ಸಂಗೀತ ಎಂಬುದು ಸುಮಧುರವಾಗಿ ಸೂಸುವ ತಂಗಾಳಿ: ಮೃಂತ್ಯುಂಜಯ ಶ್ರೀ

ಲೋಕದರ್ಶನ ವರದಿ

ಶಿಗ್ಗಾವಿ01 : ಮನುಷ್ಯನ ಜೀವನವೆಂಬ ಜಂಜಾಟದ ಮರಳುಗಾಡಿನಲ್ಲಿ ಸಂಗೀತ ಎಂಬುದು ಸುಮಧುರವಾಗಿ ಸೂಸುವ ತಂಗಾಳಿಯಾಗಿ ಪರಿಣಮಿಸಿದೆ ಎಂದು ನಾರಾಯಣಪುರ ವೀರಕ್ತಮಠದ ಮೃಂತ್ಯುಂಜಯ ಸ್ವಾಮಿಗಳು ಹೇಳಿದರು.

     ತಾಲೂಕಿನ ನಾರಾಯಣಪುರ ಗ್ರಾಮದ ವೀರಕ್ತಮಠದ ಆವರಣದಲ್ಲಿ ದುಂಡಿಬಚವೇಶ್ವರ ಸೇವಾ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆ ಸಹಯೋಗಲ್ಲಿ ನಡೆದ ಸಂಗೀತ ಕಾರ್ಯಕ್ರಮವನ್ನುದ್ದೇಸಿಸಿ ಮಾತನಾಡಿದ ಅವರು ಸಂಗೀತ ಆಲಿಸುವದರಿಂದ, ಹೇಳುವದರಿಂದ ಮನುಷ್ಯನ ಮನಸ್ಸು ವಿಕಾಶ ಹೊಂದಲು ಸಾಧ್ಯವಿದೆ ಎಂದು ಹೇಳಿದರು.

     ಸಭೆಯ ಅಧ್ಯಕ್ಷತೆ ವಹಿಸಿದ ಗಂಗಾಧರ ಬಾವಿಕಟ್ಟಿ ಮಾತನಾಡಿ ಡಾ.ಪಂಡಿತಪುಟ್ಟರಾಜರು ಅಂಧರಾದರೂ ಕೂಡಾ ಸಂಗೀತ ದಿಗ್ಗಜರಾಗಿ ಹೊರಹೊಮ್ಮಿದವರಾಗಿದ್ದರು. 

 ತಮ್ಮಲ್ಲಿ ಅಡಗಿರುವ ಸಂಗೀತ ವಿದ್ಯಯನ್ನು ಅಂಧ,ಅನಾತಮಕ್ಕಳಿಗೆ ಉಚಿತವಾಗಿ ಧಾರೆ ಎರೆಯುವಮೂಲಕ ಅಂಧರ ಬಾಳಿಗೆ ಬೆಳಕಾದ ಮಹಾ ಚೇತನರಾಗಿ ನಾಡಿನಾಧ್ಯಾಂತ ಪ್ರಜ್ವಲಿಸುತ್ತಿದ್ದಾರೆ. ಸಂಗೀತಕ್ಕೆ ಮನುಷ್ಯನ ಮನಸ್ಸಿಗೆ ಸ್ಫೂತರ್ಿ ಶೆಲೆತುಂಬವ ಶಕ್ತಿ ಅಡಗಿದೆ. ಸಂಗೀತ ಕಲೆಗೆ ಮಾನವರ ಮನಸ್ಸುಗಳಲ್ಲದೆ ಪ್ರಾಣಿಗಳು ಕೂಡಾ ತಲೆ ತೂಗಲಿವೆ ಎಂದು ಹೇಳಿದರು.

     ಇಂದ್ರಯ್ಯ ಹಿರೇಮಠ ಹಾಗೂ ದಿಂಗಾಲಯ್ಯ ಹಿರೇಮಠ ರವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

     ಬಸವರಾಜ ಗುಳೇದಕೇರಿ, ಚೆನ್ನಮ್ಮ ಬಂಕಾಪುರ, ಶಂಕರ ಬಿರಾದಾರ, ರವಿ ಬಂಕಾಪುರ, ಗದಿಗಯ್ಯ ಕಡ್ಲಿಮಠ, ಸುಭಾಷ ಮಸಳಿ, ಚನಬಸಪ್ಪ ಬೈಲವಾಳ, ಶ್ರೀನಿವಾಸ ಕುಲಕಣರ್ೀ, ಬಚವಣ್ಣೆಪ್ಪ ಹೊನ್ನಣ್ಣವರ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.