ಅಮಿತಾಬ್ ಬಚ್ಚನ್ಗೆ ವಕೀಲರ ಸಂಘದಿಂದ ನೋಟೀಸ್

ನವದೆಹಲಿ 02: ಎವರೆಸ್ಟ್ ಮಸಾಲಾ ಜಾಹೀರಾತಿನ ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೆ ದೆಹಲಿ ವಕೀಲರ ಸಂಘ ನೋಟಿಸ್ ಜಾರಿ ಮಾಡಿದೆ. ವಕೀಲರ ಉಡುಗೆಗಳನ್ನು ಜಾಹೀರಾತಿಗೆ ಬಳಸುವ ಮೊದಲು ಅಗತ್ಯ ಮುನ್ನೆಚ್ಚರಿಕೆ ವಹಿಸಲಾಗಿಲ್ಲ. ಅಧಿಕಾರ ಮತ್ತು ವಿವೇಚನೆ ಇಲ್ಲದೆ ಜಾಹೀರಾತು ನಿಮರ್ಿಸಿ, ಪ್ರಸಾರ ಮಾಡಿರುವ ನಿಮ್ಮ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಾಗುತ್ತದೆ. ಇಂಥ ಜಾಹೀರಾತುಗಳಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ಈ ಕೂಡಲೇ ನಿಲ್ಲಿಸಬೇಕು. ಬಾರ್ ಕೌನ್ಸಿಲ್ ಆಫ್ ಇಂಡಿಯಾ ಮತ್ತು ದೇಶದ ಇತರೆಲ್ಲ ವಕೀಲರ ಸಂಘಗಳಿಗೆ ಇನ್ನು ಮುಂದೆ ವಕೀಲರ ಉಡುಗೆಗೆ ಅಗೌರವ ತೋರಿಸುವುದಿಲ್ಲ ಎಂದು ಮುಚ್ಚಳಿಕೆ ಬರೆದುಕೊಡಬೇಕು' ಎಂದು ಜಾಹೀರಾತಿನ ಪಾತ್ರಧಾರಿ ಮತ್ತು ನಿಮರ್ಾಣ ಸಂಸ್ಥೆಯನ್ನು  ಬಾರ್ ಕೌನ್ಸಿಲ್ ಒತ್ತಾಯಿಸಿದೆ.