್ಲಿನ ಸಾಂಸ್ಕೃತಿಕ ಲೋಕ ತೆರೆದಿಡುವ ಕಾರ್ಯವನ್ನು ವಿಷನ್ ಯಲ್ಲಾಪುರ ಬಳಗ ಮಾಡುತ್ತಿದೆ. ಎಂದರು.

     ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಭವ್ಯಾ ಶೆಟ್ಟಿ  ಮಾತನಾಡಿದರು. ಈ ಸಂದರ್ಭದಲ್ಲಿ ಪರಮೇಶ್ವರ ಗುಂಡ್ಕ್ಲ್, ಶಿವಮೊಗ್ಗಾದ ಪ್ರತಿಭಾ ರಂಗದ ಅಧ್ಯಕ್ಷ ಲಕ್ಷ್ಮಿಕಾಂತ, ಹುಬ್ಬಳ್ಳಿಯ ಮಮತೆಯ ಮಡಿಲು ಸಂಸ್ಥೆಯ ಮಾಲತೇಶ ದಂಪತಿಗಳನ್ನು ಸನ್ಮಾನಿಸಲಾಯಿತು.  ತಹಶೀಲ್ದಾರ ಡಿ.ಜಿ ಹೆಗಡೆ, ಕೆಪಿಸಿ ಸದಸ್ಯ ವಿಜಯ ಮಿರಾಶಿ, ಉದ್ಯಮಿಗಳಾದ ಬಾಲಕೃಷ್ಣ ನಾಯಕ,ಮುಂತಾದವರು ಉಪಸ್ಥಿತರಿದ್ದರು. ನೃತ್ಯ ಸ್ಪಧರ್ೆಯಲ್ಲಿ ಜಿಲ್ಲೆಯ 9 ತಂಡಗಳು  ಭಾಗವಹಿಸಿದ್ದವು.  ಶಿರಸಿಯ ಯುಥ್ ಡಾನ್ಸ್ ಗ್ರುಪ್ (ಪ್ರಥಮ), ಯಲ್ಲಾಪುರದ ಗ್ರಾಮದೇವಿ ಡಾನ್ಸ್ ಅಕಾಡೆಮಿ(ದ್ವೀತಿಯ), ಕಾರವಾರದ ಫಸ್ಟ ಸ್ಟೆಪ್ ಡಾನ್ಸ್ ಕ್ಲಾಸ್ (ತೃತೀಯ) ಸ್ಥಾನ ಪಡೆದುಕೊಂಡರು.