ಲೋಕದರ್ಶನ ವರದಿ
ಯಲಬುಗರ್ಾ 17: ಯಾರೇ ಆಗಲಿ ಒಬ್ಬರ ತೇಜೋವಧೆ ಮಾಡಬಾರದು ವ್ಯಕ್ತಿಯ ಚಾರಿತ್ರ್ಯಕ್ಕೆ ಕಳಂಕ ತರುವಂತ ಕೆಲಸ ಮಾಡಬಾರದು ಎಂದು ಮೊಳಕಾಲ್ಮೂರ ಶಾಸಕ ಹಾಗೂ ಬಿ,ಜೆ.ಪಿ ನಾಯಕ ಶ್ರೀರಾಮುಲು ಹೇಳಿದರು.
ಜಿಲ್ಲೆಯ ಯಲಬುಗರ್ಾ ತಾಲೂಕಿನ ಹಿರೇವಂಕಲಕುಂಟಾದಲ್ಲಿ ಶನಿವಾರ ಜರುಗಿದ ಮಹಷರ್ಿ ವಾಲ್ಮೀಕಿ ಜಯಂತಿ ಹಾಗೂ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಆಗಮಿಸಿದ್ದ ಅವರು ಮಾಧ್ಯಮದವರೊಂದಿಗೆ ಮಾತನಾಡಿ ಭಾರತೀಯ ಜನತಾ ಪಾಟರ್ಿ ನಮ್ಮನ್ನು ಬೆಳೆಸಿದೆ ಈ ಮಟ್ಟಕ್ಜೆ ತಂದಿದೆ ಈ ಪಕ್ಷವನ್ನು ಬಿಟ್ಟು ಹೋಗುವ ಉದ್ದೇಶವಿಲ್ಲವೆಂದು ಸ್ಪಷ್ಟಪಡಿಸಿದರು.
ಡಿ.ಕೆ. ಶಿವಕುಮಾರ ನನ್ನ ಮತ್ತು ಜನಾರ್ಧನ ರೆಡ್ಡಿ ಅವರನ್ನು ಸೆಳೆಯುತ್ತಿದ್ದಾರೆ ಎನ್ನುವ ಮಾತು ಉಹಪೋಹದ ಗಾಳಿ ಸುದ್ದಿಯಾಗಿದ್ದು, ಇದು ಶೋಭೆ ತರುವಂತಹ ಕೆಲಸವಲ್ಲ ನಮ್ಮ ಪಕ್ಷ ಬಿಜೆಪಿ ಅದಕ್ಕಾಗಿಯ ನಾವು ದುಡಿಯುತ್ತೇವೆ. ಇಂದು ನನು ಬಿಜೆಪಿಯಲ್ಲಿ ಅತ್ಯಂತ ಪ್ರಭಾವಿ ಹಾಗೂ ಶಕ್ತಿಯುತ ನಾಯಕನಾಗಿ ಬೆಳೆದಿದ್ದೇನೆ ಅದಕ್ಕೆ ಕಾಂಗ್ರೆಸ್ ನಾಯಕರಿಗೆ ನನ್ನನ್ನು ಕಂಡರೆ ಭಯ.. ಜನಾರ್ದನ ರೆಡ್ಡಿ ವಿಷಯದಲ್ಲಿ ಸಕರ್ಾರ ರಾಜಕೀಯ ಮಾಡಿದೆ ಸಕರ್ಾರದ ಕೈವಾಡದಿಂದ ಜನಾರ್ದನ ರೆಡ್ಡಿ ಅರೆಸ್ಟ ಆಗಿದ್ದಾರೆಂದು ದೂರಿದರು.
ದ್ವೇಷದ ರಾಜಕಾರಣದಿಂದ ಜನಾರ್ದನ ರೆಡ್ಡಿ ಅವರನ್ನು ಜೈಲಿಗೆ ತಳ್ಳುವ ಹುನ್ನಾರ ನಡೆಯಿತು. ಈ ವಿಷಯದಲ್ಲಿ ನಮ್ಮ ನಾಯಕರು ಸಂಪೂರ್ಣ ಬೆಂಬಲ ನೀಡಿದ್ದಾರ. ನಮ್ಮ ನಾಯಕರಾದ ಜಗದೀಶ ಶೆಟ್ಟರ, ಯಡಿಯೂರಪ್ಪ ಅವರು ಮಾತನಾಡಿದ್ದಾರೆ. ನಾನು ಅವರಿಗೆ ಮನವರಿಕೆ ಮಾಡಿದ್ದೇನೆ ಇದು ರಾಜಕೀಯ ದ್ವೇಷದಿಂದ ಮಾಡಿದ್ದು ಅಂತ ರಾಮುಲು ಸಕರ್ಾರ ಹಾಗೂ ಕಾಂಗ್ರೆಸ್ ನಾಯಕರ ವಿರುದ್ಧ ಕಿಡಿಕಾರಿದರು.