ಜ.10 ರಂದು ಹಾವೇರಿಯಲ್ಲಿ ಕಿರು ಕಾದಂಬರಿಗಳು ಲೋಕಾರೆ್ಣ
“ಮನಶಾಸ್ತ್ರ” ದಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಕಂಡು ಬರುವ ಪ್ರಾಣಿ, ಪಕ್ಷಿ, ಮರ, ನದಿ, ಪೆನ್ನು, ರಬ್ಬರ, ಕಸಬರಿಗೆ, ಹಾಳೆ, ಚಪ್ಪಲಿ, ಗೂಬೆ, ನವಿಲು, ಮೀನು, ಕೋಳಿ, ಚಿಟ್ಟೆ, ಹೂ-ಮುಳ್ಳು, ಜೇನು, ತೆಂಗಿನಕಾಯಿ, ವೀಣೆ, ದೀಪ ಇವುಗಳಲ್ಲಿರುವ ಗುಣಗಳನ್ನು ಗುರುತಿಸಿ ಕಥೆಗಳ ಮೂಲಕ ನಮ್ಮ ಮುಂದೆ ಆದರ್ಶಗಳನ್ನು ಪರಿಚಯಿಸುತ್ತದೆ. ಮಾನವನಿಗೆ ನೀತಿಯನ್ನು ಬೋಧಿಸಲು ಅತ್ಯಂತ ಪರಿಣಾಮಕಾರಿ ಮಾಧ್ಯಮ ಎಂದರೆ ಕಥೆಗಳು. ಗುಣಗಳನ್ನು ಸುತ್ತಲಿನ ಪ್ರಾಣಿ, ಪಕ್ಷಿ, ವಸ್ತುಗಳ ಮೇಲೆ ಆರೋಪಿಸಿ ಹೇಳಿ ತನ್ಮೂಲಕ ಅದೇ ಗುಣವುಳ್ಳ ಮನುಷ್ಯನಿಗೆ ತಿಳಿ ಹೇಳುವುದು ಕಥಾ ಬೋಧನೆಯ ವೈಶಿಷ್ಟ್ಯ. ಇದನ್ನು ಈ ಕೃತಿಯಲ್ಲಿ ಅನುಸರಿಸಲಾಗಿದೆ. ಪ್ರತಿಯೊಂದು ಲೇಖನವೂ ಒಂದೊಂದು ಮೌಲ್ಯಗಳನ್ನು ಪರಿಚಯಿಸಿ ಬದುಕನ್ನು ಸಾರ್ಥಕಗೊಳಿಸಿಕೊಳ್ಳಲು ಪ್ರೇರಣೆ ನೀಡುತ್ತದೆ.
ಬದುಕಿನಲ್ಲಿ ಬರೀ ಮಾತುಗಳನ್ನು ಕೇಳುವುದರಿಂದಲೇ ಬದಲಾಗುವುದು ಬಹಳ ವಿರಳ. ಪರಮ ಪೂಜ್ಯ ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸ್ವಾಮಿರವರ ಆಧ್ಯಾತ್ಮಿಕ ಪ್ರವಚನದ ನುಡಿಗಳಲ್ಲಿಯ ಅಂಶಗಳನ್ನು ನನ್ನ ಪೂಜ್ಯ ತಂದೆಯವರಾದ ಶ್ರೀ ಮಹದೇವಪ್ಪ ಚೌಡಪ್ಪ ನರಗುಂದ ರವರು ಅನುಸರಿಸಿದ ಪ್ರೇರಣೆ ಮತ್ತು ಆಧ್ಯಾತ್ಮಿಕ ಪ್ರವಚನದ ಪ್ರಭಾವದಿಂದ ಮತ್ತು ಈ ಸುಂದರ ಪರಿಸರದಲ್ಲಿ ಹಲವಾರು ವಿಷಯ ಕೇಳುತ್ತಾ, ವಸ್ತುಗಳನ್ನು ನೋಡುತ್ತಾ, ಕಲಿಯುತ್ತಾ, ಸ್ನೇಹವನ್ನು ಬೆಳೆಸುತ್ತಾ ಈ ಲೇಖನಗಳನ್ನು ಬರೆದು ಓದುಗ ಪ್ರಭುಗಳಾದ ನಿಮ್ಮೆಲ್ಲರ ಮಡಿಲಲ್ಲಿ ಪ್ರೀತಿಯಿಂದ ಬೆಳೆಸಲು ವಿನಂತಿಸಿಕೊಳ್ಳುತ್ತೇನೆ.
ನನ್ನ ಈ ಕಿರು ಕಾದಂಬರಿಗಳು ಭಾವನಾತ್ಮಕತೆಯ ಕಡೆಗೆ ಹೆಚ್ಚಾಗಿ ವಾಲುತ್ತವೆ. “ದ್ವಂದ್ವ” ಕಿರು ಕಾದಂಬರಿಯಲ್ಲಿ ಅದ್ಭುತವಾದ ಹೆಣ್ಣಿನ ಮನದಾಳದಲ್ಲಿ ಹುದುಗಿಕೊಂಡಿರುವ ದ್ವಂದ್ವದ ಕಥಾ ಹಂದರವನ್ನು ಒಳಗೊಂಡಿರುವುದಲ್ಲದೆ ಗಟ್ಟಿತನದ ಹೆಣ್ಣಿನ ಜೀವನದ ಒಂದು ಘಟನೆಯಿಂದ ಹೆಣೆದ ಕಿರು ಕಾದಂಬರಿ. ಮುಂದುವರೆದು “ವಾರದ ಮಕ್ಕಳು” ಕಿರು ಕಾದಂಬರಿಯಲ್ಲಿ ಇದು ತ್ರೀಕೋನದಂತೆ ಮೂರು ಬೇರೆ ಬೇರೆ ಆಯಾಮದ ಕಥೆಗಳು ಸಮಸ್ಯೆಗಳಿಂದ ಆರಂಭವಾಗಿ ಕೊನೆಗೆ ಸಮಾಜಕ್ಕೆ ಸಂದೇಶವನ್ನು ನೀಡುವಲ್ಲಿ ಯಶ್ಸನ್ನು ತಂದು ಕೊಡುತ್ತದೆ. ಈ ಕಿರು ಕಾದಂಬರಿಗಳು ಮಕ್ಕಳನ್ನು ಪ್ರೀತಿಸುವ ಎಲ್ಲರೂ ಓದಲೇ ಬೇಕಾದಂತಹ ಕಥೆಗಳನ್ನು ಒಳಗೊಂಡಿರುತ್ತವೆ. ಎಲ್ಲರೂ ಓದಿ ಹಾರೈಸಿರಿ.
ಪರಮ ಪೂಜ್ಯ ಶ್ರೀ ಸ್ವಾಮಿ ಪ್ರಕಾಶಾನಂದಜಿ ಮಹಾರಾಜ್ ರವರ ಮುನ್ನುಡಿಯು ಮತ್ತು ಕ.ಸಾ.ಪ ಬೆಂಗಳೂರ, ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಹಾರೈಕೆ ನುಡಿಗಳನ್ನು ಬರೆದಿರುವುದು ಕೃತಿಗೆ ಮೆರುಗು ತಂದಿದೆ. ಈ ಕೃತಿಗಳ ಕಾರ್ಯದಲ್ಲಿ ಜೊತೆಗಿದ್ದ ಪ್ರೀತಿಯ ಸ್ನೇಹಬಂಧುಗಳಿಗೆೆ ನನ್ನ ಧನ್ಯವಾದಗಳೊಂದಿಗೆ ಈ ಕೃತಿಗಳನ್ನು ಸಾಹಿತ್ಯ ಲೋಕಕ್ಕೆ ದಿ:10-01-2025 ರಂದು ಹಾವೇರಿ ಜಿಲ್ಲಾ ಕ.ಸಾ.ಪ ಕಾರ್ಯಕ್ರಮದಲ್ಲಿ ಲೋಕಾರೆ್ಣಯಾಗಲಿದ್ದು ಕೃತಿಗಳ ಓದಿಸಿ ಮೊ:9980178424.