ಶಾಸಕರ ನೇತೃತ್ವದಲ್ಲಿ ಪುರಸಭೆ ಸಾಮಾನ್ಯ ಸಭೆ

Municipal General Assembly headed by MLA

ಶಾಸಕರ ನೇತೃತ್ವದಲ್ಲಿ ಪುರಸಭೆ ಸಾಮಾನ್ಯ ಸಭೆ  

ಶಿಗ್ಗಾವಿ 12: ಪುರಸಭೆ ಅಧ್ಯಕ್ಷ ಸಿದ್ದಾರ್ಥಗೌಡ ಪಾಟೀಲ ಅಧ್ಯಕ್ಷತೆಯಲ್ಲಿ ವಿಶೇಷ ಸಭೆಯ ನೋಟಿಸ್ ಜಾರಿ ಮಾಡಿ ಸಭೆ ಕರೆಯಲಾಗಿತ್ತು. ನೋಟಿಸ್ ಪತ್ರ ಗಮನಿಸಿದ ನಾಮ ನಿರ್ದೇಶಕ ಸದಸ್ಯರುಗಳು ನೂತನ ಶಾಸಕರಾಗಿಆಯ್ಕೆಯಾದ ಯಾಸಿರಖಾನ್ ಪಠಾಣಉಪಸ್ಥಿತಿಯಲ್ಲಿ ಸಭೆ ಕರೆಯುವಂತೆನಾಮ ನಿರ್ದೇಶಕ ಸದಸ್ಯರುಗಳಾದ ಮಂಜುನಾಥ ಮಣ್ಣಣ್ಣವರ, ಪರವೀಜ್ ಮುಲ್ಲಾ, ಚಂದ್ರು ಕೊಡ್ಲಿವಾಡ, ಸಾಧಿಕ್ ಮೊಗಲಲ್ಲಿ ಒಳಗೊಂಡು ಅಧ್ಯಕ್ಷರಿಗೆ ಮನವಿ ಸಲ್ಲಿಸಿದಾಗ ಪುರಸ್ಕರಿಸಿ ತುರ್ತು ಸಭೆಯನ್ನು ಮುಂದೂಡಿ ಬರುವ ಜ.16 ರಂದು ಬೆಳಿಗ್ಗೆ 11 ಗಂಟೆಗೆ ಸಭೆ ನಿಗದಿ ಮಾಡಿರುವ ಕಾರಣ ಅಧ್ಯಕ್ಷರಿಗೆ ಧನ್ಯವಾದ ತಿಳಿಸಿದ್ದಾರೆ.