ಲೋಕದರ್ಶನ ವರದಿ
ಸಿದ್ದಾಪುರ,29 : ತಾಲೂಕಿನ ಹಾಸರ್ಿಕಟ್ಟಾ ಗಣೇಶ ಮಂಟಪದಲ್ಲಿ ಹಾಸರ್ಿಕಟ್ಟಾ-ಮುಠ್ಠಳ್ಳಿ ಪ್ರಗತಿ ಬಂಧು ಸ್ವ-ಸಹಾಯ ಸಂಘಗಳ ಒಕ್ಕೂಟದ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ನಡೆಯಿತು.
ಹಾಸರ್ಿಕಟ್ಟಾ ಸೇವಾ ಸಹಕಾರಿ ಸಂಘದ ನಿವೃತ್ತ ಮುಖ್ಯಕಾರ್ಯನಿವರ್ಾಹಕ ಅಶೋಕ ಆರ್.ಹೆಗಡೆ ಹೀನಗಾರ ನೂತನ ಪದಾಧಿಕಾರಿಗಳಿಗೆ ಅಧಿಕಾರ ಹಸ್ತಾಂತರಿಸಿ ಗ್ರಾಮೀಣ ಪ್ರದೇಶದಲ್ಲಿ ಉತ್ತಮ ಸಂಬಂಧ, ಪರಸ್ಪರ ಚಚರ್ೆ ಹಾಗೂ ಸಮಾಜದ ಬೆಳವಣಿಗೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹೆಚ್ಚು ಪೂರಕವಾಗಿದೆ ಎಂದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ರವಿರಾಜ್ ನಾಯಕ ಯೋಜನೆಯ ಉದ್ದೇಶ, ಪಾಲ್ಗೊಳ್ಳುವಿಕೆ, ಅದರ ಮಹತ್ವದ ಕುರಿತು ಮಾಹಿತಿ ನೀಡಿದರು.
ಅಧ್ಯಕ್ಷತೆವಹಿಸಿ ಮಾತನಾಡಿದ ನಿವೃತ್ತ ಮುಖ್ಯಾಧ್ಯಾಪಕ ಎಲ್.ಜಿ.ಹೆಗಡೆ ಹಾಸರ್ಿಕಟ್ಟಾ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ಇಡೀ ಸಮಾಜಕ್ಕೆ ಒಳ್ಳೆಯದಾಗುವುದರೊಂದಿಗೆ ಸಂಘದ ಸದಸ್ಯರು ಆಥರ್ಿಕವಾಗಿ ಸುಧಾರಿಸಿಕೊಳ್ಳುವುದಕ್ಕೆ ಅವಕಾಶವಾಗಿದೆ ಎಂದು ಹೇಳಿದರು.
ಪತ್ರಕರ್ತ ರಮೇಶ ಹಾಸರ್ಿಮನೆ, ವರ್ತಕ ಅನಂತ ಶಾನಭಾಗ ಹಾಸರ್ಿಕಟ್ಟಾ ಒಕ್ಕೂಟದ ನಿಕಟಪೂರ್ವ ಅಧ್ಯಕ್ಷರಾದ ಶ್ರೀಪತಿ ನಾಯ್ಕ ಹಳಿಯಾಳ, ಹನುಮಂತ ಗೌಡ ಮಾದ್ಲಮನೆ ನೂತನ ಅದ್ಯಕ್ಷರಾದ ಎಂ.ಎನ್.ಗೌಡ ಹೊಸ್ಕೊಪ್ಪ ಹಾಗೂ ಶಶಿಕಲಾ ಎಂ. ಆಚಾರಿ ಹಾಸರ್ಿಕಟ್ಟಾ ಉಪಸ್ಥಿತರಿದ್ದರು.
ಮೇಲ್ವಿಚಾರಕರಾದ ಚಂದ್ರು, ವಿಠ್ಠಲ, ಸೇವಾ ಪ್ರತಿನಿಧಿಗಳಾದ ನಾರಾಯಣ ಗೌಡ, ಜಯಂತ ನಾಯ್ಕ, ಕವನಾ ನಾಯ್ಕ ಕಾರ್ಯಕ್ರಮ ನಿರ್ವಹಿಸಿದರು. ಆಶ್ರೀತಾ ಆಚಾರಿ ಪ್ರಾರ್ಥನೆ ಹಾಡಿದರು.
ಇದಕ್ಕೂ ಪೂರ್ವದಲ್ಲಿ ವಿ. ಚಂದ್ರಶೇಖರ ಭಟ್ಟ ಗಾಳಿಮನೆ ಅವರ ಪೌರೋಹಿತ್ಯದಲ್ಲಿ ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು.