ಇನ್ನರ ವ್ಹೀಲ್ ರಜತ ಮಹೋತ್ಸವ, ಹಾಸ್ಯ ಕಲಾವಿದ ಪ್ರೋ.ಕೃಷ್ಣೇಗೌಡರಿಂದ ಉಪನ್ಯಾಸ

Other Wheel Silver Jubilee, lecture by comedian Prof. Krishna Gowda

ಇನ್ನರ ವ್ಹೀಲ್ ರಜತ ಮಹೋತ್ಸವ, ಹಾಸ್ಯ ಕಲಾವಿದ ಪ್ರೋ.ಕೃಷ್ಣೇಗೌಡರಿಂದ ಉಪನ್ಯಾಸ

ಅಥಣಿ  03: ಅಥಣಿ ಇನ್ನರ್ ವ್ಹೀಲ್ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಫೆ.8 ಶನಿವಾರದಂದು ಮಧ್ಯಾಹ್ನ 3 ಗಂಟೆಗೆ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ರಜತ ಮಹೋತ್ಸವ ವಿಶೇಷ ಕಾರ್ಯಕ್ರಮದಲ್ಲಿ ಇದೇ ಮೊದಲ ಬಾರಿಗೆ  ಖ್ಯಾತ ಕಿರುತೆರೆ ಹಾಸ್ಯ ಕಲಾವಿದ ಮೈಸೂರಿನ ಪ್ರೋ. ಕೃಷ್ಣೇಗೌಡರಿಂದ ಹಾಸ್ಯೋತ್ಸವ, ಸನ್ಮಾನ ಕಾರ್ಯಕ್ರಮ ಜರುಗಲಿದೆ ಎಂದು  ಇನ್ನರ್ ವ್ಹೀಲ್ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷೆ ಪೂರ್ಣಿಮಾ ಪಾಂಗಿ ತಿಳಿಸಿದರು.  ಅವರು ಸುದ್ದಿಗೋಷ್ಟಿಯಲ್ಲಿ ಮಾತನಾಡುತ್ತಿದ್ದರು. ಕಾರ್ಯಕ್ರಮವನ್ನು ಚಿಕ್ಕೋಡಿ ಲೋಕಸಭಾ ಸದಸ್ಯೆ ಕು.ಪ್ರಿಯಾಂಕಾ ಜಾರಕಿಹೊಳಿ ಉದ್ಘಾಟಿಸುವರು, ಮುಖ್ಯ ಅತಿಥಿಗಳಾಗಿ ಬಿಗ್ ಬಾಸ್ ಕಲಾವಿದ ಗೋಲ್ಡ ಸುರೇಶ ಆಗಮಿಸುವರು, ರೈತ ಮಹಿಳಾ ಸಾಧಕಿ ಶ್ರೀಮತಿ ಕವಿತಾ ಮಿಶ್ರಾ, ಮುಂಬೈ ಎ.ಸಿ.ಪಿ ಶಬಾನಾ ಶೇಖ್ ರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.      ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಅಧ್ಯಕ್ಷ ಅರುಣ ಸೌದಾಗರ, ಉದ್ಯಮಿ, ಪುರಸಭೆಯ ಮಾಜಿ ಅಧ್ಯಕ್ಷ ರಾವಸಾಹೇಬ ಐಹೊಳೆ ಉಪಸ್ಥಿತರಿರುವರು,  ಇದೇ ಸಂದರ್ಭದಲ್ಲಿ   ಸುಮಾ ಇವರಿಂದ ಮಾತನಾಡುವ ಗೊಂಬೆ ಹಾಗೂ ಮ್ಯಾಜಿಕ್ ಶೋ ಕೂಡ ಆಯೋಜಿಸಲಾಗಿದೆ ಎಂದರು.      

     ರೋಟರಿ ಕ್ಲಬ್ ಸಂಸ್ಥಾಪಕ ಅಧ್ಯಕ್ಷ ಗಜಾನನ ಮಂಗಸೂಳಿ ಮಾರ್ಗದರ್ಶನದಲ್ಲಿ ಪ್ರಾರಂಭಗೊಂಡ ಇನ್ನರ್ ವ್ಹೀಲ್ ಸಂಸ್ಥೆ ಅವರ ನೇತೃತ್ವದಲ್ಲಿಯೇ 25 ವರ್ಷಗಳವರೆಗೆ ಮುನ್ನಡೆದುಕೊಂಡು ಬಂದಿದೆ ಎಂದ ಅವರು ನಮ್ಮ ಸಂಸ್ಥೆಯ ರಜತ ಮಹೋತ್ಸವದ ಕಾರ್ಯಕ್ರಮವನ್ನೂ ಸಹ ಅವರ ನೇತೃತ್ವದಲ್ಲಿಯೇ ಮಾಡುತ್ತಿರುವುದು ನಮಗೆ ಹೆಮ್ಮೆಯ ವಿಷಯವಾಗಿದೆ ಎಂದರು.       ಇನ್ನರ್ ವ್ಹೀಲ್ ಸಂಸ್ಥೆಯ ಅಧ್ಯಕ್ಷೆ ತೃಪ್ತಿ ಕುಲಕರ್ಣಿ ಮಾತನಾಡಿ, ನಮ್ಮ ಸಂಸ್ಥೆಯ ರಜತ ಮಹೋತ್ಸವದ ಅಂಗವಾಗಿ ಒಂದು ವರ್ಷದ ಅವಧಿಯಲ್ಲಿ 25 ರಚನಾತ್ಮಕ, ಸಾಮಾಜಿಕ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ ಎಂದ ಅವರು ಈ ವಿಶೇಷ ಕಾರ್ಯಕ್ರಮಕ್ಕೆ ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಪಾಲ್ಗೊಂಡು ಶೋಭೆ ತರಬೇಕು ಎಂದು ಅಥಣಿ ಜನತೆಯಲ್ಲಿ ಮನವಿ ಮಾಡಿದರು.         ಸುದ್ದಿಗೋಷ್ಠಿಯಲ್ಲಿ ಇನ್ನರ್ ವ್ಹೀಲ್ ಸಂಸ್ಥೆಯ ಮಧುಶ್ರೀ ಮಂಗಸೂಳಿ, ಲಲಿತಾ ಮೇಕನಮರಡಿ, ಪ್ರಿಯಾ ಚಿಮ್ಮಡಿ, ಜಯಶ್ರೀ ಪೂಜಾರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.