ರಾಷ್ಟ್ರೀಯ ಕ್ರೀಡಾ ದಿನಾಚರಣೆ

ಲೋಕದರ್ಶನ ವರದಿ

ರಾಯಬಾಗ 12: ಗ್ರಾಮದ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಬೆಕ್ಕೇರಿಯಲ್ಲಿ ರಾಷ್ರ್ಟಿಯ ಕ್ರೀಡಾ ದಿವಸ ಇದರ ಆಚರಣೆಯ ಅಂಗವಾಗಿ ದಿ:29ರಂದು ಮುಂಜಾನೆ 10:30 ಕ್ಕೆ ಬೆಕ್ಕೇರಿಯಲ್ಲಿ ಕಾರ್ಯಕ್ರಮ ಜರುಗಿತು. ನಿಜಗುಣಿ ಕಲಾಪೋಷಕ ಸಂಘ ಮಂಟುರ, ನೆಹರು ಯುವ ಕೆಂದ್ರ ಬೆಳಗಾವಿ (ಯುವ ಕಾರ್ಯ ಮತ್ತು ಕ್ರಿಡಾ ಸಚಿವಾಲಯ) ಮತ್ತು ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಬೆಕ್ಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಉದ್ಗಾಟಿಸಿದ ಮಾತನಾಡಿದ ಸರಕಾರಿ ಹಿರಿಯ ಕನ್ನಡ ಪ್ರಾಥಮಿಕ ಶಾಲೆ ಬೆಕ್ಕೇರಿಯ ಪ್ರದಾನ ಗುರುಗಳಾದ ಎಂ.ಬಿ.ಹುಗಾರ ಪ್ರತಿಯೊಬ್ಬರು ಕ್ರೀಡೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಉನ್ನತ ಮಟ್ಟದ ಸಾಧನೆ ಮಾಡಬೇಕೆಂದು ಕರೆ ನೀಡಿದರು.

        ಕಾರ್ಯಕ್ರಮದಲ್ಲಿ ಆರ್.ಕೆ.ದಲಾಲ, ವಿಜಯ ಉಪಾದ್ಯಾಯ. ಎಸ್.ಎಲ್.ವಡವಡೆ, ಡಿ.ಎಚ್ ವಾಜಂತ್ರಿ, ಎಚ್.ಸಿ.ಚೌಗಲಾ, ಟಿ,ಆರ್.ಚೌವ್ವಾಣ, ಎಸ್.ಎಮ್.ಟೋನ್ನೆ, ಡಿ.ದಯಾನಂದ, ವಿಠ್ಠಲ ಜೊಡಟ್ಟಿ ಇತರರು ಇದ್ದರು.