ಬಡವನ ಮಗಳ ಶ್ರೇಷ್ಠ ಸಾಧನೆಗೆ ಆಸರೆಯಾದ ನಿಯಾನ್ಸ ವಿಮಾನ ಗ್ರೂಪ್

ಮಹಾಲಿಂಗಪುರ 05: ಸ್ಥಳೀಯ ಪಾನ್ ಬೀಡಾ ಅಂಗಡಿ ಇಟ್ಟು ಜೀವನ ಸಾಗಿಸುತ್ತಿದ್ದ ರಮೇಶ ಮಹಾಲಿಂಗಯ್ಯ ಕಡಪಟ್ಟಿ ಅವರ ಮಗಳು ಕುಮಾರಿ ಪ್ರಿಯಾಂಕ ತನ್ನ ತಂದೆ-ತಾಯಿ ಕಷ್ಟ ಪಟ್ಟು ಕಲಿಸಿದವರ ಹೆಸರನ್ನು ಬಾನೆತ್ತರಕ್ಕೆ ಹಾರುವ ವಿಮಾನ ಕಂಪನಿಯಲ್ಲಿ ಏರಿಯಾ ಬ್ರ್ಯಾಂಡ್ ಮ್ಯಾನೇಜರ ಆಗಿ ನೌಕರಿ ಗಿಟ್ಟಿಸಿ ಹೆತ್ತವರ ಕನಸನ್ನು ನನಸು ಮಾಡಿದ್ದಾಳೆ. ಪ್ರಿಯಾಂಕ ಕಲಿತಿದ್ದು ಸ್ಥಳೀಯ ಬನಶಂಕರಿ ಕನ್ನಡ ಮಾದ್ಯಮ ಪ್ರಾಥಮಿಕ ಶಾಲೆಯಲ್ಲಿಯಾದರೂ, ಪ್ರೌಢ ಶಿಕ್ಷಣ ಸ್ಥಳೀಯ ಎಸ್.ಸಿ.ಪಿ. ಕೆ.ಎಲ್.ಇ. ಪ್ರೌಢ ಶಾಲೆಯಲ್ಲಿ ನಂತರ ಉತ್ತಮ ಅಂಕಗಳನ್ನು ಪಡೆದು, ಇಲ್ಲಿಯ ಪ್ರತಿಷ್ಠಿತ ಕೆ.ಎಲ್.ಇ. ಪಾಲಿಟೆಕ್ನಿಕ್ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ಸ ಮತ್ತು ಕಮ್ಯೂನಿಕೇಷನ್ ನಲ್ಲಿ ವಿದ್ಯಾಭ್ಯಾಸದೊಂದಿಗೆ ಉನ್ನತ ಶ್ರೇಣಿಯಲ್ಲಿ ಪಾಸಾಗಿದ್ದಾಳೆ.

         ಕಳೆದ ವರ್ಷ ನಿಯಾನ್ಸ್ ಗ್ರೂಪ ಇಂಡಿಯಾ ವಿಮಾನ ಸಂಸ್ಥೆಗೆ ಸೇರಿದ ಪ್ರಿಯಾಂಕ ಪ್ರಸ್ತುತ ಈ ಕಂಪನಿಯ ಬ್ರ್ಯಾಂಡ್ ಮ್ಯಾನೆಜರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ. ತಂದೆ ರಮೇಶ, ತಾಯಿ ಶಕುಂತಲಾ ಕಡಪಟ್ಟಿ, ಬನಶಂಕರಿ ಶಾಲೆಯ ಅಧ್ಯಕ್ಷ ಶೇಖರ ಅಂಗಡಿ, ಕೆ.ಎಲ್.ಇ. ಪ್ರೌಢ ಶಾಲೆಯ ಉಪ ಪ್ರಾಂಶುಪಾಲ ಎಸ್.ಎ.ಸೂರ್ಯವಂಶಿ, ಕೆ.ಎಲ್.ಇ. ಪಾಲಿಟೆಕ್ನಿಕ್ ಪ್ರಾಚಾರ್ಯ ಎಸ್.ಐ.ಕುಂದಗೋಳ, ಶಿಕ್ಷಕ ವೃಂದ ಹಾಗೂ ಎಲ್ಲ ವಿದ್ಯಾಥರ್ಿ-ನಿಯರು ಕುಮಾರಿ ಪ್ರಿಯಾಂಕಾಳ ಸಾಧನೆಯನ್ನು ಕೊಂಡಾಡಿದ್ದಾರೆ ಹಾಗೂ ಅಭಿನಂದಿಸಿದ್ದಾರೆ.