'ನಿರಂತರ ಓದು ವಿದ್ಯಾಥರ್ಿಗಳ ಮೂಲ ಮಂತ್ರವಾಗಬೇಕು'


ಲೋಕದರ್ಶನ ವರದಿ

ವಿಜಯಪುರ 30:  ಸ್ಪಧರ್ಾತ್ಮಕ ಯುಗದಲ್ಲಿ ನಿರಂತರ ಓದು, ಸತತ ಪ್ರಯತ್ನ, ಸಮಯ ಪಾಲನೆ ವಿದ್ಯಾಥರ್ಿಗಳ ಮೂಲ ಮಂತ್ರಗಳಾಗಬೇಕು. ಎಷ್ಟೋ ವಿದ್ಯಾಥರ್ಿಗಳು ವಾಟ್ಸ್ಆ್ಯಪ್, ಫೆಸ್ಬುಕ್ ಗಳಂತಹ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಮಯವನ್ನು ವ್ಯರ್ಥವಾಗಿ ಕಳೆಯುತ್ತಿದ್ದಾರೆ. ಎಂದು ಹಾಸ್ಯ ಕಲಾವಿದ ಮತ್ತು ಎಕ್ಸಲಂಟ್ ಪ.ಪೂ. ಕಾಲೇಜಿನ ಕನ್ನಡ ಉಪನ್ಯಾಸಕ ಭಾಗೇಶ ಮುರಡಿ ವಿಷಾದ ವ್ಯಕ್ತಪಡಿಸಿದರು.

ಬಿಡಿಈ ಸಂಸ್ಥೆಯ ಬಾಲಕಿಯರ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡ 2018-19ನೇ ಸಾಲಿನ ಪ್ರಥಮ ವರ್ಷದ ಪಿ.ಯು. ವಿದ್ಯಾಥರ್ಿನಿಯರಿಗೆ ಸ್ವಾಗತ ಹಾಗೂ ವರ್ಗ ಪ್ರತಿನಿಧಿಗಳ ಪ್ರಮಾಣ ವಚನ ಸ್ವೀಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚೆಗೆ ವಿದ್ಯಾಥರ್ಿಗಳು ಸಂಕುಚಿತ ಮನೋಭಾವನೆಯನ್ನು ಬೆಳೆಸಿಕೊಳ್ಳುತ್ತಿದ್ದಾರೆ. ಸಣ್ಣ ಪುಟ್ಟ ವಿಷಯಗಳಿಗೆ ಆತ್ಮಹತ್ಯೆಗೆ ಮುಂದಾಗುತ್ತಿರುವುದು ದುರಂತವಾಗಿದೆ. ಸಾಧನೆ ಇಲ್ಲದಿದ್ದರೆ ನಾವು ಈ ಜಗಕ್ಕೆ ಯಾವ ಲೆಕ್ಕವೂ ಅಲ್ಲ. ಬದುಕಿನ ಸಾರ್ಥಕತೆಗೆ ಕಷ್ಟಗಳನ್ನು ಎದುರಿಸಿ ಏನಾದರೂ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಬಿಡಿಈ ಸಂಸ್ಥೆಯ ಅಧ್ಯಕ್ಷ ಎ.ಜಿ. ಕೆಂಭಾವಿ ಮಾತನಾಡಿ, ವಿದ್ಯಾಥರ್ಿ ಜೀವನದಲ್ಲಿ ಪಿ.ಯು.ಸಿ. ಮಹತ್ವದ ಘಟ್ಟ. ಇದು ನಿಮ್ಮ ಭವಿಷ್ಯವನ್ನು ರೂಪಿಸುವ ಹಂತ. ಕ್ರಮಬದ್ಧ ಅಧ್ಯಯನ, ಶಿಕ್ಷಕರ ಮಾರ್ಗದರ್ಶನದಿಂದ ಉತ್ತಮ ಫಲಿತಾಂಶ ಪಡೆಯಬಹುದು ಎಂದರು.

ಪದವಿಪೂರ್ವ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ.ಟಿ. ಕೋಟ್ನಿಸ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಾಲಾ ಸಂಸತ್ತಿನ ಉಪಾಧ್ಯಕ್ಷೆ ಪಿ.ಬಿ. ಸಾಂಗಲಿಕರ, ಕಾಲೇಜಿನ ಪ್ರಧಾನ ಕಾರ್ಯದಶರ್ಿ ಲಕ್ಷ್ಮೀ ಯಡಹಳ್ಳಿ, ಸಭಾಪತಿ ಸ್ನೇಹಾ ದರೇಕರ, ಉಪಸಭಾಪತಿ ನೀಲಮ್ ಪೂಜಾರಿ ವೇದಿಕೆ ಮೇಲಿದ್ದರು.

ಇದೇ ಸಂದರ್ಭದಲ್ಲಿ ಇನ್ನೋರ್ವ ಅತಿಥಿಗಳಾದ ಯುವ ಗಾಯಕಿ ಕುಮಾರಿ ಸೋನಿ ತಿಳಗುಳ ಅವರು ದೇಶಭಕ್ತಿ ಗೀತೆ, ಜಾನಪದ ಗೀತೆಗಳನ್ನು ಪ್ರಸ್ತುತ ಪಡಿಸಿದರು. 

ಕುಮಾರಿ ನಿವೇದಿತಾ ಹಾಗೂ ಸಂಗಡಿಗರು ಪ್ರಾಥರ್ಿಸಿದರು. ಡಾ. ಆರ್.ಆರ್. ಬಿರಾದಾರ, ಡಾ. ಎಸ್.ವಿ. ಹೊನವಾಡ, ಪ್ರೊ. ಕೆ.ಪಿ. ಜಹಾಗೀರದಾರ ಪರಿಚಯಿಸಿದರು. ಪಿ.ಪಿ. ದೇಶಪಾಂಡೆ ನಿರೂಪಿಸಿದರು. ಎಸ್.ಬಿ. ದೊಡಮನಿ ವಂದಿಸಿದರು.ಕಾರ್ಯಕ್ರಮದಲ್ಲಿ ಎಸ್.ವಾಯ್. ವಾಲಿಕಾರ, ವಿ.ಆರ್. ಬಿರಾದಾರ, ಎಂ.ಬಿ. ಯಾದವಾಡ, ಪಿ.ಎಂ. ಯಾಳವಾರ, ಆರ್.ಎಸ್. ದೀಕ್ಷಿತ, ಎಸ್.ಬಿ. ಕುಲಕಣರ್ಿ, ಎನ್. ರಮೇಶ, ಅಶ್ವಿನಿ ಶಟಗಾರ, ಯು.ಬಿ. ಆಶ್ರಿತ ಹಾಗೂ ವಿದ್ಯಾಥರ್ಿನಿಯರು ಉಪಸ್ಥಿತರಿದ್ದರು.