201ನೇ ವಷರ್ಾಚರಣೆ ಮಾದರಿ ಸ್ಥಂಭ ಅನಾವರಣ ಉದ್ಘಾಟನಾ ಸಮಾರಂಭ

ಲೋಕದರ್ಶನ ವರದಿ

ಸಿಂದಗಿ 02:ಭೀಮಾ ಕೋರೆಗಾಂವ್ ವಿಜಯಸ್ಥಂಭದ ಇತಿಹಾಸ ನಾವೆಲ್ಲರೂ ಅರಿಯುವುದು ಅತ್ಯವಶ್ಯಕ ಎಂದು ತೋಟಗಾರಿಕೆ ಸಚಿವ ಎಂ.ಸಿ.ಮನಗೂಳಿ ಹೇಳಿದರು.

ಪಟ್ಟಣದ ಅಂಬೇಡ್ಕರ್ ವೃತ್ತದಲ್ಲಿ ಭೀಮಾ ಕೋರೆಗಾಂವ್ ವಿಜಯದ 201ನೇ ವಷರ್ಾಚರಣೆ ನಿಮಿತ್ತ ಮಾದರಿ ಸ್ಥಂಭ ಅನಾವರಣ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು. 1818 ರಂದು ನಡೆದ ಕೋರೆಗಾಂವ್ ಯುದ್ದದ ವಿಜಯೋತ್ಸವ ಸಿಂದಗಿ ಪಟ್ಟಣದಲ್ಲಿ ಆಚರಿಸುವ ಮೂಲಕ ಕೋರೆಗಾಂವ್ ವಿಜಯೋತ್ಸವದ ಇತಿಹಾಸ ಈ ಭಾಗದ ಜನತೆಗೆ ತಿಳಿಸಲು ಮುಂದಾದ ಯುವಕರ ಕಾರ್ಯ ಶ್ಲಾಘನಿಯ ಎಂದು ಹೇಳಿದರು.

1994 ರ ಅವಧಿಯಲ್ಲಿ ಸಿಂದಗಿ ಕ್ಷೇತ್ರದ ಶಾಸಕನಾದ ಸಂದರ್ಭದಲ್ಲಿ ಪಟ್ಟಣದಲ್ಲಿ ಅಂಬೇಡ್ಕರ್ ಮೂತರ್ಿ ಸ್ಥಾಪಿಸಬೇಕು ಎಂದು ಬೇಡಿಕೆ ಇಟ್ಟ ಸಂದರ್ಭದಲ್ಲಿ ನಾನು ಸ್ವತಃ ಮುಂದಾಗಿ ಅಂಬೇಡ್ಕರ್ ವೃತ್ತ ನಿಮರ್ಾಣ ಮಾಡಲಾಯಿತು. ಈ ವೃತ್ತದ ಪಕ್ಕದಲ್ಲಿ ಯುವಕರು ಭೀಮಾ ಕೋರೆಗಾಂವ್ ವಿಜಯಸ್ಥಂದ ಮಾದರಿ ಸ್ಥಂಬ ನಿಮರ್ಾಣ ಮಾಡಿ ಇತಿಹಾಸ ಯುವ ಜನಾಂಗಕ್ಕೆ ತಿಳಿಪಡೆಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ ಎಂದರು. ಕಲಬುರಗಿಯ ಕೇಂದ್ರಿಯ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಾಪಕ ಸೋಮಶೇಖರ ಅಪ್ಪಿಗೇರ ಮಾತನಾಡಿ, ನಮ್ಮೇಲ್ಲರ ಸ್ವಾಭಿಮಾನದ ಸಂಕೇತ, ಚಾರಿತ್ರಿಕ ಅರಿವನ್ನು ಮುಡಿಸಿದವರು ಡಾ.ಬಿ.ಆರ್.ಅಂಬೇಡ್ಕರ್ ಅವರು. ಪ್ರತಿಯೊಂದು ಕಾರ್ಯಕ್ರಮಗಳು ಆತ್ಮಾವಲೋಕನ ಮಾಡಿಕೊಳ್ಳುವ ಸಭೆಯಾಗಬೇಕು. ಸಿಂದಗಿ ಪಟ್ಟಣದಲ್ಲಿ ಭೀಮಾ ಕೋರೆಗಾಂವ್ ವಿಜಯಸ್ಥಂಭದ ಮಾದರಿ ಸ್ಥಂಭ ಸ್ಥಾಪನೆ ಮಾಡಿರುವುದು ಒಳ್ಳೆಯ ಸಂಗತಿ. ಕೋರೆಗಾಂವ್ದ ಇತಿಹಾಸವನ್ನು ಅರಿಯಬೇಕು ಆಗ ಕಾರ್ಯಕ್ರಮಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು.

ಪ್ರಜಾ ಪರಿವರ್ತನಾ ವೇದಿಕೆ ರಾಜ್ಯ ಉಪಾಧ್ಯಕ್ಷ ಪರಶುರಾಮ ಮಹಾರಾಜನವರ, ಅಹಿಂದ ಮುಖಂಡ ಎಸ್.ಎಂ.ಪಾಟೀಲ ಗಣಿಹಾರ, ಅಧ್ಯಕ್ಷತೆ ವಹಿಸಿದ ಪುರಸಭೆ ಸದಸ್ಯ ರಾಜಶೇಖರ ಕೂಚಬಾಳ, ಡಿಎಸ್ಎಸ್ ಜಿಲ್ಲಾ ಸಂಘಟನಾ ಸಂಚಾಲಕ ವಾಯ್.ಸಿ.ಮಯೂರ ಅವರು ಮಾತನಾಡಿದರು.

ಸಂಘಪಾಲ ಭಂತೇಜಿ ಅವರು ಸಾನಿಧ್ಯ ವಹಿಸಿದ್ದರು. ಶಿರಸ್ತೇದಾರ ಸುರೇಶ ಮ್ಯಾಗೇರಿ, ಬಿಎಸ್ಪಿ ರಾಜ್ಯ ಪ್ರಧಾನಕಾರ್ಯದಶರ್ಿ ದಸ್ತಗೀರ ಮುಲ್ಲಾ, ತಾಪಂ ಸದಸ್ಯರಾದ ಎಂ.ಎನ್.ಕಿರಣರಾಜ, ಲಕ್ಕಪ್ಪ ಬಡಿಗೇರ, ಅಶೋಕ ಸುಲ್ಪಿ, ಸಂಜಿವ ಯಂಟಮನ, ಶಿವಾಜಿ ಮೇಟಗಾರ, ರಾಜು ಗುಬ್ಬೇವಾಡ, ವಿರುಪಾಕ್ಷಿ ಗುಬ್ಬೇವಾಡ, ಸುನಂದಾ ಯಂಪೂರೆ, ಆನಂದ ಮಾಣಸೂಣಗಿ, ಶರಣು ಸಿಂಧೆ, ಸಚಿನ ಚೌರ, ಶ್ರೀಶೈಲ ಚಾಲವಾದಿ, ರವಿ ಹೋಳಿ, ಪರಶುರಾಮ ಕೂಚಬಾಳ, ಸಂತೋಷ ಮಣಗಿರಿ, ರನೇಶ ಬಿಸನಾಳ,ಗೋಪಿ ಬಡಿಗೇರ, ಬುದ್ದ ಧಮ್ಮ್ ಉಪಾಸಿಕಿಯರಾದ ಅನಿತಾ ಗಾಯಕವಾಡ, ಸುಜಾತಾ ಕೂಚಬಾಳ, ಪ್ರೇಮಾ ಯಲಗೋಡ, ಪೂಜಾ ಜಾಲವಾದ, ಸುವರ್ಣ ಮಾಣಸುಣಗಿ,   ಸೇರಿದಂತೆ ಜನಪ್ರತಿನಿಧಿಗಳು, ವಿವಿಧ ಸಮಾಜದ ಮುಖಂಡರು, ವಿವಿಧ ದಲಿತ ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸವರು. ಚಂದ್ರಶೇಖರ ಸಿಂಗೆ ಸ್ವಾಗತಿಸಿದರು. ಪ್ರೀಯಾಂಕಾ ಕೂಚಬಾಳ ನಿರೂಪಿಸಿದರು. ಸಾಯಬಣ್ಣ ಪುರದಾಳ ವಂದಿಸಿದರು.