ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಗೊತ್ತುವಳಿ ವಿಫಲ: ಹಿಂದಿನ ಅಧ್ಯಕ್ಷ ಮುಂದುವರೆಕೆ

No-confidence motion against President fails: Past President continues

ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಗೊತ್ತುವಳಿ ವಿಫಲ: ಹಿಂದಿನ ಅಧ್ಯಕ್ಷ ಮುಂದುವರೆಕೆ

ಅಥಣಿ 01: ಮದಭಾವಿ ಗ್ರಾಮ ಪಂಚಾಯತನ ಅಧ್ಯಕ್ಷರ ವಿರುದ್ಧದ ಅವಿಶ್ವಾಸ ಗೊತ್ತುವಳಿ ವಿಫಲಗೊಳ್ಳುವ ಮೂಲಕ ಮಹಾದೇವ ಕೋರೆಯವರೇ ಅಧ್ಯಕ್ಷರಾಗಿ ಮುಂದುವರೆದರು.    

ಅವಿಶ್ವಾಸ ಗೊತ್ತುವಳಿಗೆ ಚಿಕ್ಕೋಡಿ ಉಪ ವಿಭಾಗಾಧಿಕಾರಿಗಳು ವಿಧಿಸಿದ ನಿಗದಿತ ಸಮಯದಲ್ಲಿ ಒಟ್ಟು 25 ಗ್ರಾಮ ಪಂಚಾಯತ ಸದಸ್ಯರಲ್ಲಿ ಕನಿಷ್ಢ 17 ಸದಸ್ಯರು ಹಾಜರಾಗಬೇಕಿತ್ತು ಆದರೆ ಯಾರೊಬ್ಬ ಸದಸ್ಯರೂ ಕೂಡ ಹಾಜರಾಗಲಿಲ್ಲ ಹೀಗಾಗಿ ಮಹಾದೇವ ಕೋರೆಯವರ ವಿರುದ್ಧ ಮಂಡಿಸಿದ್ದ ಅವಿಶ್ವಾಸ ಗೊತ್ತುವಳಿ ವಿಫಲಗೊಂಡಿದೆ ಎಂದು ಉಪ ವಿಭಾಗಾಧಿಕಾರಿಗಳು ಘೋಷಿಸಿದರು.         

ಅವಿಶ್ವಾಸ ಗೊತ್ತುವಳಿಯಲ್ಲಿ ಗೆದ್ದ ನಂತರ ಗ್ರಾಮ ಪಂಚಾಯತನ ತನ್ನ ಬೆಂಬಲಿಗ ಸದಸ್ಯರೊಂದಿಗೆ ಆಗಮಿಸಿದಾಗ ಅವರ ಅಭಿಮಾನಿಗಳು, ಬೆಂಬಲಿಗರು ಒಬ್ಬರಿಗೊಬ್ಬರು ಗುಲಾಲ ಎರಚಿ ಪಟಾಕಿ ಸಿಡಿಸಿ ವಿಜಯೋತ್ಸವ ಆಚರಿಸಿದರು.        

 ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮ ಪಂಚಾಯತ ಅಧ್ಯಕ್ಷ ಮಹಾದೇವ ಕೋರೆ, ನನ್ನ ಅಭಿವೃದ್ಧಿ ಧೋರಣೆಯನ್ನು ವಿರೋಧಿಸಿ ಅವಿಶ್ವಾಸ ಗೊತ್ತುವಳಿ ಮಂಡಿಸಿದ ಗ್ರಾಮ ಪಂಚಾಯತ ಸದಸ್ಯರಿಗೆ ಮುಖಭಂಗವಾಗಿದೆ ಎಂದ ಅವರು ಕಳೆದ. 17  ತಿಂಗಳ ನನ್ನ ಅಧಿಕಾರವಧಿಯಲ್ಲಿ ಮದಭಾವಿಯಲ್ಲಿ ಸಾಕಷ್ಟು ಜನಪರ ಮತ್ತು ಅಭಿವೃದ್ಧಿ ಪರ ಯೋಜನೆಗಳನ್ನು ಅನುಷ್ಠಾನಗೊಳಿಸಿದಂತೆ ಮುಂದಿನ ಅವಧಿಯಲ್ಲಿಯೂ ಸಹ ಜನಪರ ಕಾರ್ಯಗಳನ್ನು ಅನುಷ್ಠಾನಗೊಳಿಸುವೆ ಎಂದರು.         

 ತೆವರಟ್ಟಿ ಗ್ರಾಮ ಪಂಚಾಯತ ಸದಸ್ಯ ಚನ್ನಪ್ಪ ಐಹೊಳೆ ಮಾತನಾಡಿ, ಗ್ರಾಮ ಪಂಚಾಯತ ಅಧ್ಯಕ್ಷ ಮಹಾದೇವ ಕೋರೆ ಮೇಲೆ ವಿಶ್ವಾಸ ಇಟ್ಟು ನಾವೆಲ್ಲ ಜನಪರ ಆಡಳಿತಕ್ಕೆ ಸಹಕಾರ ಕೊಡಲಾಗಿತ್ತು ಆದರೆ ಕೆಲ ಸದಸ್ಯರು ದುರುದ್ದೇಶಪೂರ್ವಕವಾಗಿ ಅವಿಶ್ವಾಸ ಗೊತ್ತುವಳಿಗೆ ಮನವಿ ಮಾಡಿದ್ದರು ಎಂದ ಅವರು ಅವಿಶ್ವಾಸ ಗೊತ್ತುವಳಿಗೆ ಅಗತ್ಯವಾಗಿ ಬೇಕಾದ ಸದಸ್ಯರು ವಿರೋಧಿಗಳನ್ನು ಬೆಂಬಲಿಸಲಿಲ್ಲ ಹೀಗಾಗಿ ಗೊತ್ತುವಳಿ ವಿಫಲಗೊಂಡಿದೆ ಎಂದರು.25 ರಲ್ಲಿ 17 ಸದಸ್ಯರು, 9 ನಮಗೆ ಬೇಕಿತ್ತು,           

ವಿಜಯೋತ್ಸವದಲ್ಲಿ ಉಪಾಧ್ಯಕ್ಷೆ ಸುಶ್ಮಿತಾ ನಿಲಜಗಿ, ಸದಸ್ಯರಾದ ಮಹೇಶ ಕೇಸ್ತಿ, ಸಂತೋಷ ಕಲ್ಲೊತ್ತಿ, ಪ್ರವೀಣ ಭಂಡಾರೆ, ಸಂಜು ಅದಾಟೆ, ಸಿದ್ದಲಿಂಗ ಇಬ್ರಾಹಿಂಪುರ, ಗೋಪಾಲ ಅವಳೆ, ಬಾಬಾಸಾಬ ಬಾಗಡಿ, ಯಲ್ಲವ್ವ ನಾಯಿಕ, ಯಲ್ಲವ್ವಾ ನಂದಿವಾಲೆ, ಸರಿತಾ ಚೌಗಲಾ, ಸುನೀತಾ ಶೆಟ್ಟಿ ಮತ್ತು ಧುರೀಣರಾದ ದಾದಾಸಾಬ ಮೇತ್ರೆ, ಸ್ವಾಮಿ ಕಾಂಬಳೆ, ಹಣಮಂತ ತೊಡಕರ, ಗುರುಬಸು ತೋಡಕರ, ರಾಜಕುಮಾರ ತೋಡಕರ, ರಾಜು ನಂದಿವಾಲೆ, ಶ್ರೀಶೈಲ ಮೇತ್ರೆ, ಮಾರುತಿ ಭಂಡಾರೆ, ವಿಠ್ಠಲ್ ತೋಡಕರ, ಶ್ರೀಶೈಲ ನಾಯಿಕ, ಸಂಜು ನಂದಿವಾಲೆ, ಪರಶುರಾಮ ಬಾಡಗಿ, ಕುಮಾರ ಕೋರೆ, ವಿಜಯಾನಂದ ಮೇತ್ರೆ  ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು.