ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆ

ಲೋಕದರ್ಶನ ವರದಿ

ಬೆಳಗಾವಿ: ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಘಟಕವು ದಿನಾಂಕ: 24.09.2018ರಂದು 50ನೇ ರಾಷ್ಟ್ರೀಯ ಸೇವಾ ಯೋಜನೆ ದಿನಾಚರಣೆಯನ್ನು ಧ್ವಜಾರೋಹಣದ ಮೂಲಕ ಪ್ರಾರಂಭಿಸಲಾಯಿತು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾಧಿಕಾರಿಯಾದ ಡಾ|| ಅಪ್ಪಾಸಾಬ.ಎಲ್.ವ್ಹಿ. ಮಾತನಾಡುತ್ತ, 1969ರ ಸೆಪ್ಟೆಂಬರ್ 24ರಂದು ಪ್ರಾರಂಭಿಸಲಾದ ಈ ಕಾರ್ಯಕ್ರಮ ಇಂದು ಐವತ್ತನೇ ವರ್ಷದಲ್ಲಿ ಪಾದರ್ಪಣೆ ಮಾಡುತ್ತಿದ್ದು ಯುವಜನ ಹಾಗೂ ಕ್ರೀಡಾ ಸಚಿವಾಲಯವು ಈ ದಿನವನ್ನು ವಿಶಿಷ್ಟ ಲಾಂಛನದೊಂದಿಗೆ ದೇಶಾದ್ಯಾಂತ ಇಂದು ಆಚರಿಸುತ್ತಿದೆ.  

ಕಾರ್ಯಕ್ರಮವು ಸಾರ್ವಜನಿಕ ಕಲ್ಯಾಣ ಹಾಗೂ ನಿಸೃಹ ಸೇವೆಯ ಮನೋಭಾವದ ಮೂಲ ಧ್ಯೇಯದೊಂದಿಗೆ ಆಚರಿಸಲ್ಪಡುತ್ತಿದೆ.  ವಿಧ್ಯಾಥರ್ಿಗಳಲ್ಲಿ ಸೇವಾ ಮನೋಭಾವ, ನಾಯಕತ್ವಗುಣ, ಮಾನವೀಯತೆ, ಪಕ್ಷಪಾತವಿಲ್ಲದ ಗುಣ ಹಾಗೂ ಇನ್ನಿತರ ಸೇವಾಗುಣಗಳನ್ನು ಮೈಗೂಡಿಸಿಕೊಳ್ಳಲು ಈ ಕಾರ್ಯಕ್ರಮವು ನೆರವಾಗುತ್ತದೆ. ಸಿ.ವ್ಹಿ.ರಾಮನ್ ಹಾಗೂ ಎಸ್. ಚಂದ್ರಶೇಖರ ಅವರನ್ನು ಉಲ್ಲೇಖಿಸುತ್ತ ಪ್ರಾಮಾಣಿಕತೆ ಮತ್ತು ಸೇವಾಗುಣಗಳಿಂದಾಗಿ ಅವರೆಲ್ಲ ಉನ್ನತ ಹುದ್ದೆಗೇರಲು ಸಾಧ್ಯವಾಯಿತೆಂದು ಸಭೆಗೆ ತಿಳಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲರಾದ ಡಾ|| ಎಸ್.ಎಸ್.ಸಾಲಿಮಠರು ಮಾತನಾಡುತ್ತ ರಾಷ್ಟ್ರೀಯ ಸೇವಾ ಯೋಜನೆಗೆ ಸೇರುವುದರಿಂದ ವಿದ್ಯಾಥರ್ಿಗಳಲ್ಲಿ ರಾಷ್ಟ್ರ ನಿಮರ್ಾಣ ಮಾಡಲು ಬೇಕಾದ ಮನೋಭಾವಗಳನ್ನು ನಿವಾರಿಸುವಲ್ಲಿ ಪ್ರಮುಖ ಪಾತ್ರವಹಿಸಬಹುದಾಗಿದೆ.  ಇಂದು ತಾಂತ್ರಿಕ ವಿದ್ಯಾಥರ್ಿಗಳು ತಾಂತ್ರಿಕ ಶಿಕ್ಷಣದೊಂದಿಗೆ ಸಮಾಜಕ್ಕೆ ಬೇಕಾದ ಮೂಲಸೌಕರ್ಯಗಳ ಮಾಹಿತಿಯನ್ನು ಈ ರೀತಿಯ ಯೋಜನೆಗಳಲ್ಲಿ ಪಾಲ್ಗೊಳ್ಳುವುದರಿಂದ ಪಡೆಯಬಹುದಾಗಿದೆ. ಸತ್ಯ, ಪ್ರಾಮಾಣಿಕತೆ, ಸೇವಾ ಮನೋಭಾವನೆ ಹಾಗೂ ಇತರರ ಕಷ್ಟಗಳಿಗೆ ಸ್ಪಂದಿಸುವ ಗುಣ ಇಂದಿನ ಸ್ಪಧರ್ಾತ್ಮಕ ದಿನಗಳಲ್ಲಿ ಕಾಣೆಯಾಗಿರುವುದು ಕಳವಳಕಾರಿಯಾಗಿದೆ.  ಆದ್ದರಿಂದ ವಿದ್ಯಾಥರ್ಿಗಳು ಆಧುನೀಕತೆಗೆ ಮಾರುಹೋಗದೆ ಜೀವನದಲ್ಲಿ ಮೌಲ್ಯಗಳನ್ನು ಬೆಳೆಸಿಕೊಳ್ಳಲು ಕರೆ ನೀಡಿದರು.

ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ.ವೀರಣ್ಣಾ ಡಿ.ಕೆ. ಕಾರ್ಯಕ್ರಮಕ್ಕೆ ಎಲ್ಲರನ್ನು ಸ್ವಾಗತಿಸಿದರು.  ಪ್ರೋ.ಬಸವರಾಜ ತಿಳಿಗಂಜಿ ವಂದಿಸಿದರು.  ಪ್ರೋ.ಹಷರ್ಿ ಕಾಕರೆಡ್ಡಿ , ಪ್ರೋ.ರಾಹುಲ್ ಬನ್ನೂರ, ಪ್ರೋ.ಶಿವಾನಂದ ಉಳ್ಳೆಗಡ್ಡಿ, ಪ್ರೋ. ಶರ್ದಣಬಸವ ಜಂಪಾ, ಪ್ರೋ.ಸಂಗಪ್ಪ ಹಡಪದ, ಪ್ರೋ.ಪ್ರವೀಣ ಹಿರೇಮಠ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.  ಕುಮಾರಿ ರವೀನಾ ಸವದಿ ನಿರೂಪಿಸಿದರು.

ಕಾರ್ಯಕ್ರಮದಲ್ಲಿ 72ನೇ ಸ್ವಾತಂತ್ರೋತ್ಸವದ ಅಂಗವಾಗಿ ನಡೆದ ವಿವಿಧ ಸ್ಪಧರ್ೆಗಳಲ್ಲಿ ವಿಜೇತರಾದ ವಿದ್ಯಾಥರ್ಿಗಳಿಗೆ ಬಹುಮಾನಗಳನ್ನು ಇದೆ ವೇಳೆ ವಿತರಿಸಲಾಯಿತು