ಅಡುಗೆ ಕೊಣೆಯಲ್ಲಿ ಸಿಸಿ ಕ್ಯಾಮರ ಅಳವಡಿಕೆಗೆ ವಿರೋಧ

ಲೋಕದರ್ಶನ ವರದಿ 

ಗಂಗಾವತಿ 18: ದೇಶದ 1265000 ಸಾವಿರ ಶಾಲೆಗಳಲ್ಲಿ 12 ಕೋಟಿ ಮಕ್ಕಳಿಗೆ 26 ಲಕ್ಷ ಮಹಿಳೆಯರು ಪ್ರತಿ ದಿನ ತಪ್ಪದೇ ಅಡುಗೆ ಮಾಡಿ ಊಟ ಬಡಿಸುತ್ತಿದ್ದಾರೆ.  ಅದೇ ರೀತಿ ಕರ್ನಾಟಕ

ರಾಜ್ಯದ 54389 ಶಾಲೆಗಳ 65 ಲಕ್ಷ ಮಕ್ಕಳಿಗೆ 1.18 ಲಕ್ಷ ಮಹಿಳೆಯರು ಪ್ರತಿ ನಿತ್ಯ ಅಡುಗೆ ಮಾಡಿ ಊಟ ಬಡಿಸುವುದರ ಜೊತೆಗೆ ಬೆಳೆಗ್ಗೆ 9 ಗಂಟೆಯಿಂದ ಮದ್ಯಾಹ್ನ 3 ಗಂಟೆಯವರೆಗೆ ಶಾಲೆಯ ಸ್ವಚ್ಚತೆ, ಮಕ್ಕಳ ಯೋಗ ಕ್ಷೇಮ ನೋಡಿಕೊಳ್ಳುವ ಮೂಲಕ ಪ್ರಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ.  ಇಂತಹ ಮಹಿಳಾ ನೌಕರರ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರ ನಿರ್ಲಕ್ಷವಹಿಸುತ್ತಿರುವುದು ಖಂಡನೀಯವಾಗಿದೆ.  ಅಡುಗೆ ಕೊಣೆಯಲ್ಲಿ ಸಿಸಿ ಕ್ಯಾಮಾರ ಅಳವಡಿಸಿರುವುದು ಅಡುಗೆ ಮಾಡುವ ನೌಕರರ ಮಹಿಳೆಯರಿಗೆ ತೀವ್ರ ಮುಜುಗರವಾಗುದೆ.  ಈ ಪದ್ಧತಿಯನ್ನು ರದ್ದುಪಡಿಸಬೇಕೆಂದು ಕರ್ನಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘದ ರಾಜ್ಯಾಧ್ಯಕ್ಷೆ ಲಕ್ಷ್ಮೀದೇವಿ ಸೋನಾರ, ರಾಜ್ಯ ಪ್ರಧಾನ ಕಾರ್ಯದಶರ್ಿ ಮಾಲಿನಿ ಮೇಸ್ತ ಅಗ್ರಹಿಸಿದ್ದಾರೆ. 

ಶನಿವಾರ ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿ ನಡೆಸಿ ಅವರು ಮಾತನಾಡಿದರು.  ಎಲ್ಲಾ ಸರಕಾರಿ ಶಾಲೆಗಳಲ್ಲಿ ಶಿಕ್ಷಕರ ಹೇಳುವ ಕೆಲಸ ಕಾರ್ಯಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿಕೊಂಡು ಮತ್ತು ಮಕ್ಕಳ ಬಗ್ಗೆ ಅಪಾರ ಕಾಳಜಿ ಹೊಂದಿ ಅಡುಗೆ ನೌಕರರು ಶುದ್ಧ ಮತ್ತು ಸುಚಿತ್ವದ ಅಡುಗೆ ಸಿದ್ಧಪಡಿಸುತ್ತಿದ್ದಾರೆ. ಆದರೆ ಯಾವುದೋ ಒಂದು ಶಾಲೆಯಲ್ಲಿ ನಡೆದ ದುರ್ಘಟನೆಯನ್ನೆ ದೊಡ್ಡದು ಮಾಡಿಕೊಂಡು ಎಲ್ಲಾ ಸರಕಾರಿ ಶಾಲೆಗಳ ಅಡುಗೆ ಕೊಣೆಯಲ್ಲಿ ಸಿಸಿ ಕ್ಯಾಮಾರ ಅಳವಡಿಸಲಾಗುತ್ತಿದೆ.  ಇದು ಈಡಿ ಅಡುಗೆ ಮಾಡುವ ಮಹಿಳೆಯರನ್ನೇ ಸಂಶಯಸಿದಂಗಾತ್ತದಲ್ಲದೇ ಸಿಸಿ ಕ್ಯಾಮಾರದಿಂದ ಮಹಿಳೆಯರ ಮಾನ ಮರ್ಯಾದಗೆ ಧಕ್ಕೆ ತರುವಂತದ್ದಾಗಿದೆ.  ಹೀಗಾಗಿ ಕೊಣೆಯಲ್ಲಿ ಸಿಸಿ ಕ್ಯಾಮಾರ ಅಳವಡಿಸುವ ಕೆಲಸ ಸ್ಥಗಿತಗೊಳಿಸಬೇಕು.  ಮತ್ತು ಕೇಲವ ರೂ. 2700ಗೆ  8ಗಂಟೆಕಾಲ ದುಡಿಯುವ ಮಹಿಳೆಯರಿಗೆ ಕನಿಷ್ಟ ವೇತನ ನೀಡಬೇಕು. ಕೇಂದ್ರ ಸರಕಾರ ಸಬ್ ಕಾ ಸಾತ್ ಸಬ್ ಕೋ ವಿಕಾಸ, ಭೇಟಿ ಬಚಾವೋ, ಭೇಟಿ ಪಡಾವೋ, ಅಚ್ಚೇದಿನ, ಬಡ ಮಹಿಳೆಯರಿಗೆ ವಿಶೇಷ ಸೌಲಭ್ಯ ಕೊಡುವ ಭರವಸೆ ನೀಡುತ್ತವೆ.  ಆದರೆ ಸರಕಾರದಡಿಯಲ್ಲಿ ದುಡಿಯುವ ದೇಶದ 26ಲಕ್ಷ ಮಹಿಳೆಯರಿಗೆ ಕನಿಷ್ಟ ವೇತನ ನೀಡದೇ ವಂಚಿಸುತ್ತಿದೆ.  ಇಂತಹ ನೀತಿಯನ್ನು ನಾವು ಖಂಡಿಸುತ್ತೇವೆ.  ಕೇಂದ್ರ ಮತ್ತು ರಾಜ್ಯ ಸರಕಾರಗಳು ನಮ್ಮ ನೌಕರರಿಗೆ ಸರಿಯಾಗಿ ವೇತನ ನೀಡಬೇಕು.  ಸಾಮಾಜಿಕ ಭದ್ರತೆಗಾಗಿ ಪೇನ್ಸನ್ ಕೊಡಬೇಕು. ಡಿ ಗ್ರೂಪ್ ನೌಕರರೆಂದು ಪರಿಗಣಿಸಿ ಸರಕಾರಿ ನೌಕರರಿಗೆ ನೀಡುವ ಹಬ್ಬದ ರಜೆ, ಹೆರಿಗೆ ರಜೆ ಮತ್ತಿತರ ಸೌಲಭ್ಯ ನೀಡಬೇಕು.  ನಮ್ಮ ಬೇಡಿಕೆಯನ್ನು ಈಡೇರಿಸುವಂತೆ ಸಾಕಷ್ಟು ಭಾರಿ ಸರಕಾರಕ್ಕೆ ಅಗ್ರಹಿಸಿದ್ದೇವೆ.  ಮತ್ತೆ ಹೋರಾಟ ನಡೆಸಲು ನಾವು ಸಜ್ಜಾಗಿದ್ದೇವೆ ಎಂದರು. 

ಪತ್ರಿಕಾ ಗೋಷ್ಟಿಯಲ್ಲಿ ಬಿಸಿಯೂಟ ನೌಕರರ ಸಂಘದ ಕಾರಟಗಿ ತಾಲೂಕು ಅಧ್ಯಕ್ಷೆ ಗಂಗಮ್ಮ ಸಿದ್ಧಾಪುರ, ಖಜಾಂಚಿ ದುಗರ್ಾಬಾಯಿ, ಗಂಗಾವತಿ ತಾಲೂಕು ಘಟಕದ ಖಜಾಂಚಿ ಜಯಶ್ರೀ, ಕನಕಗಿರಿ ಅಧ್ಯಕ್ಷೆ ಶಾಂತಮ್ಮ ಇದ್ದರು.