ನಿತ್ಯ ಸಂಧ್ಯಾವಂದನೆ, ಗಾಯತ್ರಿ ಜಪ ಅವಶ್ಯ: ಶೃಂಗೇರಿ ಶ್ರೀಗಳು

ಲೋಕದರ್ಶನ ವರದಿ

ಮುಧೋಳ28: ಯಾರು ಧರ್ಮವನ್ನು ರಕ್ಷಣೆ ಮಾಡುತ್ತಾರೆ ಅವರನ್ನು ಧರ್ಮ ರಕ್ಷಣೆ ಮಾಡುತ್ತದೆ. ಅದನ್ನು ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿ ಪಾಲಿಸಲೇಬೇಕು. ಅಂದಾಗ ಮಾತ್ರ ಮನುಷ್ಯ ನಿಜವಾದ ಸುಖ, ಶಾಂತಿ, ನೆಮ್ಮದಿಯನ್ನು ಪಡೆಯುತ್ತಾನೆಂದು ಶೃಂಗೇರಿ ಶಾರದಾ ಪೀಠದ ವಿಧುಶೇಖರ ಭಾರತೀ ಶ್ರೀಗಳು ಹೇಳಿದರು.

     ಅವರು ಪ್ರಪ್ರಥಮ ಬಾರಿಗೆ ದ್ವಿಗ್ವಿಜಯ ಯಾತ್ರೆಯ ಮೂಲಕ ಮುಧೋಳ ನಗರಕ್ಕೆ ಆಗಮಿಸಿ ಸ್ಥಳೀಯ ಹೇಮರಡ್ಡಿ ಕಲ್ಯಾಣ ಮಂಟಪದಲ್ಲಿ ಧಮರ್ೋಪದೇಶ ಬೋಧಿಸಿ ಮಾತನಾಡಿ, ನಿತ್ಯ ಕನಿಷ್ಠ ಪಕ್ಷ ಸಂಧ್ಯಾವಂದನೆ, ಗಾಯತ್ರಿ ಜಪ ಮಾಡುವುದರ ಮೂಲಕ ಆರೋಗ್ಯವನ್ನು ವೃದ್ಧಿಸಿಕೊಳ್ಳಬಹುದು. ನಿತ್ಯ ಬದುಕಿನಲ್ಲಿ ಸತ್ಯದಿಂದ ಬದುಕಬೇಕು. ಪರಬ್ರಹ್ಮ ಸತ್ಯ ಜಗತ್ತು ಮಿಥ್ಯವಾಗಿದೆಂದು ವ್ಯಾಖ್ಯಾನಿಸಿ  ದೇಶದ ನಾಲ್ಕು ಪೀಠಗಳಲ್ಲಿ ಅತ್ಯಂತ ಪ್ರಾಚೀನ ಹಾಗೂ ಮಹತ್ವವನ್ನು ಪಡೆದುಕೊಂಡಿರುವ ಶೃಂಗೇರಿ ಪೀಠ ಅದ್ವೈತ ಸಿದ್ಧಾಂತದ ಮೂಲಕ ಧಾಮರ್ಿಕ ಹಾಗೂ ಆಧ್ಯಾತ್ಮಿಕ ಸೇವೆಯನ್ನು ನಿರಂತರ ಮಾಡುತ್ತ ಗುರುಶಿಷ್ಯ ಪರಂಪರೆಯನ್ನು ಉಳಿಸಿಕೊಂಡು ಬಂದಿದೆಂದು  ಶ್ರೀಗಳು ಅಭಿಮಾನದಿಂದ ಹೇಳಿದರು. ಸನಾತನ ಹಿಂದೂ ಧರ್ಮ ಪರಂಪರೆಯನ್ನು ಉಳಿಸಿಕೊಂಡು ಹೋಗಬೇಕೆಂದು ಅವರು ಮನವಿ ಮಾಡಿದರು. ಅಚ್ಚುಕಟ್ಟಾದ ಕಾರ್ಯಕ್ರಮ ಹಾಗೂ ಭವ್ಯ ಶೋಭಾಯಾತ್ರೆಯ ಬಗ್ಗೆ ಪ್ರೀತಿಯ ಆದರಾತಿಥ್ಯ ತೋರಿದ ಸಂಘಟಕರ ಬಗ್ಗೆ ಶ್ರೀಗಳು ಮೆಚ್ಚಿಗೆಯನ್ನು ವ್ಯಕ್ತಪಡಿಸಿದರು.

   ಇದೇ ವೇಳೆ ಭಕ್ತರಿಂದ ಸಂಗ್ರಹಿಸಿದ ರೂ. ಒಂದು ಲಕ್ಷ ಹಮ್ಮಿಣಿಯನ್ನು ಹಾಗೂ ಬಿನ್ನವತ್ತಳಿಕೆಯನ್ನು ಪಾಂಡುರಂಗಾಚಾರ್ಯ ಜೋಶಿ, ವಿಠ್ಠಲಬಡಜಿ ಕವಠೇಕರ, ಜಿ.ಆರ್.ಜೋಶಿ, ಅರವಿಂದ ಬಾಜಿ, ಗುರುರಾಜ ಕಟ್ಟಿ, ಸೋನಾಪ್ಪಿ ಕುಲಕಣರ್ಿ,ಡಾ.ಆನಂದ ಕುಲಕಣರ್ಿ  ಪಿ.ಎನ್.ಮೋಕಾಸಿ, ಪಿ.ಎನ್.ಆನಿಖಿಂಡಿ, ಪ್ರಮೋದ ಬಾಜಿ,ಆನಂದ ಕುಲಕಣರ್ಿ, ಜೇರೆ, ರಾಘವೇಂದ್ರ ದಿಡ್ಡಿ, ವಿ.ವಿ.ಕುಲಕಣರ್ಿ,ಬಳವಂತ ರಾವ ಕುಲಕಣರ್ಿ ಅವರು ಸೇರಿ ಅಪರ್ಿಸಿದರು.

   ಇದಕ್ಕೊ ಮೊದಲು ಶ್ರೀಗಳನ್ನು ನಗರದ ವೆಂಕಟೇಶ್ವರ ದೇವಾಲಯದಿಂದ ವೇದಘೋಷ, ಪೂರ್ಣಕುಂಭ ಹಾಗೂ ವಿವಿಧ ವಾದ್ಯ ಮೇಳದೊಂದಿಗೆ ಆನೆ, ಅಂಬಾರಿ ಸಹಿತ ಬೃಹತ ಶೋಭಾ ಯಾತ್ರೆ ನಗರದ ಪ್ರಮುಖ ಬೀದಿಗಳಲ್ಲಿ ನಡೆಸಲಾಯಿತು.

   ಶಾರದಾ ಭಜನಾ ಮಂಡಳಿಯಿಂದ ಪ್ರಾರ್ಥನೆ, ಸೋನಾಪ್ಪಿ ಕುಲಕಣರ್ಿ ಸ್ವಾಗತಿಸಿದರು, ಗುರುರಾಜ ಕಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಗುರುನಾಥ ಜೋಶಿ ಹಾಗೂ ವಲ್ಲಭ ಕವಠೇಕರ ಬಿನ್ನವತ್ತಳಿಕೆ ಓದಿದರು. ಪಾಂಡುರಂಗಾಚಾರ್ಯ ಜೋಶಿ, ಹಾಗೂ ಸುಬ್ಬಣ್ಣ ಮನಗೂಳಿ ಅವರು ಅಭಿನಂದನಾಪರ ಮಾತನಾಡಿದರು. 

ವಿಶ್ವನಾಥ ಹಂಪಿಹೋಳ್ಳಿ ಅವರಿಂದ ಪ್ರವಚನ ನಡೆಯಿತು. ಅಶೋಕ ಕುಲಕಣರ್ಿ ನಿರೂಪಿಸಿದರು. ಪ್ರವೀಣ ಬಾಜಿ ವಂದಿಸಿದರು.