ಕ್ರಿಯಾಶೀಲರಾಗಿದ್ದರೆ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯ: ಪ್ರೋ ಖಡಬಡಿ

ಬೆಳಗಾವಿ08: ಪ್ರತಿಯೊಬ್ಬರಿಗೂ ಆರೋಗ್ಯ ಮುಖ್ಯ. ಒಬ್ಬ ಮನುಷ್ಯ ಆರೋಗ್ಯವಾಗಿದ್ದರೆ ಇಡೀ ಕುಟುಂಬ ಆರೋಗ್ಯವಾಗಿರುತ್ತದೆ. ಇದರಿಂದ ಆರೋಗ್ಯಕರ ಸಮಾಜ ರೂಪುಗೊಳ್ಳುತ್ತದೆ ಹಾಗೂ ದೇಶದ ಪ್ರಗತಿ ಹೆಚ್ಚುತ್ತದೆ ಎಂದು ಪ್ರೋಪೇಸರ್ ಜಿ.ಕೆ.ಖಡಬಡಿ ವಿಶ್ವ ಆರೋಗ್ಯ ದಿನಾಚರಣೆ ನಿಮಿತ್ಯ ಆಯೋಜಿಸಿದ್ದ ಸಮಾರಂಭದಲ್ಲಿ ಹೇಳಿದರು. 

ಇಂದು ಬೆಳಗಾವಿ ನಗರದ ಮಹಿಳಾ ಬಿಎಡ್ ಕಾಲೇಜಿನಲ್ಲಿ ಫ್ಯಾಮಿಲಿ ಪ್ಲಾನ್ನಿಂಗ್ ಅಸೋಸಿಯೇಷನ್ ಆಫ ಇಂಡಿಯಾ ಬೆಳಗಾವಿ ವಿಭಾಗದ ವತಿಯಿಂದ ವಿಶ್ವ ಆರೋಗ್ಯ ದಿನಾಚರಣೆ ಸಮಾರಂಭ ಆಯೋಜಿಸಲಾಗಿತ್ತು. ಈ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಪ್ರೋ.ಜಿ.ಕೆ ಖಡಬಡಿ,ಫ್ಯಾಮಿಲಿ ಪ್ಲಾನ್ನಿಂಗ್ ಅಸೋಸಿಯೇಷನ್ ಆಫ ಇಂಡಿಯಾ ಬೆಳಗಾವಿ ವಿಭಾಗದ ಅಧ್ಯಕ್ಷೆ ಜಯಶ್ರೀ ಕೆಂಗೇರಿ ಆಗಮಿಸಿದ್ದರು. ಸಮಾರಂಭ ಉದ್ಘಾಟಿಸಿದರು. ನಂತರ ಮಾತನಾಡಿದ ಪ್ರೋ.ಜಿ ಕೆ ಖಡಬಡಿ ಅವರು ಆಧುನಿಕ ಜೀವನ ಶೈಲಿಯಲ್ಲಿ ಆರೋಗ್ಯ ಸಮಸ್ಯೆ ಪ್ರತಿಯೊಬ್ಬರು ಎದುರಿಸಬೇಕಾಗಿದೆ.ಇದರಿಂದ ಜೀವಕ್ಕೆ ಮಾರಕ ಆಗಿರುವ ರೋಗಗಳಿಗೆ ಬಹಳ ಜನರು ಬಲಿ ಆಗುತ್ತಿದ್ದಾರೆ.ಆರೋಗ್ಯ ಸರಿಯಾಗಿದ್ದರೆ ಜೀವನ ಸುಂದರವಾಗಿರುತ್ತದೆ. ಪ್ರತಿನಿತ್ಯ ಎಲ್ಲರೂ ಚಟುವಟಿಕೆಯಿಂದ ಇದ್ದರೆ ಮಾತ್ರ ಆರೋಗ್ಯವಂತರಾಗಬಹುದು ಎಂದರು. 

ಈ ಸಂದರ್ಭದಲ್ಲಿ ಬಿಎಡ್ ಕಾಲೇಜಿನ ಪ್ರಚಾರ್ಯರು ಶಿಕ್ಷಕರು ಸೇರಿದಂತೆ ವಿದ್ಯಾಥರ್ಿಗಳು ಉಪಸ್ಥಿತರಿದ್ದರು.