ಹಳೆಯ ವಿದ್ಯಾಥರ್ಿ ಸಂಘ ರಚನೆ ಶ್ಲಾಘನೀಯ: ಬೊಮ್ಮಾಯಿ

ಲೋಕದರ್ಶನ ವರದಿ

ಶಿಗ್ಗಾವಿ31: ಪ್ರತಿಭಾವಂತ ವಿದ್ಯಾಥರ್ಿಗಳನ್ನು ಪ್ರೋತ್ಸಾಹಿಸುತ್ತಿರುವ ವಿಶ್ವಗುರು ಹಳೆಯ ವಿದ್ಯಾಥರ್ಿ ಸಂಘದ ಕಾರ್ಯವೈಖರಿ ಮೆಚ್ಚುವಂಥದ್ದು ಎಂದು ಶಾಸಕ ಬಸವರಾಜ ಬೊಮ್ಮಾಯಿ ಹೇಳಿದರು.

 ಪ್ರಾಥಮಿಕ ಶಾಲೆಯ ಅಭಿವೃದ್ಧಿ ಜೊತೆಗೆ ವಾರ ಮುಗಳಿ ಗ್ರಾಮದ ವಿಶ್ವಗುರು ಹಳೆಯ ವಿದ್ಯಾಥರ್ಿಗಳ ಸಂಘದ ಪ್ರಥಮ ವರ್ಷದ ಸಂಸ್ಥಾಪನಾ ದಿನಾಚರಣೆ ಹಾಗೂ ಪ್ರತಿಭಾವಂತ ವಿದ್ಯಾಥರ್ಿಗಳ ಸನ್ಮಾನ ಕಾರ್ಯಕ್ರಮ ಜರುಗಿತು.

 ಸಕರ್ಾರಿ ಶಾಲೆಗಳು ಸದ್ಯ ಸಂದಿಗ್ಧ ಸ್ಥಿತಿಯಲ್ಲಿವೆ. ಅವುಗಳ ಜೀವಂತಿಕೆಗೆ ಹಳೆಯ ವಿದ್ಯಾಥರ್ಿಗಳು ಸಂಘಟಿತರಾಗುತ್ತಿರುವುದು ಶ್ಲಾಘನೀಯ. ಮುಗಳಿ ಗ್ರಾಮದ ಹಳೆಯ ವಿದ್ಯಾಥರ್ಿಗಳ ಕ್ರಿಯಾಶೀಲತೆ ಇನ್ನಿತರ ಗ್ರಾಮಗಳಿಗೆ ಮಾದರಿ. ವಿಶ್ವಗುರು ಹಳೆಯ ವಿದ್ಯಾಥರ್ಿಗಳ ಸಂಘಕ್ಕೆ ತಾವು ಸಹಕಾರ ನೀಡುವುದಾಗಿ ಹೇಳಿದರು.

 ಭರತ ಸೇವಾ ಸಂಸ್ಥೆಯ ಶ್ರೀಕಾಂತ ದುಂಡಿಗೌಡ್ರ ಮಾತನಾಡಿ, ವಿಶ್ವಗುರು ಹಳೆಯ ವಿದ್ಯಾಥರ್ಿ ಸಂಘ ಪ್ರತಿಭಾವಂತ ವಿದ್ಯಾಥರ್ಿಗಳನ್ನು ಸನ್ಮಾನಿಸುವ ಜೊತೆಗೆ ನಗದು ಪುರಸ್ಕಾರ ನೀಡುತ್ತಿರುವುದು ಅನನ್ಯ. ಇದರಿಂದ ವಿದ್ಯಾಥರ್ಿಗಳಲ್ಲಿ ಸ್ಪಧರ್ಾತ್ಮಕ ಮನೋಭಾವ ಹೆಚ್ಚಲು ಸಹಕಾರಿಯಾಗುತ್ತದೆ ಎಂದರು.

ವಿಶ್ವಗುರು ಹಳೆಯ ವಿದ್ಯಾಥರ್ಿಗಳ ಸಂಘದ ಉಪಾಧ್ಯಕ್ಷ ವಿ.ಎಸ್. ಭದ್ರಶೆಟ್ಟಿ, ಸಂಘದ ಬೆಳವಣಿಗೆ ಮತ್ತು ಉದ್ದೇಶ ವಿವರಿಸಿದರು.

 ನಿವೃತ್ತ ಯೋಧರಾದ ರುದ್ರಪ್ಪ ಮೂಲಿಮನಿ, ಚನ್ನಪ್ಪ ಹುಲಗೂರ, ಉಳವಪ್ಪ ದುಂಡಪ್ಪನವರ, ಹುತಾತ್ಮ ಯೋಧ ಚಂದ್ರು ಡವಗಿ ಪತ್ನಿ ಶಿಲ್ಪಾ ಡವಗಿ, ಗ್ರಾಮದ ಹಿರಿಯರಾದ ದಾನಪ್ಪ ಮಂಟಗಣಿ ಹಾಗೂ ಎಸ್ಎಸ್ಎಲ್ಸಿ ಮತ್ತು ಪಿಯುಸಿ ಪರೀಕ್ಷೆಗಳಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾಥರ್ಿಗಳನ್ನು ಸನ್ಮಾನಿಸಿ, ಗೌರವಿಸಲಾಯಿತು.

 ಪ್ರಾಥಮಿಕ ಶಾಲಾ ವಿದ್ಯಾಥರ್ಿಗಳಿಂದ ಮನರಂಜನಾ ಕಾರ್ಯಕ್ರಮ ಜರುಗಿದವು.

ಹಿರೇಮಣಕಟ್ಟಿಯ ಶ್ರೀಮುರುಘೇಂದ್ರ ಮಠದ ಶ್ರೀ ಷ.ಬ್ರ. ವಿಶ್ವಾರಾಧ್ಯ ಶಿವಾಚಾರ್ಯ ಸಾನ್ನಿಧ್ಯ, ಪಂಚಯ್ಯಸ್ವಾಮಿ ಹಿರೇಮಠ ಸಮ್ಮುಖ, ವಿಶ್ವಗುರು ಹಳೆಯ ವಿದ್ಯಾಥರ್ಿಗಳ ಸಂಘದ ಅಧ್ಯಕ್ಷ ವಿ.ಜಿ. ದುಂಡಪ್ಪನವರ ಅಧ್ಯಕ್ಷತೆ ವಹಿಸಿದ್ದರು.

 ಸಹಕಾರಿ ಧುರೀಣ ಶಿವಾನಂದ ರಾಮಗೇರಿ, ಜಿಪಂ ಉಪಾಧ್ಯಕ್ಷೆ ದೀಪಾ ಅತ್ತಿಗೇರಿ, ಜಿಪಂ ಮಾಜಿ ಸದಸ್ಯರಾದ ಫಾಲಾಕ್ಷಪ್ಪ ಹಾವಣಗಿ, ಎನ್.ಸಿ. ಪಾಟೀಲ, ತಾಪಂ ಸದಸ್ಯ ಶ್ರೀಕಾಂತ ಪೂಜಾರ, ಗುರುಶಾಂತಪ್ಪ ಭದ್ರಶೆಟ್ಟಿ, ಶಿವಪ್ಪ ದುಂಡಪ್ಪನವರ, ರುದ್ರಗೌಡ ಪಾಟೀಲ, ಬಿ.ಎಂ. ದುಂಡಪ್ಪನವರ, ನಿವೃತ್ತ ಶಿಕ್ಷಕ ಎನ್.ಆರ್. ಸೋಮನಕಟ್ಟಿ, ಗ್ರಾಪಂ ಅಧ್ಯಕ್ಷ ನಾಗಪ್ಪ ಅಣ್ಣಿಗೇರಿ, ಗ್ರಾಪಂ ಉಪಾಧ್ಯಕ್ಷೆ ಪ್ರೇಮವ್ವ ಭರಮಗೌಡ್ರ, ಸದಸ್ಯ ಶಿವಲಿಂಗಯ್ಯ ಕಳಸಗೇರಿಮಠ, ಸದಸ್ಯೆ ಜುಬೇದಾ ಓಲೇಕಾರ, ಅಡಿವೆಪ್ಪ ದೊಡ್ಡಮನಿ, ಎಸ್ಡಿಎಂಸಿ ಅಧ್ಯಕ್ಷ ನಿಂಗಪ್ಪ ದುಂಡಪ್ಪನವರ ಹಾಗೂ ಸದಸ್ಯರು, ಮುಖ್ಯಗುರು ಬಿ.ಬಿ. ಕಟ್ಟಿಮನಿ ಹಾಗೂ ಶಿಕ್ಷಕರು, ವಿಶ್ವಗುರು ಹಳೆಯ ವಿದ್ಯಾಥರ್ಿಗಳ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

 ನಿಂಗಪ್ಪ ಸಕ್ರಿ ನಿರೂಪಿಸಿ, ಸ್ವಾಗತಿಸಿದರು. ಮಂಜುನಾಥ ಬಿಶೆಟ್ಟಿ ವಂದಿಸಿದರು.