ರಾಷ್ಟ್ರೀಯ ಆಯುವರ್ೇದ ದಿನಾಚರಣೆ

ಧಾರವಾಡ04: ಸಳ್ಥೀಯ ಡಾ. ಮಲ್ಲಿಕಾಜರ್ುನ ಮನ್ಸೂರು ಕಲಾಭವನದಿಂದ ರಾಷ್ಟ್ರೀಯ ಆಯುವರ್ೇದ ದಿನಾಚರಣೆ ನಿಮಿತ್ಯ ಸಾರ್ವಜನಿಕ ಆರೋಗ್ಯದಲ್ಲಿ ಆಯುವರ್ೇದದ ಪಾತ್ರ ಕುರಿತು ಜಾಗೃತ ಜಾಥಾವನ್ನು ಜಿಲ್ಲಾ ಪಂಚಾಯತ ಅಧ್ಯಕ್ಷರಾದ ಮಾನ್ಯ ಶ್ರೀಮತಿ ಚೈತ್ರಾ ಗುರುಪಾದಪ್ಪ ಶಿರೂರು ಅವರು ಉದ್ಘಾಟಿಸಿದರು.                ಜಾಥಾ ಆಯುವರ್ೇದ ಪದ್ದತಿಯ ಹಾಗೂ ಸಾರ್ವಜನಿಕ ಆರೋಗ್ಯದಲ್ಲಿ ಆಯುವರ್ೇದದ ಪಾತ್ರ ಕುರಿತು ಹಾಗೂ ಆರೋಗ್ಯಕ್ಕಾಗಿ ಆಯುವರ್ೇದ ಘೋಷಣೆ ಕೂಗುತ್ತಾ ಸಿ.ಬಿ.ಟಿ ಮಾರ್ಗವಾಗಿ ಕನರ್ಾಟಕ ವಿದ್ಯಾವರ್ಧಕ ಸಂಘದ ವರೆಗೆ ಸಂಚರಿಸಿತು.

      ಜಾಥಾದಲ್ಲಿ ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ಜೆ.ಟಿ ಪವಾರ, ಜಿಲ್ಲಾ ಶಸ್ತ್ರಚಿಕಿತ್ಸಕರು ಧಾರವಾಡ, ಪ್ರಜಾಪಿತ ಬ್ರಹ್ಮಕುಮಾರಿಯ ಈಶ್ವರಿಯ ವಿಶ್ವವಿದ್ಯಾಲಯ ಧಾರವಾಡರವರು ಹಾಗೂ ಖಾಸಗಿ ಆಯುವರ್ೇದ ಸಂಘದವರು ಹಾಗೂ  ಆಯುಷ್ ಇಲಾಖೆಯ ವ್ಯೆದ್ಯಾಧಿಕಾರಿಗಳು ಮತ್ತು ಸಿಬ್ಬಂದಿಯವರು,       ಶಾಲಾ ಮಕ್ಕಳು ಭಾಗವಹಿಸಿದ್ದರು. ಕಾರ್ಯಕ್ರಮದಲ್ಲಿ ಸಾರ್ವಜನಿಕ ಆರೋಗ್ಯದಲ್ಲಿ ಆಯುವರ್ೇದದ ಪಾತ್ರ ಕುರಿತು ಇಲಾಖೆಯು ತಯಾರಿಸಿದ ಕರಪತ್ರಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ವಿತರಿಸಲಾಯಿತು.

        "ಸಾರ್ವಜನಿಕ ಆರೋಗ್ಯದಲ್ಲಿ ಆಯುವರ್ೇದವು ಮಹತ್ವ ಪಾತ್ರ ವಹಿಸಿದೆ  ಚೈತ್ರಾ ಶಿರೂರು"

         ಆಯುವರ್ೇದ ವೈದ್ಯ ಪದ್ಧತಿಯು ಪುರಾತನ ಕಾಲದ್ದಾಗಿದ್ದು ಆಯುವರ್ೇದದಿಂದ ಎಲ್ಲ ತರಹದ ರೋಗಗಳನ್ನು ಗುಣಪಡಿಸಿಕೊಳ್ಳಬಹುದಾಗಿದೆ. ನಮ್ಮ ದಿನನಿತ್ಯ ಜೀವನದಲ್ಲಿ ಆಯುವರ್ೇದ ಅಳವಡಿಸಿಕೊಂಡಲ್ಲಿ ರೋಗ ತಡೆಗಟ್ಟುವಲ್ಲಿ ಯಶಸ್ವಿ ಕಾಣಬಹುದಾಗಿದೆ. ಮಗು ಜನಿಸಿದ ಸಮಯದಿಂದ ಜೀವಿತಾವಧಿಯ ಎಲ್ಲ ಹಂತಗಳಲ್ಲಿ ಆಯುವರ್ೇದವು ಮಹತ್ವದ ಪಾತ್ರ ವಹಿಸಿದೆ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತಾಡಿದರು. 

           ನಿವೃತ್ತ ಜಿಲ್ಲಾ ಸರ್ಜನ್ರಾದ ಡಾ. ವ್ಹಿ.ಡಿ.ಕಪರ್ೂರಮಠ ರವರು ಮಾತನಾಡಿ ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದ್ದಕ್ಕಾಗಿ ಸಂತಸ ವ್ಯಕ್ತಪಡಿಸಿ ಇದು ಪರಿಸರ ಸಂರಕ್ಷಣೆ ಮತ್ತು ಬೆಳವಣಿಗೆಯಲ್ಲಿ ಮುಖ್ಯವಾದುದ್ದು ಎಂದು ಹೇಳಿದರು. ರಾಷ್ಟ್ರೀಯ ಆಯುವರ್ೇದ ದಿನಾಚರಣೆ ಘೋಷಣೆ ಮಾಡಿದ್ದು ಸಾರ್ವಜನಿಕ ಆರೋಗ್ಯದಲ್ಲಿ ಆಯುವರ್ೇದದ ಪಾತ್ರ ಕುರಿತು ಘೋಷ್ಯ ವಾಕ್ಯ ನೀಡಿದ್ದು ಸಾರ್ವಜನಿಕರಿಗೆ ತುಂಬಾ ಉಪಯುಕ್ತ ಎಂದರು.

        ಜಿಲ್ಲಾ ಆಯುಷ್ ಅಧಿಕಾರಿಗಳಾದ ಡಾ. ಜೆ.ಟಿ.ಪವಾರವರು ಮಾತನಾಡಿ ರಾಷ್ಟ್ರೀಯ ಆಯುವರ್ೇದ ದಿನಾಚರಣೆಯನ್ನು 2016 ರಿಂದ ಪ್ರತಿ ವರ್ಷ ಆಚರಿಸುತ್ತಾ ಬಂದಿದ್ದು ಪ್ರತಿ ವರ್ಷ ಆಯುವರ್ೇದ ಪದ್ದತಿಯು ಘೋಷ ವಾಕ್ಯವನ್ನು ವಿವಿಧ ರೀತಿ ಸಾರ್ವಜನಿಕ ಆರೋಗ್ಯದಲ್ಲಿ ಆಯುವರ್ೇದವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳುವಂತೆ ನೀಡುತ್ತಾ ಬರಲಾಗಿದೆ. ಈ ವರ್ಷ ಸಾರ್ವಜನಿಕ ಆರೋಗ್ಯದಲ್ಲಿ ಆಯುವರ್ೇದ ಪಾತ್ರ ಎಂಬ ಘೋಷ ವಾಕ್ಯ ನೀಡಿದ್ದು ಅದರಂತೆ ಸಾರ್ವಜನಿಕ ಆರೋಗ್ಯದಲ್ಲಿ ಆಯುವರ್ೇದದ ಪಾತ್ರದ ಕುರಿತು ವಿವರಿಸಿದರು.  ಕಾರ್ಯಕ್ರಮದಲ್ಲಿ ಡಾ. ಹೇಮಂತ ಅರಿಕೇರಿ ವ್ಯೆದ್ಯಾಧಿಕಾರಿಗಳು ಸಾರ್ವಜನಿಕ ಆರೋಗ್ಯದಲ್ಲಿ ಆಯುವರ್ೇದ ಪಾತ್ರ ಕುರಿತು ಉಪನ್ಯಾಸ ನೀಡಿದರು. ಡಾ.ಅಮೃತಾ ಪಾಸ್ತೆ ನಿರೂಪಿಸಿದರು. ಡಾ.ಶಂಕರ ಹಿರೇಮಠ ವಂದನಾರ್ಪಣೆ ಮಾಡಿದರು

   ಕಾರ್ಯಕ್ರಮದಲ್ಲಿ ವಿವಿಧ ಆಯುವರ್ೇದ ಕಾಲೇಜಿನ ಪಾಂಶುಪಾಲರು/ ವಿದ್ಯಾಥರ್ಿಗಳು, ವಿವಿಧ    ಎನ್ ಜಿ. ಓ ಸಂಸ್ಥೆಯವರು ಶಾಲಾ ಮಕ್ಕಳು ಜಿಲ್ಲಾ ಆಯುಷ್ ಇಲಾಖೆಯ ಡಾ. ಬಿ.ಪಿ.ಪೂಜಾರ ಸೇರಿದಂತೆ ಎಲ್ಲ ವ್ಯೆದ್ಯಾಧಿಕಾರಿಗಳು/ ಸಿಬ್ಬಂದಿಯವರು ಉಪಸ್ಥಿತರಿದ್ದರು. ಇದೇ ದಿನ ಉಚಿತ ಆರೋಗ್ಯ ಶಿಬಿರವನ್ನು ಏರ್ಪಡಿಸಲಾಗಿತ್ತು.