ನ್ಯಾಷನಲ್ ಇನ್ಸೂರೆನ್ಸ್ 112ನೇ ವಾಷರ್ಿಕೋತ್ಸವ

ಲೋಕದರ್ಶನ ವರದಿ

ಹೊಸಪೇಟೆ 05: 1906ರಲ್ಲಿ ಸ್ಥಾಪಿತವಾದ ನ್ಯಾಷನಲ್ ಇನ್ಸೂರೆನ್ಸ್ ಕಂಪನಿಯು ಇಂದಿಗೂ ಸಕರ್ಾರಿ ಸ್ವಾಮ್ಯದಲ್ಲಿದ್ದು, ನಿರಂತರವಾಗಿ ಲಾಭಾಂಶದಲ್ಲಿ ಮುಂದುವರೆದಿದೆ ಎಂದು ಶಾಖಾ ವ್ಯವಸ್ಥಾಪಕ ರಮೇಶ ಚಿಂತಪಲ್ಲಿ ತಿಳಿಸಿದರು.

ಸಂಸ್ಥೆಯ 112ನೇ ವಾಷರ್ಿಕೋತ್ಸವ ಸಂಭ್ರಮಾಚರಣೆ ಸಂದರ್ಭದಲ್ಲಿ ಮಾತನಾಡಿ, ವಾಹನ ವಿಮಾ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ಕಂಪನಿಯು, ಅಷ್ಟೇ ಪ್ರಮಾಣೀಕವಾಗಿ ಕ್ಲೈಮ್ಗಳನ್ನು ಕೊಡುತ್ತಾ ಬಂದಿದೆ. 

  2017-18ನೇ ಸಾಲಿನಲ್ಲಿ ಹೊಸಪೇಟೆ ಕಛೇರಿಯಿಂದ 8ಕೋಟಿ 16ಲಕ್ಷದಷ್ಟು ವಿಮಾ ವಹಿವಾಟು ನಡೆಸಿದೆ ಎಂದರು.

ಅಭಿವೃದ್ಧಿ ಅಧಿಕಾರಿ ಪ್ರಕಾಶ ನಾಯ್ಕ್ ಮತ್ತು ಹಿರಿಯ ಪ್ರತಿನಿಧಿ ಬಷೀರ್ ಅಹ್ಮದ್ ಮಾತನಾಡಿದರು.  ಕೆ.ಶಫಿ, ಸುಧಾ, ಹನುಮಾರೆಡ್ಡಿ, ಪ್ರತಿನಿಧಿಗಳಾದ ಜಂಬುನಾಥ ಹೆಚ್.ಎಂ., ರಾಮಕೃಷ್ಣ, ಬ್ರಹ್ಮಾನಂದ ಮುಂತಾದವರು ಉಪಸ್ಥಿತರಿದ್ದರು.