ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮ

ಲೋಕದರ್ಶನ ವರದಿ

ಯರಗಟ್ಟಿ 26: ಭಾರತ ಸರಕಾರದ ನೆಹರು ಯುವ ಕೇಂದ್ರ ಬೆಳಗಾವಿ ಹಾಗೂ ಭೀಮ ಘರ್ಜನೆ ಯುವಕ ಮಂಡಳ ಗವನಾಳ ಮತ್ತು ಸರಕಾರಿ ಪದವಿ ಪೂರ್ವ ಕಾಲೇಜು ಯರಗಟ್ಟಿ ಇವುಗಳ ಸಂಯುಕ್ತ ಆಶ್ರಯದಲ್ಲಿ ಹುಕ್ಕೇರಿ ತಾಲೂಕಾ ಮಟ್ಟದ ನೆರೆಹೊರೆ ಯುವ ಸಂಸತ್ತು ಕಾರ್ಯಕ್ರಮವನ್ನು ದಿ.22ರಂದು ಮಧ್ಯಾಹ್ನ 2.30ಕ್ಕೆ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ  ಹಮ್ಮಿಕೊಳ್ಳಲಾಗಿತ್ತು. 

ಕಾರ್ಯಕ್ರಮದ ನಿಮಿತ್ಯ ವಿಶೇಷ ಉಪನ್ಯಾಸಗಳನ್ನು ಯುವಕ-ಯುವತಿಯರಿಗೆ ನೀಡಲಾಯಿತು ಮತ್ತು ಯೋಗಾಸನದ ಮಹತ್ವ ಹಾಗೂ ವಿಧಗಳು ಮತ್ತು ಪ್ರಯೋಜನಗಳ ಕುರಿತು ಮಾಹಿತಿ ನೀಡಲಾಯಿತು. ಮೊದಲಿಗೆ ಕಾರ್ಯಕ್ರಮವನ್ನು ವೇದಿಕೆ ಮೇಲಿನ ಅತಿಥಿಗಳಿಂದ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಲಾಯಿತು. 

ಮೊದಲಿಗೆ ಕಿರಣ ಎಂ. ಚೌಗಲಾ ಇವರು ನೆಹರು ಯುವ ಕೇಂದ್ರದ ಕುರಿತು ಮತ್ತು ಯುವಕರ ಸಾಮಾಜಿಕವಾಗಿ ಯಾವ ರೀತಿ ತಮ್ಮ ಪಾತ್ರವನ್ನು ನಿರ್ವಹಿಸಬೇಕೆಂದು ಉಪನ್ಯಾಸ ನೀಡಿದರು. ನಂತರ ಶ್ರೀ ಚಿದಾನಂದ ಡಂಬಳ ಇವರು ಯುವಕರ ಆರೋಗ್ಯವು ದೇಶ ಅಭಿವೃದ್ಧಿಗೆ ಯಾವ ರೀತಿ ಪ್ರಯೋಜನಗಳ ಕುರಿತು ಮತ್ತು ದುಷ್ಚಟಗಳ ಕುರಿತು ಉಪನ್ಯಾಸ ನೀಡಿದರು. ರಾಜು ಕಾಂಬಳೆ ಇವರು ಯೋಗ ಎಂದರೇನು? ಅದರ ವಿಧಗಳು, ಪ್ರಯೋಜನಗಳ ಕುರಿತು ಉಪನ್ಯಾಸ ನೀಡಿ ಯುವಕ-ಯುವತಿಯರಿಗೆ ಯೋಗಾಸನಗಳನ್ನು ಕಲಿಸಿಕೊಟ್ಟರು. ನಂತರ ಎಂ.ಕೆ ಖೋತ ಇವರು ವ್ಯಕ್ತಿತ್ವ ವಿಕಸನದ ಕುರಿತು ಉಪನ್ಯಾಸ ನೀಡಿದರು. ನಂತರ ಬಸಯ್ಯಾ ಹಿರೇಮಠ ಇವರು ನೆಹರು ಯುವ ಕೇಂದ್ರದ ಯೋಜನೆಗಳು ಹಾಗೂ ಕಾರ್ಯಕ್ರಮದ ಕುರಿತು ಉಪನ್ಯಾಸ ನೀಡಿದರು. ಕಿರಣ ಎಂ. ಚೌಗಲಾರವರು ಅದ್ಯಕ್ಷೀಯ ಭಾಷಣವನ್ನು ನೆರವೇರಿಸಿದರು. ಕಾರ್ಯಕ್ರಮವನ್ನು ನಿವರ್ಾಣಿ ಕಲ್ಲೋಳಿ ಇವರು ನಿರೂಪಿಸಿದರು, ಕಾರ್ಯಕ್ರಮದಲ್ಲಿ ಸತೀಶ ನಿಜನ್ನವರ, ವಾಯ್.ಬಿ ರಾಮಗೌಂಡ, ಪಿ.ಎಂ ಜಮಖಂಡಿ, ಸವಿತಾ ಮಲಗೌಡನ್ನವರ ಹಾಗೂ ಸವಿತಾ ನಗಾರಿ ಮತ್ತು ಯುವಕ ಸಂಘದ ಸರ್ವ ಸದಸ್ಯರು ಉಪಸ್ಥಿತರಿದ್ದರು.