ಸಂವಿಧಾನ ಓದು ಅಭಿಯಾನದ ಒಂದು ದಿನದ ಕಾರ್ಯಗಾರ

ಲೋಕದರ್ಶನ ವರದಿ

ಸಿದ್ದಾಪುರ 12: ಸರಕಾರಿ ಪ್ರಥಮ ದಜರ್ೆ ಕಾಲೇಜ ಸಿದ್ದಾಪುರ(ಬೇಡ್ಕಣಿ), ಯುವ ರೆಡ್ಕ್ರಾಸ್ ಘಟಕ ,ಆಂತರಿಕ ಗುಣಮಟ್ಟ ಭರವಸೆ ಕೋಶ, ರಾಜ್ಯ ಶಾಸ್ತ್ರ ವಿಭಾಗ, ಕನ್ನಡ ವಿಭಾಗ ,ಎನ್ ಎಸ್ ಎಸ್ ಘಟಕ, ಸಹಯೋಗದಲ್ಲಿ ಸಂವಿಧಾನ ಓದು ಅಭಿಯಾನದ ಒಂದು ದಿನದ ಕಾಯರ್ಾಗಾರವು ...ಕಾಲೇಜು ಅಡಿಟೋರಿಯಂನಲ್ಲಿ ನಡೆಯಿತು.

       ಕಾರ್ಯಕ್ರಮ ಉದ್ಘಾಟಿಸಿದ ಸಮುದಾಯ ಕನರ್ಾಟಕ ಸಹಕಾರ್ಯದಶರ್ಿ, ಸಂವಿಧಾನ ಓದು ಅಭಿಯಾನದ ಸಂಚಾಲಕಿ ವಿಮಲಾ ಕೆ ಎಸ್ ಮಾತನಾಡಿ ಸಂವಿಧಾನದ ಮುಖ್ಯ ಆಶಯ ಸ್ವಾತಂತ್ರ್ಯ ,ಸಮಾನತೆ ,ಭ್ರಾತೃತ್ವ ಭೋಧಿಸುವುದಾಗಿದೆ, ಆಡಳಿತದಲ್ಲಿರುವ ಸಣ್ಣ ಪುಟ್ಟ ನೂನ್ಯತೆಗಳಿರುವುದರಿಂದ  ಸ್ವಾತಂತ್ರ್ಯ ,ಸಮಾನತೆ ,ಭ್ರಾತೃತ್ವ ಕೊಡಲಾಗುತ್ತಿಲ್ಲ, ಮನರಂಜನೆ ಜೊತೆಗೆ ದೇಶವನ್ನು ಸುಸ್ಥಿತಿಯಲ್ಲಿ ಸುಭದ್ರವಾಗಿಡಲು ಅಭಿವೃದ್ಧಿ ಪಥದಲ್ಲಿ ನಡೆಸಲು ಓದು ಚಿಂತನೆ ಆಗಬೇಕು, ಎಲ್ಲರೂ ಸಾಮರಸ್ಯದಿಂದ ಬದುಕಿದಾಗ ದೇಶವನ್ನು ನಿಜವಾದ ಪ್ರಗತಿಗೆ ಕೊಂಡ್ಯೊಯಲು ಸಾಧ್ಯ. ಮನೆಯಲ್ಲಿ ವಿವಿಧ ಧಾಮರ್ಿಕ ಆಚರಣೆಗಳಿದ್ದರು ಹೊರಗಡೆಗೆ ನಾವೆಲ್ಲರೂ ಭಾರತೀಯರೆಂದು ಬದುಕಬೇಕು, ರಾಜಕೀಯ ದಾಳವಾಗಿ ಜನರನ್ನು ಬಳಸಿಕೊಳ್ಳಬಾರದು ,ಮಕ್ಕಳು ಅಂಕಕ್ಕಾಗಿ ಸಂವಿಧಾನ ಓದುವುದು ಸೀಮಿತವಾಗಿದೆ, ನಮ್ಮ ಮುಂದಿನ ಜನಾಂಗಕ್ಕೆ ಸಂವಿಧಾನ ಅರ್ಥ ಆಗಬೇಕು, ಎಷ್ಟೇ ಒಳ್ಳೆ ಸಂವಿಧಾನವಾದರು ಕೆಟ್ಟ ಜನರ ಕೈಗೆ ಸಿಕ್ಕರೆ ಕೆಟ್ಟದಾಗುತ್ತದೆ ರೀತಿ ಅಭಿಯಾನದಿಂದ ಸಾರ್ವಜನಿಕವಾಗಿ ಅರಿವು ಮೂಡಿಸುವುದು ಅಗತ್ಯ ಎಂದರು.

       ಅಧ್ಯಕ್ಷತೆಯನ್ನು ಪ್ರಾಚಾರ್ಯ ಪ್ರೋ. ಜೆ ಎಸ್ ಹೆಗಡೆ ವಹಿಸಿದ್ದರು.

       ಸಂವಾದದಲ್ಲಿ ಡಾ. ವಿಠ್ಠಲ ಭಂಡಾರಿ, ಕನ್ನೇಶ ಕೋಲಸಿಸರ್ಿ, ಪ್ರೋ. ವೀರೂಪಾಕ್ಷಪ್ಪ ಎಸ್ ಮೇಟಿ, ಪ್ರೋ. ಬಸಲಿಂಗಪ್ಪ, ಪ್ರೋ ಮಂಜುಳಾ, ಪ್ರೋ ಎನ್ ಟಿ ನಾಯ್ಕ, ಕೆ.ಬಿ. ವೀರಲಿಂಗನ ಗೌಡ್ರು, ಸುರೇಶ ಮಡಿವಾಳ ಕಡಕೇರಿ,ಅಣ್ಣಪ್ಪ ನಯ್ಕ ಶಿರಳಗಿ, ವಿನೋಧ ಘಾಯತೊಂಡೆ, ಶ್ರೀನಿವಾಸ ನಾಯ್ಕ, ಲೋಹಿತ ನಾಯ್ಕ ಪಾಲ್ಗೊಂಡಿದ್ದರು.

         ಆಂತರಿಕ ಗುಣಮಟ್ಟ ಭರವಸೆ ಕೋಶದ ಸಂಚಾಲಕಿ ಪ್ರೋ.ಅನಿಜಾ ಎಲ್, , ರಾಜ್ಯ ಶಾಸ್ತ್ರ ವಿಭಾಗ ಮುಖ್ಯಸ್ಥ ಪ್ರೋ .ಯೋಗೇಶ ವೈ, , ಕನ್ನಡ ವಿಭಾಗ ಮುಖ್ಯಸ್ಥೆ ಪ್ರೋ. ವಾಣಿ ಡಿ ಎಸ್ ಉಪಸ್ಥಿತರಿದ್ದರು.

  ಅಪರ್ಿತಾ ಸಂಗಡಿಗರು ಆಶಯ ಗೀತೆ ಹಾಡಿದರು.ಯುವ ರೆಡ್ಕ್ರಾಸ್ ಘಟಕ ಸಂಚಾಲಕ ಜಗನ್ನಾಥ ಮೊಗೇರ ಸ್ವಾಗತಿಸಿ ಪ್ರಾಸ್ಥಾವಿಕವಾಗಿ ಮಾತನಾಡಿದರು.