ಲೋಕದರ್ಶನ ವರದಿ
ಚಿಕ್ಕೋಡಿ 26: ಇಲ್ಲಿನ ಕೆ.ಎಲ್.ಇ. ಅಭಿಯಾಂತ್ರಿಕ ಹಾಗೂ ತಾಂತ್ರೀಕ ಮಹಾವಿದ್ಯಾಲಯದಲ್ಲಿ ವಿದ್ಯಾಥರ್ಿಗಳ ತಾಂತ್ರ್ರೀಕ ಜ್ಞಾನ ಮತ್ತು ಕೌಶಲ್ಯಗಳನ್ನು ಹೆಚ್ಚಿಸಲು ಪ್ರತಿ ಎರಡು ವರ್ಷಕೊಮ್ಮೆ ಎರಡು ದಿನಗಳ ರಾಷ್ಟ್ರಮಟ್ಟದ ತಾಂತ್ರೀಕ ಸಮ್ಮೇಳನವನ್ನು ಮಾರ್ಚ 1 ಮತ್ತು 2 ರಂದು ಹಮ್ಮಿಕೊಳ್ಳಲಾಗಿದೆ. ಈ ಸಮ್ಮೇಳನಕ್ಕೆ ಕನರ್ಾಟಕ, ಮಹಾರಾಷ್ಟ್ರ, ಗೋವಾ, ತೇಲಂಗನಾ, ಆಂದ್ರಪ್ರದೇಶ, ತಮಿಳನಾಡು ಸೇರಿದಂತೆ ಹಲವಾರು ರಾಜ್ಯಗಳಿಂದ ಸುಮಾರು 2000ಕ್ಕೂ ಹೆಚ್ಚು ಇಂಜೀನಿಯರಿಂಗ್ ವಿದ್ಯಾಥರ್ಿಗಳು ಪಾಲ್ಗೋಳ್ಳುಲಿದ್ದಾರೆ ಎಂದು ಪ್ರಾಚಾರ್ಯ ಡಾ. ಪ್ರಸಾದ ರಾಂಪೂರೆ ತಿಳಿಸಿದರು.
ಈ ಕುರಿತು ಕಾಲೇಜಿನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು,ಈ ಸಮ್ಮೇಳನದಲ್ಲಿ ಸಿವಿಲ್ ವಿಭಾಗದಿಂದ ಪ್ರಬಂಧ ಮಂಡನೆ, ಕ್ಲ್ಯಾಶ್ ಆಫ್ ಸಿವಿಲಿಯನ್ಸ್(ಕ್ವಿಜ್ ಸ್ಪಧರ್ೆ), ಸ್ಟ್ರಕ್ಚರ್ ಮಾಡೇಲಿಂಗ್, ಸಿವಿಲ್ ಚಾಂಪ್, ಸವರ್ೇ ಹಂಟ್ ಸ್ಪಧರ್ೆಗಳನ್ನು ಹಮ್ಮಿಕೊಳ್ಳಲಾಗಿದೆ. ಮೇಕ್ಯಾನಿಕಲ್ ವಿಭಾಗದಿಂದ ಪ್ರಬಂಧ ಮಂಡನೆ, ಟೆಕ್ನೀಕಲ್ ಕ್ವಿಜ್, ಮೆಕ್ಕ ಸ್ಟಾರ್, ಕಾರ್ ಮೆಕ್ಯಾನೀಕ್ ಸಿಮ್ಯುಲೆಟರ್, 3ಡಿ ಮಾಡೆಲಿಂಗ್ಗಳನ್ನು ಹಮ್ಮಿಕೊಳ್ಳಲಾಗಿದೆ. ಇಲೆಕ್ಟ್ರಾನೀಕ್ಸ ಮತ್ತು ಕಮ್ಯೂನಿಕೇಶನ್ ವಿಭಾಗದಿಂದ ಪ್ರಬಂಧ ಮಂಡನೆ, ಟೆಕ್ನೋ ಫಿಲಿಯಾ(ಕ್ವಿಜ್ ಸ್ಪಧರ್ೆ), ಸಕರ್ಿಟ್ ಡಿಬಗ್ಗಿಂಗ್, ಲಾಜಿಕ್ ಮೇನಿಯಾ ಹಾಗೂ ವಚರ್ುವಲ್ ಪ್ಲೆಸಮೆಂಟ್ ಸ್ಪಧರ್ೆಗಳನ್ನು ಹಮ್ಮಿಕೊಳ್ಳಲಾಗಿದೆ. ಕಂಪ್ಯೂಟರ್ ಸೈನ್ಸ್ ವಿಭಾಗದಿಂದ ಪ್ರಬಂಧ ಮಂಡನೆ, ಟು ಬೀ ಡೆನಿಸ್ ರೀಚೆ, ಟೆಕ್ನಿಕಲ್ ಟ್ರೆಜರ ಹಂಟ್, ಕ್ವೀಜ್ ಬೌಲ್, ಡಿ ಬಿ ಮೆನಿಯಾ ಸ್ಪಧರ್ೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದರು.
ಮಾರ್ಚ 1 ರಂದು ಬೆಳಿಗ್ಗೆ 10 ಘಂಟೆಗೆ ಈ ತಾಂತ್ರೀಕ ಸಮ್ಮೇಳನವನ್ನು ಬೆಂಗಳೂರಿನ ಪಜಾಕಾ ಕಂಪನಿ ಸಿಇಒ ಶಾಮಸುಂದರ ಎಚ್. ಎಸ್. ಉದ್ಘಾಟಿಸಲಿದ್ದಾರೆ. ಅಥಿತಿಗಳಾಗಿ ಇಸ್ರೋ ಮಾಜಿ ಸಂಚಾಲಕ ವಿಷ್ಣು ಮಿಸಾಳೆ ಆಗಮೀಸಲಿದ್ದಾರೆ. ಅಧ್ಯಕ್ಷತೆಯನ್ನು ಸಂಸ್ಥೆಯ ನಿದರ್ೇಶಕ ಬಸವರಾಜ ಪಾಟೀಲ ವಹಿಸಲಿದ್ದಾರೆ. ಅಂದು ಸಂಜೆ 5 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗಲಿವೆ ಎಂದರು.
ಮಾರ್ಚ 2 ರಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದೆ. ಸಮ್ಮೇಳನದಲ್ಲಿ ಪಾಲ್ಗೊಂಡು ವಿಜೇತರಿಗೆ ಸೂಕ್ತ ಬಹುಮಾನ ನೀಡಿ ಗೌರವಿಸಲಾಗುತ್ತದೆ ಎಂದರು. ಪ್ರೊ. ವಿವೇಕ ಪಾಟಿಲ ಹಾಗೂ ಪ್ರೊ. ವಿಜಯ ಹಾಲಪ್ಪನವರ, ಕು. ವಿಶ್ವೆಶ್ವರಯ್ಯಾ ಹಿರೇಮಠ, ಕು. ನಿಕಿತಾ ಕದಮ, ಪ್ರೊ. ವಿ. ಎಮ್. ಬುದ್ಯಾಳ, ಡಾ. ಸುಭಾಷ ಮೇಟಿ, ಪ್ರೊ. ಸತೀಶ ಭೋಜನ್ನವರ, ಡಾ. ಸಿದ್ದೇಶ ಎಮ್. ಬಿ., ಪ್ರೊ. ಸಚೀನ ಮೆಕ್ಕಳಕಿ ಉಪಸ್ಥಿತರಿದ್ದರು.