ಲೋಕದರ್ಶನ ವರದಿ
ಹಗರಿಬೊಮ್ಮನಹಳ್ಳಿ 23:ಪುರಸಭೆ ಮುಖ್ಯಾಧಿಕಾರಿ ಪ್ರಕಾಶ್ ಚನ್ನಪ್ಪನವರ್ ಯಾವಾಗಲೂ ನಗುಮೊಗದಿಂದಲೇ ಎಲ್ಲರೊಂದಿಗೂ ಬೆರೆಯುತ್ತಾ ಕೆಲಸ ಮಾಡುತ್ತಿದ್ದರು ಎಂದು ಪುರಸಭೆ ಸದಸ್ಯ ಡಾ.ಸುರೇಶ್ ಕುಮಾರ್ ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಮುಖ್ಯಾಧಿಕಾರಿಯಾಗಿದ್ದ ಪ್ರಕಾಶ್ ಚನ್ನಪ್ಪನವರ್ಗೆ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿ ಹೊಸದಾಗಿ ಪುರಸಭೆಯಾದಗ ನಾವೆಲ್ಲ ಸದಸ್ಯರಾಗಿ ಜನರಿಂದ ಆಯ್ಕೆಯಾಗಿ ಇಲ್ಲಿಗೆ ಬಂದೆವು. ಪಟ್ಟಣದ ಈ ಹೊಸ ಪುರಸಭೆಗೆ ಬರುವ ಅಧಿಕಾರಿ ಹೇಗಿರುತ್ತಾರೋ ಅಂದುಕೊಂಡಿದ್ದೆವು. ಆದರೆ ಪುರಸಭೆ ಮುಖ್ಯಾಧಿಕಾರಿಯಾಗಿ ಪ್ರಕಾಶ್ ಚನ್ನಪ್ಪನವರ್ ಬಂದ ನಂತರದ ಕೆಲವೇ ದಿನಗಳಲ್ಲಿ ಎಲ್ಲರೊಳಗೊಂದಾಗಿ ನಮ್ಮೆಲ್ಲರ ಅಚ್ಚುಮೆಚ್ಚಿನ ಅಧಿಕಾರಿಯಾಗಿಬಿಟ್ಟರು. ನಂತರದ ದಿನಗಳಲ್ಲಿ ಪಟ್ಟಣದ ಸ್ವಚ್ಛತೆಯ ಬಗ್ಗೆ ಗಮನಹರಿಸಿದ ಅವರು ಸಮರೋಪಾದಿಯಲ್ಲಿ ಕೆಲಸ ಕಾರ್ಯಗಳನ್ನು ಹಮ್ಮಿಕೊಂಡರು. ಜನರ ಮೂಲಭೂತ ಸೌಲಭ್ಯಗಳಿಗೆ ಹೆಚ್ಚಿನ ಆಧ್ಯತೆ ನೀಡುತ್ತಾ ಪ್ರತಿ ವಾಡರ್್ನ ಬಗ್ಗೆ ವಿಶೇಷ ಕಾಳಜಿವಹಿಸುತ್ತಿದ್ದರು. ಅಂತಹ ವ್ಯಕ್ತಿ ದಿಢೀರನೆ ವಗರ್ಾವಣೆಯಾಗಿದ್ದು ಸ್ವಲ್ಪ ಅಸಮಾಧಾನವಾಗಿತ್ತು. ಆದರೆ ಹೊಸದಾಗಿ ಮುಖ್ಯಾಧಿಕಾರಿಯಾಗಿ ಆಗಮಿಸಿರುವ ಕೃಷ್ಣನಾಯ್ಕರನ್ನು ಹೃತ್ಪೂರ್ವಕವಾಗಿ ಸ್ವಾಗತಿಸುತ್ತೇವೆ ಎಂದರು. ಮಾಜಿ ಅಧ್ಯಕ್ಷ ಜೋಗಿ ಹನುಮಂತ ಮಾತನಾಡಿ ಪ್ರಕಾಶ್ ಚನ್ನಪ್ಪನವರ್ ಉತ್ತಮ ಕೆಲಸಗಾರರಾಗಿದ್ದು ಉಳಿದ ಸಿಬ್ಬಂದಿಗಳಿಂದಲೂ ಸಹ ಅಷ್ಟೇ ಚೆನ್ನಾಗಿ ಕೆಲಸ ತೆಗೆಯುತ್ತಿದ್ದರು. ಅಂತಹ ಅಧಿಕಾರಿಗಳು ಬೇಕು ಎಂದರು.
ಪುರಸಭೆ ನಾಮನಿದರ್ೇಶಿತ ಸದಸ್ಯ ಡಿಶ್ಮಂಜುನಾಥ ಮಾತನಾಡಿ ಚನ್ನಪ್ಪನವರ್ ಅತ್ಯುತ್ತಮ ಕರ್ತವ್ಯಪಾಲಕ ಅಧಿಕಾರಿಯಾಗಿದ್ದರು. ಯಾರು ಎಷ್ಟೇ ರೋಷಾವೇಷದಿಂದ ಮಾತನಾಡಲು ಬಂದಿದ್ದರು ಚನ್ನಪ್ಪನವರ ನಗುಮೊಗವನ್ನು ನೋಡಿದಾಕ್ಷಣ ಶಾಂತವಾಗಿಬಿಡುತ್ತಿದ್ದರು. ಎಂತಹ ಕ್ಲಿಷ್ಟಕರ ಸಮಸ್ಯೆ ಇದ್ದರೂ ನಗುನಗುತ್ತಲೇ ಎಲ್ಲವನ್ನೂ ಬಗೆಹರಿಸುವ ಚಾಣಾಕ್ಷತೆ ಅವರಿಗಿದೆ. ಇಂತಹ ನಿಷ್ಟಾವಂತ ಅಧಿಕಾರಿಯ ಸೇವೆ ಎಲ್ಲಾ ಕಡೆಯೂ ಸಲ್ಲಬೇಕಿದೆ ಎಂದರು.
ಈ ಸಂದರ್ಭದಲ್ಲಿ ಪುರಸಭೆ ಸದಸ್ಯರಾದ ಮಾತಾಗ್ಯಾಸ್ ಯರ್ರಿಸ್ವಾಮಿ, ಚೋಳರಾಜ, ಅಲ್ಲಾಭಕ್ಷಿ, ಹಂಚಿನಮನೆ ಹನುಮಂತಪ್ಪ, ಹುಡೇದ ಗುರುಬಸವರಾಜ, ಸಬಿಯಾ ಬೇಗಂ, ಲಕ್ಷ್ಮಣ, ಮುಖಂಡರಾದ ಗುಂಡ್ರು ಹನುಮಂತಪ್ಪ, ಅರಸಿಕೇರಿಹನುಮಂತಪ್ಪ, ನವೀನ್ಕುಮಾರ್, ವಿಜಯಕುಮಾರ, ರವಿ, ಇಂಜಿನೀಯರ್ ಮಂಜುನಾಥ, ಆರ್ಓ ಮಾರಣ್ಣ, ಮೇಸ್ತ್ರಿ ಪ್ರಭಾಕರ, ಈರಣ್ಣ, ಮಾರುತಿ, ನಾಗರಾಜ, ಗುಡದಯ್ಯ, ಮಾರ್ಕಂಡೇಶ್ವರ, ಗಿರೀಶ ಹಾಗೂ ಸಿಬ್ಬಂದಿವರ್ಗ ಉಪಸ್ಥಿತರಿದ್ದರು.