4ರಂದು ನೂತನ ಕೋರ್ಟ ಲೋಕಾರ್ಪಣೆ: ಮುನವಳ್ಳಿ

ಲೋಕದರ್ಶನ ವರದಿ

ಗಂಗಾವತಿ 28: 6.50 ಕೋ.ರೂ. ವೆಚ್ಚದಲ್ಲಿ ನಿಮರ್ಾಣಗೊಂಡಿರುವ ನೂತನ ಕೋರ್ಟನ್ನು ಮಾ.4 ರಂದು ಲೋಕಾರ್ಪಣೆ ಮಾಡಲಾಗುವದು ಎಂದು ಶಾಸಕ ಪರಣ್ಣ ಮುನವಳ್ಳಿ ತಿಳಿಸಿದರು.

ಬುಧವಾರ ಕೋರ್ಟ ಕಟ್ಟಡವನ್ನು ವೀಕ್ಷಿಸಿದ ಅವರು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಇನ್ನು ಅಲ್ಪಸ್ವಲ್ಪ ಕಾಮಗಾರಿ ಬಾಕಿ ಇದೆ. ಉಳಿದ ಕೆಲಸಗಳನ್ನು ತ್ವರಿತಗತಿಯಲ್ಲಿ ನಿರ್ವಹಿಸಬೇಕು ಎಂದು ಶಾಸಕರು ಗುತ್ತೇದಾರರಿಗೆ ಸೂಚಿಸಿದರು. ಹಿರಿಯ ನ್ಯಾಯವಾದಿಗಳಾದ ದೊಡ್ಡಬಸಪ್ಪ ಹಾಲಸಮುದ್ರ, ನಾಗನಗೌಡ, ನವಲಿ ಪ್ರಲ್ಹಾದರಾವ್, ಸೈಯದ್ ಹಾಷುಮುದ್ದೀನ ಇದ್ದರು.