ಮಕ್ಕಳ ಭವಿಷ್ಯ ಉಜ್ವಲಗೊಳ್ಳಲು ಗುಣಮಟ್ಟದ ಶಿಕ್ಷಣ ಅಗತ್ಯ: ಸಾದಿಕ ಅಲಿ

ಲೋಕದರ್ಶನ ವರದಿ

ಕೊಪ್ಪಳ 15: ಇಂದಿನ ಮಕ್ಕಳೆ ಈ ನಾಡಿನ ಭಾವಿ ಪ್ರಜೆಗಳಾಗಿದ್ದು, ಅವರ ಮುಂದಿನ ಭವಿಷ್ಯ ಉಜ್ವಲಗೊಳ್ಳಲು ಅವರಿಗೆ ಒಳ್ಳೆಯ ಸಂಸ್ಕಾರ ಕಲಿಸಿ ಕೊಡುವ ಜೊತೆಗೆ, ಉತ್ತಮ ಗುಣಮಟ್ಟದ ಶಿಕ್ಷ ಅಗತ್ಯವಾಗಿದ್ದು, ಶಿಕ್ಷಕರು ಈ ದಿಶೆಯಲ್ಲಿ ತಮ್ಮ ಜವಾಬ್ದಾರಿ ಪ್ರಾಮಾಣಿಕವಾಗಿ ನಿಭಾಯಿಸಬೇಕೆಂದು ಕೊಪ್ಪಳದ ಹಿರಿಯ ಪತ್ರಕರ್ತ ಹಾಗೂ ಮಿಲ್ಲತ್ ಶಿಕ್ಷಣ ಸಂಸ್ಥೆಯ ಮುಖ್ಯ ಸಲಹೆಗಾರ ಎಂ. ಸಾದಿಕ ಅಲಿ ಎಂ. ಸಾದಿಕ ಅಲಿ ಹೇಳಿದರು.

ಅವರು ನಗರದ ಬಹಾದ್ದುರಬಂಡಿ ರಸ್ತೆಯಲ್ಲಿರುವ ಮಿಲ್ಲತ ಶಿಕ್ಷಣ ಮತ್ತು ಕಲ್ಯಾಣ ಸಂಸ್ಥೆಯ ಮಿಲ್ಲತ್ ಪಬ್ಲಿಕ್ ಶಾಲೆಯಲ್ಲಿ ಎರ್ಪಡಿಸಿದ ಮಕ್ಕಳ ದಿನಾಚರಣೆ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು ಮಕ್ಕಳು ದೇಶದ ಆಸ್ತಿಯಾಗಿದ್ದು ಅವರನ್ನು ಒಳ್ಳೆಯ ಸಂಸ್ಕಾರ ಕಲಿಸಿ ನಮ್ಮ ನಾಡಿನ ಕಲೆ-ಸಂಸ್ಕೃತಿ ಪರಂಪರೆ ರಾಷ್ಠ್ರೀಯ ಭಾವೈಕ್ಯತೆ ಅವರಲ್ಲಿ ಬೆಳೆಸುವಲ್ಲಿ ಶಿಕ್ಷಕರು ಶ್ರಮಿಸಬೇಕೆಂದರು.

ಮುಂದುವರೆದ ಮಾತನಾಡಿದ ಅವರು ದೇಶದ ಪ್ರಥಮ ಪ್ರಧಾನಿಯಾಗಿದ್ದ ಪಂಡಿತ್ ಜವಾಹರ್ಲಾಲ್ ನೆಹೆರು ಮಕ್ಕಳ ಬಗ್ಗೆ ಅಪಾರ ಪ್ರೀತಿ ಇತ್ತು, ಮಕ್ಕಳೆಲ್ಲರು ಅವರಿಗೆ ಚಾಚಾ ನೇಹರು ಎಂದು ಕರೆಯುತ್ತಿದ್ದರು. ಅದಕ್ಕಾಗಿಯೇ ಅವರ ಜನ್ಮದಿನ ಮಕ್ಕಳ ದಿನಾಚರಣೆ ಎಂಬಂತೆ ನಾವು ಆಚರಿಸುತ್ತಿದ್ದೆವೆ. ನಮ್ಮ ದೇಶದ ಮಹಾನ್ ನಾಯಕರ ಆದರ್ಶ ಜೀವನದಲ್ಲಿ ಅಳವವಡಿಸಿಕೊಳ್ಳ ಬೇಕು, ಅವರ ಜೀವನ ಚರಿತ್ರೆ ಮತ್ತು ಸಾಧನೆಗಳ ಬಗ್ಗೆ ಹಾಗೂ ದೇಶಕ್ಕಾಗಿ ಶ್ರಮಿಸಿದ ಬಗ್ಗೆ ಮಕ್ಕಳಿಗೆ ಮನವರಿಕೆ ಮಾಡಿ ಅವರನ್ನು ಜಾಗೃತಿಗೊಳಿಸಿ ಉತ್ತಮ ಪ್ರಜೆಗಳನ್ನಾಗಿ ಪರಿವತರ್ಿಸುವ ಕೆಲಸ ಶಿಕ್ಷಕರು ಮಾಡಬೇಕೆಂದು ಹಿರಿಯ ಪತ್ರಕರ್ತ ಹಾಗೂ ಮಿಲ್ಲತ್ ಶಿಕ್ಷಣ ಸಂಸ್ಥೆಯ ಮುಖ್ಯ ಸಲಹೆಗಾರ ಎಂ. ಸಾದಿಕ ಅಲಿ ಹೇಳಿದರು.

ಸಮಾರಂಭದ ಅಧ್ಯಕ್ಷತೆಯನ್ನು ಮಿಲ್ಲತ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸಯ್ಯದ್ ಇಮಾಮ್ ಹುಸೇನ್ ಸಿಂದೋಗಿ ವಹಿಸಿದ್ದರು, ಕಾರ್ಯಕ್ರಮದ ವೇದಿಕೆ ಮೆಲೆ ಶಾಲೆಯ ತರಗತಿಗಳ ಪ್ರತಿನಿದಿ ವಿದ್ಯಾಥರ್ಿಗಳೆ ಅತಿಥಿಗಳಾಗಿ ಪಾಲ್ಗೊಂಡಿದ್ದರು, ಶಾಲೆಯಲ್ಲಿ ಎರ್ಪಡಿಸಿದ ವಿವಿಧ ಸ್ಪಧರ್ೆಗಳಲ್ಲಿ ಭಾಗವಹಿಸಿದ ಮತ್ತು ಶಾಲೆಗೆ ದಾಖಲೆಯ ಹಾಜರಿ ನಿಮರ್ಿಸಿದ ವಿದ್ಯಾಥರ್ಿಗಳಿಗೆ ಬಹುಮಾನ ವಿತರಿಸಲಾಯಿತು. ಕೇಂದ್ರದ ಮಂತ್ರಿ ಹಾಗೂ ನಮ್ಮ ನಾಡಿನ ನಾಯಕ ಅನಂತಕುಮಾರ ನಿಧನಹೊಂದಿದ ಪ್ರಯುಕ್ತ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಮುಖ್ಯ ಶಿಕ್ಷಕ ಎಂ.ಡಿ. ಇಸ್ಮಾಯಿಲ್ ಅಜೀಜ್ ಸ್ವಾಗತಿಸಿದರು, ಸಹ ಶಿಕ್ಷಕ ನರಸಿಂಹ ದೇಶಾಯಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಇನ್ನೊರ್ವ ಸಹಶಿಕ್ಷಕಿ ಮಂಜುಳ ಮಡಿವಾಳರ್ ಕಾರ್ಯಕ್ರಮ ನಿರೂಪಿಸಿದರೆ, ನಾಜ್ನೀನ್ ಕಿಲ್ಲೇದಾರ್ ಕೊನೆಯಲ್ಲಿ ವಂದಿಸಿದರು.