ಸಂಗೀತ ಒಂದು ಅದ್ಭುತ ಕಲೆ: ಪ್ರಭಾಕರ ಶಹಾಪೂರಕರ

ಲೋಕದರ್ಶನ ವರದಿ

ಬೆಳಗಾವಿ 11:  ಸಂಗೀತ ಒಂದು ಅದ್ಭುತ ಕಲೆ. ಸಂಗೀತವನ್ನು ಹಾಡುವುದರಿಂದ ಹಾಗೂ ಕೇಳುವುದರಿಂದ ಮನಸ್ಸಿನ ಒತ್ತಡ  ಕಡಿಮೆ ಮಾಡಿಕೊಳ್ಳುವುದರಿಂದ. ಆರೋಗ್ಯವಂತರಾಗಿ ಬಾಳಬಹುದು ಎಂದ ಗಾಯಕ ಪ್ರಭಾಕರ ಶಹಾಪೂರಕರ ಇಂದಿಲ್ಲಿ ಹೇಳಿದರು.

ಬೆಳಗಾವಿಯ ಕನರ್ಾಟಕ ಪಾವರ್ ಕಾಪರ್ೊರೇಶನ್ (ಕೆ.ಪಿ.ಸಿ.) ಲಿಮಿಟೆಡ ರಿಟೈರ್ಡ ಅಸೋಸಿಯಶನ್ದವರು 7 ನೇ ಸಂಸ್ಥಾಪನಾ ದಿನಾಚರಣೆಯನ್ನು ಇದೇ ದಿ. 10 ರವಿವಾರದ0ದು  ಕ್ಲಬ್ರಸ್ತೆಯಲ್ಲಿರುವ  ಹೊಟೇಲ್ ಮಿಲನ್ ಸಭಾಭವನದಲ್ಲಿ ಹಮ್ಮಿಕೊಂಡಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಗಾಯಕ ಪ್ರಭಾಕರ ಶಹಾಪರಕರ ಇಂದಿಲ್ಲಿ ಅಭಿಪ್ರಾಯ ಪಟ್ಟ ಅವರು  ಕೆ.ಪಿ.ಸಿ. ನಿವೃತ್ತಿ ಸಂಘದವರು ಆಯೋಜಿಸಿರುವ ಈ ಕಾರ್ಯಕ್ರಮ ಕೊಡಲು ನನಗೆ ಅತ್ಯಂತ ಹರ್ಷವೆನಿಸುತ್ತಿದೆ. ನಿಮ್ಮೆಲ್ಲರ ನಗುಮುಖಗಳನ್ನು ನೋಡಿದರೆ ಎಲ್ಲರೂ ಅತ್ಯಂತ ಸುಖಿ ಸಂಸಾರಿಗಳೆಂದು ಗೊತ್ತಾಗುತ್ತದೆ ಎಂದು ತಮ್ಮ ಸಂತಸ ಹಂಚಿಕೊಂಡರು.

ಸಂಗೀತ ಕಾರ್ಯಕ್ರಮ ನೀಡಿದ ಪ್ರಭಾಕರ ಶಹಾಪೂರಕರ 'ಎನ್ನ ಪಾಲಿಸೋ...' 'ಭಾಗ್ಯದ ಲಕ್ಷ್ಮಿ ಬಾರಮ್ಮ...' 'ವಿಠ್ಠಲ ಗೀತೆ ಗಾನ...' 'ವೇದ ನಾಹಿ...' 'ಉಳ್ಳವರು ಶಿವಾಲಯ ...'  ಮಹಿಪತಿದಾಸರು, ಪುರಂದರದಾಸರು, ಬಸವಣ್ಣನವರ ಕೃತಿ,  ಅಭಂಗಗಳನ್ನಷ್ಟೇ ಅಲ್ಲದೆ ಸಂಗೀತ ಪ್ರಧಾನ ಚಿತ್ರಗೀತೆಗಳಾದ 'ಮಧುಬನ ಮೇ ರಾಧಿಕಾ ...' 'ಪುಛೋ ನಾ ಕೈಸೆ...' 'ದಿಖಾಂವು ಕೈಸೆ...' ಮುಂತಾದ ಚಿತ್ರಗಳನ್ನು ಹಾಡುವುದರ ಮೂಲಕ ಜನರನ್ನು ಸುಮಾರು ಒಂದು ಗಂಟೆಗಳ ಕಾಲ ರಂಜಿಸಿದರು. ವಾಮನ ವಾಗೂಕರ ಹಾಮರ್ೋನಿಯಮ್ ಹಾಗೂ ಜಿತೇಂದ್ರ ಸಾಬಣ್ಣವರ ತಬಲಾ ಸಾಥ ನೀಡಿದರು.

ಇದೇ ಸಂದರ್ಭಲ್ಲಿ ಕೆ.ಪಿ.ಸಿ. ಯ ಬೇರೆ ಬೇರೆ ಹುದ್ದೆಗಳಲ್ಲಿ ಸೇವೆಲ್ಲಿಸಿರುವ 75 ವರ್ಷ ಮೇಲ್ಪಟ್ಟ ಸದಸ್ಯರಾದ ಎಸ್. ಎಸ್. ಹೊಸಕೇರಿ, ನರಸಿಂಹ ಎಸ್. ಕುಂಚೂರು, ಪೀರಾಜಿ ಸತ್ಪತೆಣ್ಣೆವರ, ವಸಂತ ಎಸ್. ಪಾಟೀಲ, ಜಯವಂತ ವಿ. ರಾಯಣ್ಣವರ, ನಾರಾಯಣ ಮಜುಕರ  ಶಾಲು ಹೊದಿಸಿ ಫಲಪುಷ್ಪ ನೀಡಿ ಗೌರವಿಸಲಾಯಿತು.

ಸಂಸ್ಥೆಯ ಅದ್ಯಕ್ಷರಾದ ಎಸ್. ಎಲ್. ಕುಂಜಾಳಿ ಸಂಸ್ಥೆ ಹಮ್ಮಿಕೊಳ್ಳುತ್ತಿರುವ ಸಮಾಜಮುಖಿ ಕಾರ್ಯಗಳ  ಕುರಿತು  ಮಾತನಾಡಿದರು.

ಬೆಂಗಳೂರು, ಹುಬ್ಬಳ್ಳಿ,  ಧಾರವಾಡ, ಬಾಗಲಕೋಟ, ಹಳಿಯಾಳ, ಕಿತ್ತೂರ,  ಬೀಜಾಪುರ ಹೀಗೆ ಬೇರೆ ಬೇರೆ ಊರಿನಿಂದ ಕೆ.ಪಿ.ಪಿ. ನಿವೃತ್ತ ಸಂಘದ ಸದಸ್ಯರು  ಭಾಗವಹಿಸಿದ್ದರು. ಕು. ಸ್ನೇಹಾ ಹಾಗೂ ಕು. ಸ್ವಪ್ನಾ ಇವರ ಪ್ರಾರ್ಥನಾ ಗೀತೆಯಿಂದ ಕಾರ್ಯಕ್ರಮ ಪ್ರಾರಂಭವಾಯಿತು. ಎಸ್. ಆರ್. ಮುತಾಲಿಕದೇಸಾಯಿ ವಾಷರ್ಿಕ ವರದಿವಾಚನ ಮಾಡಿದರು. ನಿರಂಜನ ಬಿದರಿ ವಂದಿಸಿದರು.