ಯಾವ ಧರ್ಮವೂ ಭಯೋತ್ಪಾದನೆಗೆ ಅವಕಾಶ ನೀಡಿಲ್ಲ: ಸಚಿವ ಖಾದರ

ಅಥಣಿ 04: ಯಾವ ಧರ್ಮವೂ ಭಯೋತ್ಪಾದನೆಗೆ ಅವಕಾಶ ನೀಡಿಲ್ಲ, ಅದರ ಬಗ್ಗೆ ಯಾವುದೇ ಧರ್ಮ ಗ್ರಂಥಗಳಲ್ಲಿ ಉಲ್ಲೇಖವಿಲ್ಲ. ಕೆಲವು ದುಷ್ಠ ಶಕ್ತಿಗಳು ತಮ್ಮ ಸ್ವಾರ್ಥಕ್ಕಾಗಿ ಭಯೋತ್ಪಾದನೆಯನ್ನು ಹುಟ್ಟುಹಾಕಿ ಅದಕ್ಕೆ ಧರ್ಮದ ಲೇಪನ ಬಳಿಯುತ್ತಿದ್ದಾರೆ ಎಂದು ರಾಜ್ಯ ನಗರಾಭಿವೃದ್ಧಿ ಸಚಿವ ಯು.ಟಿ ಖಾದರ ಹೇಳಿದರು.

           ಅವರು ಶರಣ ಸಂಸ್ಕ್ರತಿ ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡುತ್ತಿದ್ದರು.    

          ದೇಶದಲ್ಲಿ ಹಿಂದಿನ ಮಠಾಧಿಶರು ಮತ್ತು ತಪಸ್ವಿಗಳು ಜಾತಿ, ಧರ್ಮವಿಲ್ಲದೇ ಶಿಕ್ಷಣ ನೀಡಿ ಬಲಿಷ್ಠ ಭಾರತ ನಿಮರ್ಿಸಿದ್ದರು. ಆದ್ದರಿಂದ ಭಾರತ ಇಂದು ಬಲಾಢ್ಯ ಮತ್ತು ಭಾವೈಕ್ಯತೆಯ ದೇಶವಾಗಿದೆ. ಆದರೆ ಇಂದು ಜಾತಿಯ ಆಧಾರದ ಮೇಲೆ ದೇಶವನ್ನು ಒಡೆಯುವಂತಹ ಮಾನಸಿಕತೆಯನ್ನು ಸ್ವಾರ್ಥ ಶಕ್ತಿಗಳು ಯುವಕರಲ್ಲಿ ಬಿತ್ತುತ್ತಿವೆ. ಇದರಿಂದಾಗಿ ಯುವ ಜನತೆ ಉಗ್ರವಾದದಂತಹ ಕೆಟ್ಟ ಶಕ್ತಿಗಳ ಕೈವಶವಾಗುತ್ತಿದ್ದಾರೆ ಎಂದ ಅವರು ಮಾನವೀಯತೆಯೇ ನಿಜವಾದ ಧರ್ಮ ಎನ್ನುವುದನ್ನು ನಾವೆಲ್ಲರೂ ತಿಳಿದುಕೊಂಡು ಅದನ್ನು ನಮ್ಮಲ್ಲಿ ಅಳವಡಿಸಿಕೊಂಡಲ್ಲಿ ಉಗ್ರವಾದದಂತಹ ಸಾಮಾಜಿಕ ಕಂಟಕಗಳನ್ನು ನಾಶಪಡಿಸಬಹುದು ಎಂದರು. 

        ಸಾನಿಧ್ಯವನ್ನು ವಹಿಸಿದ್ದ ಡಾ. ಶಿವಮೂತರ್ಿ ಮುರುಘಾ ಶರಣರು ಮಾತನಾಡಿ ನಾವು ಭಾವನಾತ್ಮಕವಾಗಿ ಸಂಭಂಧವನ್ನು ಬೆಳೆಸಬೇಕಾಗಿದೆ. ಆಗ ಭಯದ ಜಗತ್ತ್ತೆ ಇಲ್ಲವಾಗುತ್ತದೆ. ಕೇವಲ ತನಗಾಗಿ ಬದುಕಬೇಕೆಂಬ ಸ್ವಾರ್ಥಭಾವನೆ ಬಂದಾಗ ಉಗ್ರವಾದದಂತಹ ಅಸುರೀ ಶಕ್ತಿ ಜಾಗೃತವಾಗುತ್ತದೆ, ನಾನು ಕೇವಲ ನನಗಾಗಿ ಅಲ್ಲ ಇಡೀ ಸಮಾಜಕ್ಕಾಗಿ ನನ್ನ ಬದುಕು ಮುಡಿಪಾಗಬೇಕು ಎನ್ನುವ ಸಾತ್ವಿಕ ಮನೋಭಾವ ಬೆಳೆದಾಗ ಉಗ್ರವಾದದಂತಹ ದುಷ್ಟ ಆಲೋಚನೆಗಳು ಹತ್ತಿರವೂ ಸುಳಿಯಲಾರವು ಎಂದ ಅವರು ಇಂತಹ ಮಾನಸಿಕತೆ ಬೆಳೆಸಿಕೊಳ್ಳಬೇಕಾದಲ್ಲಿ ಅಥಣಿಯ ಶಿವಯೋಗಿಗಳ ಜೀವನವನ್ನು ನಮ್ಮ ಆದರ್ಶವಾಗಿರಿಸಿಕೊಳ್ಳಬೇಕು ಅವರು ನಡೆದ ಶರಣ ತತ್ವದ ದಾರಿಯಲ್ಲಿ ನಾವು ನಡೆಯಬೇಕು ಎಂದರು.

     ಮುಖ್ಯ ಅತಿಥಿಯಾಗಿ ಮಾಜಿ ಸಚಿವ ರಾಜ್ಯ ಬಿಜೆಪಿ ರೈತ ಮೋಚರ್ಾ ಅಧ್ಯಕ್ಷ  ಲಕ್ಷ್ಮಣ ಸಂಗಪ್ಪ ಸವದಿ ಆಗಮಿಸಿ ಮಾತನಾಡಿ ಸಮಾಜದಲ್ಲಿ ತಪಸ್ವಿಗಳು ನೀಡಿರುವ ಸಂದೇಶಗಳಿಂದ ಜನರಲ್ಲಿ ಜಾಗ್ರತಿ ಮೂಡಿಸಲು ಸಾಧ್ಯ, ದುರಾಸೆ ಭಯೋತ್ಮಾದನೆಗೆ ಕಾರಣ. ನಾವು ಇನ್ನೊಬ್ಬರಿಗೆ ಮೋಸ ಮಾಡುವದಿಲ್ಲ ಎಂದು ಪ್ರತಿಯೊಬ್ಬರು ಪ್ರತಿಜ್ಞೆ ಮಾಡಿದರೆ ಬಾಹ್ಯ ಹಾಗೂ ಆಂತರಿಕ  ಭಯೋತ್ಮಾದನೆ ನಿಮರ್ೂಲನೆ ಮಾಡಬಹುದೆಂದರು.

       ಮುಖ್ಯ ಅತಿಥಿಯಾಗಿ ಜಿಲ್ಲಾಧಿಕಾರಿ ಡಾ.ಎಸ್.ಬಿ.ಬೊಮ್ಮನಹಳ್ಳಿ  ಗೋವಾ ಎನಿಮಲ್ ಭೋರ್ಡ ಅಧಿಕಾರಿ ಚಂದ್ರಕಾಂತ ಭೋಜೂ ಪಾಟೀಲ, ಡಾ,ಎಸ್.ಎಸ್. ಕುಲಕಣರ್ಿ, ಡಾ.ಜ್ಯೋತಿ ಸಾಧನ ಸ್ಪಧರ್ಾತ್ಮಕ ಪರಿಕ್ಷಾ ತರಬೇತಿ ಕೇಂದ್ರ ಬೆಂಗಳೂರ. ಕೆ.ಎ.ವಣಜೋಳ, ಅನಿಲ ಸುಣದೋಳಿ,

ಮುಂತಾದವರು ಉಪಸ್ಥಿತರಿದ್ದರು.

          ಘಟಪ್ರಭಾದ ಮಲ್ಲಿಕಾಜರ್ುನ ಸ್ವಾಮೀಜಿ ಉಪಸ್ಥಿತರಿದ್ದರು. ಗಚ್ಚಿನ ಮಠದ ಶಿವಬಸವ ಸ್ವಾಮಿಜಿ ನೇತೃತ್ವ ವಹಿಸಿದ್ದರು.

        ಸನ್ಮಾನವನ್ನು ಸ್ವೀಕರಿಸಿ ಕೃಷಿ ತಜ್ಣೆ ರಾಯಚೂರ ಕವಿತಾ ಮಿಶ್ರಾ ಅವರು ಮಾತನಾಡಿದರು. ಶಿವಾನಂದ ದಿವಾನಮಳ ಸ್ವಾಗತಿಸಿದರು. ಸಿದ್ದಲಿಂಗ ದೇವರು ನಿರೂಪಿಸಿದರು.