ನರೇಗಾ ದಿನಾಚರಣೆ ;ಅಸಭ್ಯ ನೃತ್ಯ: ಕ್ರಮಕ್ಕೆ ಆಗ್ರಹ

Narega Day; Indecent Dance: Demand for Action

ನರೇಗಾ ದಿನಾಚರಣೆ ;ಅಸಭ್ಯ ನೃತ್ಯ: ಕ್ರಮಕ್ಕೆ ಆಗ್ರಹ

ಹೂವಿನಹಡಗಲಿ 08: ಇಲ್ಲಿನ ತಾಲ್ಲೂಕು ಪಂಚಾಯಿತಿ ಕಚೇರಿಯಲ್ಲಿ ಆಯೋಜಿಸಿದ್ದ ನರೇಗಾ ದಿನಾಚರಣೆಯಲ್ಲಿ ಅಸಭ್ಯ ನೃತ್ಯ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ಸಾಮೂಹಿಕ ಸಂಘಟನೆಗಳ ಒಕ್ಕೂಟ ಆಗ್ರಹಿಸಿದೆ. 

ಪಟ್ಟಣದ ಶಾಸ್ತ್ರಿ ವೃತ್ತದಲ್ಲಿ ಶುಕ್ರವಾರ ಒಕ್ಕೂಟದ ಕಾರ್ಯಕರ್ತರು ಪ್ರತಿಭಟನೆ ನಡೆಸಿ, ನರೇಗಾ ಯೋಜನೆಯ ಸಾಧಕ ಫಲಾನುಭವಿಗಳ ಯಶೋಗಾಥೆಯನ್ನು ಪ್ರಸ್ತುಪಡಿಸಿ ಇತರರಿಗೆ ಪ್ರೇರಣೆಯಾಗುವಂತೆಮಾಡುವುದು ನರೇಗಾ ದಿನಾಚರಣೆ ಉದ್ದೇಶ. ಆದರೆ, ತಾಲ್ಲೂಕು ಪಂಚಾಯಿತಿ ಇಒ ಎಂ. ಉಮೇಶ ಮತ್ತು ನರೇಗಾ ಸಹಾಯಕ ನಿರ್ದೇಶಕ ಡಿ.ವೀರಣ್ಣನಾಯ್ಕ ಅವರು ಕೀಳು ಅಭಿರುಚಿ ಪ್ರದರ್ಶನಕ್ಕೆ ಅವಕಾಶ ನೀಡಿರುವುದು ಅಕ್ಷಮ್ಯ. ಮೇಲಧಿಕಾರಿಗಳು ತಪ್ಪಿತಸ್ಥರ ’ವಿರುದ್ಧ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು.ಸಂಘಟನೆಯ ಮುಖಂಡರಾದ ಸುರೇಶ ಹಲಗಿ, ಮೆಹಬೂಬ್ ಸಾಬ್, ಶಬ್ಬಿರ್, ಸಿದ್ದಪ್ಪ, ಟಿ. ದೇವೇಂದ್ರ​‍್ಪ, ವಿ.ಜಯನಾಯ್ಕ, ಎಂ.ಭರಮಪ್ಪ ಇದ್ದರು