ಲೋಕದರ್ಶನ ವರದಿ
ಬೆಳಗಾವಿ 24: : 'ಸಿವಿಲ್ ಇಂಜನಿಯರಿಂಗ್ ಕ್ಷೇತ್ರದಲ್ಲಿ ಯೋಜನಾ ಕಾರ್ಯದ ನಿರ್ವಹಣೆಯ ಪಾತ್ರ ಎಂಬ ವಿಷಯದ ಕುರಿತಾಗಿ ರಾಷ್ಟ್ರ ಮಟ್ಟದ ವಿಚಾರ ಸಂಕಿರಣವನ್ನು ಇಲ್ಲಿನ ಇಂಜಿನೀಯರಿಂಗ್ ಕಾಲೇಜಿನಲ್ಲಿ ಗುರುವಾರ ಆಯೋಜಿಸಲಾಗಿತ್ತು.
ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಕರಿಸಿದ್ದಪ್ಪನವರು ಈ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದರು. ಸಿವಿಲ್ ಇಂಜನಿಯರಿಂಗ್ ವಿದ್ಯಾರ್ಥಿ ಗಳು ಹೊಸ ನಿಮರ್ಾಣ ವಿಧಾನಗಳನ್ನು ಕಲಿತುಕೊಳ್ಳುವುದರ ಮೂಲಕ ಉತ್ತಮ ಭವಿಷ್ಯವನ್ನು ಹೊಂದಬಹುದು. ಸಿವಿಲ್ ಇಂಜನಿಯರಿಂಗ್ ಹಾಗೂ ಆಡಳಿತ ಕ್ಷೇತ್ರದಲ್ಲಿನ ತಮ್ಮ 35 ವರ್ಷಗಳ ಅನುಭವವನ್ನು ಬಿಚ್ಚಿಟ್ಟರು. ಜೀವನದಲ್ಲಿ ಸರಳತೆಯನ್ನು ಹೊಂದುವದರಿಂದ ಉತ್ತಮ ಆಡಳಿತಗಾರನಾಗಬಹುದು. ಆದ್ದರಿಂದ ವಿದ್ಯಾಥರ್ಿಗಳು ಜೀವನದಲ್ಲಿ ಸರಳತೆಯನ್ನು ರೂಢಿಸಿಕೊಳ್ಳಬೇಕೆಂದು ನುಡಿದರು.
ಹುಬ್ಬಳ್ಳಿಯ ಸ್ಮಾರ್ಟ ಸಿಟಿ ಯೋಜನೆಯ ಮುಖ್ಯ ಎಂಜಿನಿಯರ್ ಎಮ್ ನಾರಾಯಣ ಮಾತನಾಡಿ ಸಿವಿಲ್ ಇಂಜನಿಯರಿಂಗ್ ಯೋಜನಾ ಕಾರ್ಯದ ಮಹತ್ವವನ್ನು ವಿವರಿಸುತ್ತ ಯಾವುದೇ ಯೋಜನೆಗೆ ಮಾನವ ಸಂಪನ್ಮೂಲ, ಕಚ್ಚಾ ವಸ್ತುಗಳು, ಯಂತ್ರಗಳು ಮತ್ತು ಬಂಡವಾಳವನ್ನು ಸರಿಯಾದ ರೀತಿಯಲ್ಲಿ ಆಯೋಜಿಸಿ ಬಳಸಿಕೊಂಡರೆ ಮಾತ್ರ ಯೋಜನಾ ಕಾರ್ಯವು ಯಶಸ್ಸನ್ನು ಕಾಣುವುದು. ಆ ನಿಟ್ಟಿನಲ್ಲಿ ಇಂತಹ ಕಾಯರ್ಾಗಾರಗಳು ಉಪಯುಕ್ತವಾಗಬಲ್ಲದು ಎಂದರು.
ಮಹಾವಿದ್ಯಾಲಯದ ಆಡಳಿತ ಮಂಡಳಿ ಸದಸ್ಯ ವಿ.ಎಮ್. ದೇಶಪಾಂಡೆ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ|| ವಿ.ವಿ. ಕಟ್ಟಿ, ಧಾರವಾಡದ ಇನ್ಸ್ಟಿಟ್ಯೂಟ್ ಆಫ್ ಇಂಜನಿಯರ್ಸ್ ಸಂಸ್ಥೆಯ ಕಾರ್ಯದಶರ್ಿ ವಿಜಯ ಎಚ್. ತೋಟಿಗೇರ್ ಉಪಸ್ಥಿತರಿದ್ದರು.
ಮಹಾರಾಷ್ಟ್ರ, ತಮಿಳುನಾಡು, ಕನರ್ಾಟಕ ರಾಜ್ಯದ ಪ್ರತಿನಿಧಿಗಳು ಪಾಲ್ಗೊಂಡಿದ್ದ ಈ ವಿಚಾರ ಸಂಕಿರಣದಲ್ಲಿ ಸಿವಿಲ್ ಇಂಜನಿಯರಿಂಗ್ ಯೋಜನಾ ಕಾರ್ಯದ ಕುರಿತಾಗಿ ಉಪನ್ಯಾಸ ಕಾರ್ಯಕ್ರಮಗಳು ಮತ್ತು ಪ್ರೈಮ್ವೇರಾ ಹಾಗೂ ಎಮ್.ಎಸ್.ಪಿ. ಸಾಫ್ಟವೇರ್ಗಳ ಪ್ರಾಯೋಗಿಕ ತರಬೇತಿಗಳು ಪ್ರಾರಂಭಗೊಂಡವು.
ಧಾರವಾಡದ ಅಮ್ಮಿನಭಾವಿ ಮತ್ತು ಹೆಗಡೆ ಕನ್ಸ್ಟ್ರಕ್ಷನ್ ಲಿಮಿಟೆಡ್ನ ನಿರ್ದೇಶಕ ಸಂಜಯ ಅಮ್ಮಿನಭಾವಿ ಮತ್ತು ಬೆಳಗಾವಿಯ ಜಿ.ಎಸ್.ಕೆ. ಟ್ರೈನಿಂಗ್ನ ಡಿಸೈನ್ ಇಂಜನಿಯರ್ ಮಂಜುನಾಥ ಐನಾಪುರೆ ತರಬೇತಿ ನೀಡಿದರು.