ಹಾವೇರಿ17: ಟಿ.ಎಮ್.ಸಿ ಮಾಕರ್ೆಟ್ ಹಾಗೂ ಜಿಲ್ಲಾಡಳಿತ ಭವನ ಶಾಖಾ ಗ್ರಂಥಾಲಯಗಳ ಸಹಯೋಗದಲ್ಲಿ "ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ"ವನ್ನು ನಗರದ ಜಿಲ್ಲಾ ಗ್ರಂಥಾಲಯದಲ್ಲಿ ಶುಕ್ರವಾರ ಆಚರಿಸಲಾಯಿತು
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮುಖ್ಯ ಗ್ರಂಥಾಲಯಾಧಿಕಾರಿ ವೆಂಕಟೇಶ್ವರಿ.ಜಿ.ಎಸ್ ಅವರು ಮಾತನಾಡಿ, ಮನುಷ್ಯನ ಜ್ಞಾನದ ವೃದ್ಧಿಗೆ ಹಾಗೂ ಮಾನಸಿಕ ನೆಮ್ಮದಿಗೆ ಗ್ರಂಥಾಲಯ ಪ್ರಮುಖವಾಗಿದೆ. ಉದ್ಯೋಗದ ಮಾಹಿತಿ, ಭವಿಷ್ಯದ ಚಿಂತನೆಗಳು ಮತ್ತು ಇತಿಹಾಸ ತಿಳಿಯಲು ಗ್ರಂಥಾಲಯಗಳು ಉಪಯುಕ್ತವಾಗಿವೆ. ಇಂದಿನ ಸ್ಫಧರ್ಾತ್ಮಕ ಯುಗದಲ್ಲಿ ವಿದ್ಯಾವಂತ ಯುವಕರಿಗೆ ಗ್ರಂಥಾಲಯಗಳು ಅತೀ ಅವಶ್ಯಕವಾಗಿವೆ. ಪ್ರತಿಯೊಬ್ಬರು ಗ್ರಂಥಾಲಯದ ಸದಸ್ಯತ್ವ ಪಡೆದು ಗ್ರಂಥಾಲಯದ ಸದುಪಯೋಗವನ್ನು ಪಡೆದುಕೊಳ್ಳಬೇಕು ಎಂದು ಹೇಳಿದರು.
ಬಿ.ಕೆ.ಮಹಾರಾಜ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಗ್ರಂಥಾಲಯವು ಜ್ಞಾನಾರ್ಜನೆಯ ಕೇಂದ್ರವಾಗಿದೆ. ಎಲ್ಲ ವಯೋಮಾನದವರು ಗ್ರಂಥಾಲಯಗಳಿಗೆ ಆಗಮಿಸಿ ತಮ್ಮ ಸದಭಿರುಚಿಯ ಪುಸ್ತಕಗಳನ್ನು ಓದುವ ಮೂಲಕ ತಮ್ಮ ಜ್ಞಾನದ ಹರಿವನ್ನು ಹೆಚ್ಚಿಸಿಕೊಳ್ಳಬೇಕು ಎಂದು ಹೇಳಿದರು.
ಕಾರ್ಯಕ್ರದಲ್ಲಿ ಗ್ರಂಥಾಲಯ ಸಿಬ್ಬಂದಿಗಳಾದ ಎಸ್ ಬಿ ಕುರ್ತಕೋಟಿ, ಲೋಕೇಶ ಎಲ್ ಎನ್, ಆರ್ ಎಮ್ ಮೇಲಿನಮನಿ, ಬಿ.ಬಿ.ಮಾಳನಾಯಕ, ಪಿ.ವಿ.ಹರಕುಣಿ, ಕೆ.ಹೆಚ್.ಮುನಿಯಣ್ಣನವರ, ಎಮ್.ಡಿ.ಲಿಂಗಾಪೂರ ಹಾಗೂ ಎಮ್.ಹೆಚ್.ದೊಡ್ಡದೇವರ ಇತರರು ಉಪಸ್ಥಿತರಿದ್ದರು.