ಬೆಳಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ನಿರ್ಮಲಾ ಎಲಿಗಾರ್

ಲೋಕದರ್ಶನ ವರದಿ

ಶಿಗ್ಗಾವಿ15:  ಶೈಕ್ಷಣಿಕ, ಸಾಹಿತ್ಯಿಕ ಮತ್ತು ಸಂಸ್ಕೃತಿಕ ಟ್ರಸ್ಟ ಆಶ್ರಯದಲ್ಲಿ ಡಿ.16 ರಂದು ನಡೆಯಲಿರುವ ತ್ರಿವಳಿ ಜಿಲ್ಲಾ 2018 ರ ಸಮ್ಮೇಳನಾಧ್ಯಕ್ಷರಾಗಿ ಸಾಹಿತಿಗಳು ಹಾಗೂ ಸಹಾಯಕ ನಿದರ್ೇಶಕರು ಆದ ನಿರ್ಮಲಾ ಎಲಿಗಾರ್ (ಅನಾಡ್) ಅವರು. ಎಂ.ಎ,ಎಂ.ಫಿಲ್ ( ಅರ್ಥಶಾಸ್ತ್ರ) ವಿದ್ಯಾರ್ಹತೆ ಹೊಂದಿದ್ದು 1991 ರಲ್ಲಿ ಮಹಿಳಾ ಅಧ್ಯಯನ ಎಂಫಿಲ್, 1989ರಲ್ಲಿ ಅರ್ಥಶಾಸ್ತ್ರ ಗಣಿತ ಸಂಖ್ಯಾಶಾಸ್ತ್ರ 1987ರಲ್ಲಿ ಅರ್ಥಸಾಸ್ತ್ರ ಸಮಾಜಶಾಸ್ತ್ರ ಮುಗಿಸಿ ಹುಬ್ಬಳ್ಳಿಯ ನ್ಯಾಷನಲ್ ಪಿ.ಯು ಕಾಲೇಜ ಅರ್ಥಶಾಸ್ತ್ರ ಪ್ರಾದ್ಯಾಪಕರಾಗಿ, ಬೆಂಗಳೂರ ಸಮೂಹ ಮಾಧ್ಯಮ ವಿಭಾಗ ವಿಶೇಷ ಉಪನ್ಯಾಸಕರಾಗಿ, ಬೆಂಗಳೂರು ಭಾರತೀಯ ವಿದ್ಯಾಭವನ ಸಂವಹನ ಮತ್ತು ಸಮೂಹ ಮಾಧ್ಯಮ ವಿಶೇಷ ಉಪನ್ಯಾಸ ನೀಡಿದ ಅನುಭವಿಗಳು. ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ತರಬೇತಿ ಕಾಯರ್ಾಗಾರ, ಸಮ್ಮೆಳನಗಳಲ್ಲಿ ಭಾಗವಹಿಸಿದ್ದರು. 

   2010 ನೇ ಸಾಲಿನಲ್ಲಿ ಕನರ್ಾಟಕ ಮಾದ್ಯಮ ಅಕಾಡಮಿ, ಚಾಳುಕ್ಯ, ಸಮರ್ಥ ಮಹಿಳೆ, ಲೇಡಿ ಆಫ್ ಹೋಪ್, ಅಕ್ಕಚೆನ್ನಶ್ರೀ, ಮಾಧ್ಯಮಸಿರಿ, ಸಾಹಿತ್ಯಶ್ರೀ ಹೀಗೆ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ