8ರಂದು ಪರ​‍್ಪ ಮುತ್ಯಾರ ತಾಲೂಕು ಮಟ್ಟದ ಉಚಿತ ಆರೋಗ್ಯ ತಪಾಸಣೆ, ಓಷಧ ವಿತರಣೆ

On 8th Parpa Mutyar taluk level free health checkup, medicine distribution


8ರಂದು ಪರ​‍್ಪ ಮುತ್ಯಾರ ತಾಲೂಕು ಮಟ್ಟದ ಉಚಿತ ಆರೋಗ್ಯ ತಪಾಸಣೆ, ಓಷಧ ವಿತರಣೆ  

ರಾಮದುರ್ಗ 04: ಡಿ.8 ಭಾನುವಾರ ಮುಂಜಾನೆ 9.30ಕ್ಕೆ ಪಟ್ಟಣದ ಸ್ಟೇಟ್ ಸಂಯುಕ್ತ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಪರ​‍್ಪ ಮುತ್ಯಾರ 2ನೇ ತಾಲೂಕು ಮಟ್ಟದ ಉಚಿತ ಆರೋಗ್ಯ ತಪಾಸಣೆ ಮತ್ತು ಓಷಧ ವಿತರಣೆ ಕಾರ್ಯಕ್ರಮ ಜರುಗಲಿದೆ ಎಂದು ಡಾ. ರಾಜೇಂದ್ರ ಶಿವಯೋಗಿ ಮುತ್ಯಾರು ಹೇಳಿದರು. 

ಪಟ್ಟಣದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಶಿಬಿರವು ಡಾ. ರಾಜೇಂದ್ರ ಮುತ್ಯಾರು ಪುಣ್ಯಾಶ್ರಮ ಸೇವಾ ಟ್ರಸ್ಟ್‌ ರಾಮದುರ್ಗ, ಕೆಎಲ್‌ಇ ಡಾ. ಪ್ರಭಾಕರ ಕೋರೆ ಆಸ್ಪತ್ರೆ, ಬೆಳಗಾವಿಯ ವೈದ್ಯಕೀಯ ಸಂಶೋಧನಾಲಯ, ಜೆ.ಎನ್‌.ಎಂ.ಸಿ., ತಾಲೂಕು ಆಸ್ಪತ್ರೆ ರಾಮದುರ್ಗ, ಐ.ಎಂ.ಎ., ಎ.ಎಫ್‌.ಐ., ಮಹರ್ಷಿ ಪತಂಜಲಿ ಯೋಗ ಪ್ರತಿಷ್ಠಾನ, ಪುನೀತ ಫೌಂಡೇಷನ್, ಜನಸಾಮಾನ್ಯರ ಹಿತರಕ್ಷಣಾ ಸಮಿತಿ ಹಾಗೂ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನೆರವೇರಲಿದೆ. ತಾಲೂಕಿನ ವಿವಿಧ ಗ್ರಾಮೀಣ ಪ್ರದೇಶದ ಜನತೆ ಆರೋಗ್ಯ ಶಿಬಿರದ ಸದುಪಯೋಗ ಪಡೆಯಬೇಕೆಂದು ಹೇಳಿದರು. 

ಡಿ.8 ರಂದು 9.30ಕ್ಕೆ ಜರುಗುವ ಶಿಬಿರದ ಉದ್ಘಾಟನಾ ಸಮಾರಂಭದ ಸಾನಿಧ್ಯವನ್ನು ಡಾ. ರಾಜೇಂದ್ರ ಶಿವಯೋಗಿ ಮುತ್ಯಾರು ವಹಿಸಲಿದ್ದು, ಬೆಳಗಾವಿಯ ಖ್ಯಾತ ವೈದ್ಯ ಡಾ. ಮಲ್ಲಿಕಾರ್ಜುನ ಖಾನಪೇಟ ಸಮಾರಂಭ ಉದ್ಘಾಟಿಸುವರು. 

ಮಧ್ಯಾಹ್ನ 4 ಗಂಟೆಗೆ ವೈದ್ಯರಿಗೆ ವೈದ್ಯಾಂಮೃತ ಸನ್ಮಾನ ಸಮಾರಂಭ ಜರುಗಲಿದೆ. ಸಾನಿಧ್ಯವನ್ನು ಡಾ. ರಾಜೇಂದ್ರ ಶಿವಯೋಗಿ ಮುತ್ಯಾರು ವಹಿಸುವರು. ಬಾಗಲಕೋಟೆಯ ಪ್ರಭುಸ್ವಾಮಿ ಸರಗಣಾಚಾರಿ ಸಭೆಯ ಅಧ್ಯಕ್ಷತೆ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸರಕಾರದ ಮುಖ್ಯ ಸಚೇತಕ ಹಾಗು ಶಾಸಕ ಅಶೋಕ ಪಟ್ಟಣ, ಟಿಎಚ್‌ಒ ಡಾ. ನವೀನ ನಿಜಗುಲಿ, ಡಾ. ದೇವರಾಜ ಪಾಟೀಲ, ಡಾ. ಪ್ರಕಾಶ ರಾಮನಗೌಡರ, ಡಾ. ಶಿವಲೀಲಾ ಕಂಬಿ, ಡಾ. ವಿಶ್ವನಾಥ ಕಣಬೂರ, ಡಾ. ಮಂಜುನಾಥ ಕುರುಡಗಿ, ಡಾ. ಅಣ್ಣಪ್ಪ ಬಾಳಿ, ಡಾ. ಪಾರ್ವತಿ ಹಾಲಭಾವಿ, ಡಾ. ಹನಮಂತ ಮಳಲಿ, ಮಲ್ಲಣ್ಣ ಯಾದವಾಡ ಸೇರಿದಂತೆ ಅನೇಕರು ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. 

ಕೆಎಲ್‌ಇ ಆಸ್ಪತ್ರೆಯ ಡಾ. ಅಲ್ಲಮಪ್ರಭು ಅವರು ಮಾತನಾಡಿ, ಶಿಬಿರಲ್ಲಿ ಹೃದಯ ರೋಗ, ನರರೋಗ, ಕ್ಯಾನ್ಸ್‌ರ್, ಸ್ತ್ರೀರೋಗ, ಚಿಕ್ಕಮಕ್ಕಳ, ಶಸ್ತ್ರ ಚಿಕಿತ್ಸಕರು, ಕಿವಿ, ಮೂಗು, ಗಂಟಲು, ನೇತ್ರ, ಮೂತ್ರಪಿಂಡ, ಚರ್ಮರೋಗ ಸೇರಿದಂತೆ ಬೇರೆ ಬೇರೆ ವಿಭಾಗದ ತಜ್ಞ ವೈದ್ಯರು ಶಿಬಿರದಲ್ಲಿ ಲಭ್ಯರಿದ್ದಾರೆ. ಜನತೆ ಸದುಪಯೋಗ ಪಡೆಯಲಿ ಎಂದು ಹೇಳಿದರು. 

ಪತ್ರಿಕಾಗೋಷ್ಠಿಯಲ್ಲಿ ತಾಲೂಕು ವೈದ್ಯಾಧಿಕಾರಿ ಡಾ. ನವೀನ ನಿಜಗುಲಿ, ಡಾ. ಮೃತ್ಯುಂಜಯ ಅಣ್ಣಾನವರ, ಮಹರ್ಷಿ ಪತಂಜಲಿ ಯೋಗ ಪ್ರತಿಷ್ಠಾನ ಅಧ್ಯಕ್ಷ ಡಾ. ಬಿ.ಎಲ್‌. ಸಂಕನಗೌಡರ, ಪುನೀತ ಫೌಂಡೇಶನ್ ಅಧ್ಯಕ್ಷ ರಾಜು ಹರ್ಲಾಪೂರ, ಶಾಮಣ್ಣ ಧಡಿಗೌಡ್ರ, ಜನಸಾಮಾನ್ಯರ ಹಿತರಕ್ಷಣಾ ಸಮಿತಿ ರಾಜ್ಯಾಧ್ಯಕ್ಷ ಈರಣ್ಣ ಕಲ್ಯಾಣಿ ಸೇರಿದಂತೆ ಅನೇಕರು ಇದ್ದರು.