ಸಂಘಟನೆಯ ಯಶಸ್ಸು ಚಲನೆಯಲ್ಲಿದೆ: ಡಾ. ಹೇಮಾ ಪಟ್ಟಣಶೆಟ್ಟಿ
ಬೆಳಗಾವಿ 17: ಕರ್ನಾಟಕ ಲೇಖಕಿಯರ ಸಂಘ ಪ್ರಾರಂಭವಾಗಿ ಒಂದು ವರುಷದಲ್ಲಿ ಯುವ ಬರಹಗಾರರಿಗೆ, ಲೇಖಕಿಯರಿಗೆ ಉಪಯುಕ್ತವಾಗುವ ಹಲವಾರು ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವದನ್ನು ಕೇಳಿದರೆ ಸಂಘಟನೆಯ ಯಶಸ್ವಿ ಚಲನೆಯಲ್ಲಿದೆ ಎಂದು ಡಾ. ಹೇಮಾ ಪಟ್ಟಣಶೆಟ್ಟಿ ಅವರು ಹೇಳಿದರು. ಕರ್ನಾಟಕ ಲೇಖಕಿಯರ ಸಂಘ ಜಿಲ್ಲಾ ಶಾಖೆ ಬೆಳಗಾವಿಯ ವಾರ್ಷಿಕೋತ್ಸವದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಲೇಖಕಿಯರು ತಮ್ಮ ಬರವಣಿಗೆಯಲ್ಲಿ ಮನುಷ್ಯ ಪ್ರಜ್ಞೆ, ಪರಿಸರ ಪ್ರಜ್ಞೆ ಮತ್ತು ಕನ್ನಡ ಪ್ರಜ್ಞೆಯನ್ನು ರೂಢಿಸಿಕೊಳ್ಳಬೇಕು ಎಂದು ಕರೆ ನೀಡಿದರು. ಇಂದು ಸಾಹಿತ್ಯ ಲೋಕದಲ್ಲಿ ವಿಮರ್ಶೆ ಮಲಗಿಕೊಂಡಿದೆ. ಎಲ್ಲಿಯವರೆಗೆ ವಿಮರ್ಶೆ ನೇರ ನಿಷ್ಠುರವಾಗುವದಿಲ್ಲ ಅಲ್ಲಿಯವರೆಗೆ ಬರವಣಿಗೆ ಗಟ್ಟಿಯಾಗಿವದಿಲ್ಲ ಎಂದರು. ಅಧ್ಯಕ್ಷತೆಯನ್ನು ವಹಿಸಿದ ಕರ್ನಾಟಕ ಲೇಖಕಿಯರ ಸಂಘದ ಜಿಲ್ಲಾ ಶಾಖೆಯ ಅಧ್ಯಕ್ಷೆ ಡಾ. ಕೆ.ಆರ್. ಸಿದ್ದಗಂಗಮ್ಮ ಅವರು ಸಮಾಜದಲ್ಲಿ ಇಂದು ಹಿಂಸಾರತಿ ಹೆಚ್ಚಾಗುತ್ತಿದೆ. ನಾವು ಓದುವದು ಬರೆಯುವುದು ಮನುಷ್ಯರಾಗಲಿಕ್ಕೆ ಆದರೆ ಅದನ್ನು ಕಳೆದಯಕೊಳ್ಳುತ್ತಿದ್ದೇವೆ. ಮಾನವೀಯ ಮೌಲ್ಯಗಳನ್ನು ಬೆಳೆಸಿ ಸಂಬಂಧ ಉಳಿಯುವ ನಿಟ್ಟಿನಲ್ಲಿ ಸೃಜನಶೀಲರಾಗಬೇಕಿದೆ ಎಂದರು. ಕರ್ನಾಟಕ ಲೇಖಕಿಯರ ಸಂಘವು ಈ ನಿಟ್ಟಿನಲ್ಲಿ ಹಾಕಿಕೊಂಡ ಕ್ರಿಯಾ ಯೋಜನೆಗಳ ಮೂಲಕ ಈ ಕೆಲಸವನ್ನು ಮಾಡಿದೆ ಎಂದರು. ಈ ವರ್ಷದಲ್ಲಿ ಲೇಖಕಿಯರನ್ನು ಡಿಜಿಟಲ್ ಸಬಲೀಕರಣ ಮಾಡುವ ಯೋಜನೆಗಳನ್ನು ಹಮ್ಮಿಕೊಳ್ಳಲಿದೆ ಎಂದು ಹೇಳಿದರು. ವಾರ್ಷಿಕೋತ್ಸವದ ಅಂಗವಾಗಿ ಡಾ. ಪ್ರಜ್ಞಾ ಮತಿಹತ್ತಿಯವರು ಯಕ್ಷಗಾನದ ಜ್ವಾಲಾ ಪ್ರಸಂಗವನ್ನು ಪ್ರಸ್ತುತ ಪಡಿಸಿದರು. ರೂಪಾ ಪ್ರಸಾದ ಪ್ರಾರ್ಥಿಸಿದರು, ಪ್ರೇಮಾ ತಹಶಿಲ್ದಾರ ಸ್ವಾಗತಿಸಿದರು. ಅಯವ್ಯಯವನ್ನು ನೀತಾ ರಾವ್ ಮಂಡಿಸಿದರು, ನಿರ್ಮಲಾ ಬಟ್ಟಲ ವಾರ್ಷಿಕ ವರದಿ ವಾಚನ ಮಾಡಿ ಕಾರ್ಯಕ್ರಮವನ್ನು ನಿರೂಪಿಸಿದರು. ರಾಜನಂದಾ ಗಾರ್ಗಿ ವಂದಿಸಿದರು. ಜ್ಯೋತಿ ಬದಾಮಿ, ಸುಮಾ ಕಿತ್ತೂರ, ಸುಧಾ ಪಾಟೀಲ, ಲಲಿತಾ ಕೊರೆ್ಡ, ದೀಪಿಕಾ ಚಾಟೆ, ಮೈತ್ರಾಯಿನಿ ಗದಿಗೆಪ್ಪ ಗೌಡರ, ಲಲಿತಾ ಕ್ಯಾಸನ್ನವರ, ಹೇಮಾ ಭರ್ಬರಿ ಲೇಖಕಿಯರ ಸಂಘದ ಜಿಲ್ಲಾ ಶಾಖೆಯ ಸದಸ್ಯರು ಇದ್ದರು.