ಜಿಲ್ಲಾ ಪಂಚಾಯತಿ ಸದಸ್ಯರಿಂದ ನರೇಗಾ ಕಾಮಗಾರಿ ಪರಿವೀಕ್ಷಣೆ

ಲೋಕದರ್ಶನ ವರದಿ

ಯಲಬುಗರ್ಾ 01: ತಾಲೂಕಿನ ಕಲ್ಲೂರು ಗ್ರಾಮದಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಕೆರೆ ಹೂಳೆತ್ತುವ ಕಾಮಗಾರಿಯನ್ನು ಗ್ರಾಮ ಪಂಚಾಯತಿಯ ಸಹಯೋಗದೊಂದಿಗೆ ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯಿಂದ ಪ್ರಾರಂಭಿಸಲಾಗಿದ್ದು ಸುಮಾರು 10 ದಿನಗಳಿಂದ -250 ಕೂಲಿಕಾರರು ಕೆಲಸ ನಿರ್ವಹಿಸುತ್ತಿದ್ದು, ಜಿಲ್ಲಾ ಪಂಚಾಯತ ಸದಸ್ಯರಾದ ಗಂಗಮ್ಮ ಈಶಣ್ಣ ಗುಳಗಣ್ಣವರ ಕಾಮಗಾರಿಯನ್ನು ಪರಿಶೀಲಿಸಿದರು.

ನಂತರ ಕೆಲಸ ನೀಡಿರುವುದರ ಬಗ್ಗೆ ಕೂಲಿಕಾರರೊಂದಿಗೆ. ಚಚರ್ಿಸಿ ಕೂಲಿಕಾರರು ಗ್ರಾಮ ಪಂಚಾಯತಿಯಿಂದ ಕೆಲಸ ನೀಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು ಮತ್ತು ಬರಗಾಲದಲ್ಲಿ ಕೆಲಸ ನೀಡಿ ಜನರು ಕೆಲಸ ಅರಸಿ ಬೇರೆ ಕಡೆ ದುಡಿಯಲು ಹೊಗುತ್ತಿರುವುದು ನಿಂತಿದೆ ಎಂದರು ಆದರೆ ಕಲ್ಲಯ್ಯ ಶೇಖರಯ್ಯ ವಂಕಲಕುಂಟಿ ಇವರು ಕೂಲಿ ಸರಿಯಾಗಿ ಬರುತ್ತಿಲ್ಲ ಎಂದು ಕೇಳಿದರು, ನಂತರ ಪಿ.ಡಿ.ಓ ರವರೊಂದಿಗೆ ವಿಚಾರಿಸಿ ಸರಿ ಮಾಡುವುದಾಗಿ ಅವರಿಗೆ ತಿಳಿಸಿದರು.

ಈ ಸಂದರ್ಭದಲ್ಲಿ ತಾಲೂಕ ಎಮ್.ಐ.ಎಸ್ ಸಂಯೋಜಕರಾದ ಬಸವರಾಜ ತೋಟದ್, ಐ.ಇ.ಸಿ ಸಂಯೋಜಕರಾರ ಲಕ್ಷ್ಮಣ ಕೆರಳ್ಳಿ, ತಾಂತ್ರಿಕ ಸಹಾಯಕರಾದ ಕುಮಾರಿ ಧನ್ಯಾ ಪಿ.ಡಿ.ಓ ಆದಿಬಸಯ್ಯ ಹಿರೇಮಠ, ಬಿ.ಎಫ್.ಟಿ ಶಿವಪ್ಪ ಸೂಡಿ ಸೇರಿದಂತೆ ಗ್ರಾಮ ಪಂಚಾಯತಿಯ ಸಿಬ್ಬಂದಿಗಳು ಕೂಲಿಕಾರರು ಇದ್ದರು.