ಸಿಂದಗಿ: ಪಟ್ಟಣದ ಪುರಸಭೆ ಆಸ್ತಿಯಲ್ಲಿ ಅಕ್ರವಾಗಿ ಇರುವ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಬೇಕು, ಪುರಸಭೆ ಪೌರಕಾಮರ್ಿಕರಿಗೆ ವೇತನದ ವ್ಯವಸ್ಥೆ ಮಾಡಬೇಕು, ಪಟ್ಟಣದ ಅಭಿವೃದ್ಧಿ ಕಾರ್ಯಗಳು ನಡೆಬೇಕು ಎಂದು ಪುರಸಭೆಯ ಸಭಾಭವನದಲ್ಲಿ ಗುರುವಾರ ಜರುಗಿದ ಸಾನ್ಯಸಭೆಯಲ್ಲಿ ಚೆಚರ್ೆಗಳು ನಡೆದವು.
ಪಟ್ಟಣದ ಸ್ವಚ್ಚತೆಕಾಪಾಡುವ ಪೌರಕಾಮರ್ಿಕರ ವೇತನ ಸರಿಯಾಗಿ ಆಗುತ್ತಿಲ್ಲ. ಅವರ ವೇತನ ನೀಡಲು ಸುಮಾರು ಒಂದು ಕೋಟಿಗಿಂತ ಹೆಚ್ಚಿನ ಹಣ ಬೇಕಾಗುತ್ತದೆ. ಪಟ್ಟಣದ ಅಂಬೇಡ್ಕರ್ ವೃತ್ತದಿಂದ ಟಿಪ್ಪುಸುಲ್ತಾನ ವೃತ್ತ ಹಾಗೂ ಬಸವೇಶ್ವರ ವೃತ್ತದವರೆಗೆ ಮತ್ತು ತಹಶೀಲ್ದಾರ ಕಚೇರಿಯ ಸುತ್ತಮುತ್ತಲಿನಲ್ಲಿ ಪುರಸಭೆ ಜಾಗದಲ್ಲಿ ಅತಿಕ್ರಮಣವಾಗಿ ಇಟ್ಟಿರುವ ಡಬ್ಬಾ ಅಂಗಡಿಗಳನ್ನು ತೆರವುಗೊಳಿಸಬೇಕು ಎಂದು ಪುರಸಭೆ ಸದಸ್ಯ ಹಣಮಂತ ಸುಣಗಾರ ಒತ್ತಾಯಿಸಿದರು. ಸದಸ್ಯರು ಹಾಗೂ ಅಧ್ಯಕ್ಷ ಬಾಷಾಸಾಬ ತಾಂಬೋಳಿ ಅವರು ಸಮ್ಮತಿಸಿದರು.
ಸದಸ್ಯ ರಾಜಶೇಖರ ಕುಚಬಾಳ ಮಾತನಾಡಿ, ಗದುಗಿನ ತೋಂಟದರ್ಯ ಲಿಂ. ಡಾ. ಸಿದ್ದಲಿಂಗ ಸ್ವಾಮಿಗಳ ಪೂವರ್ಾಶ್ರಮ ಸಿಂದಗಿ ಆಗಿದ್ದು ಅವರ ಅಗಲಿಕೆಯಿಂದ ತುಂಬಲಾರದ ನಷ್ಟವಾಗಿದೆ. ಅವರ ಸ್ಮರಣಾರ್ಥವಾಗಿ ಹಳೆ ಎಸ್ಬಿಐ ರಸ್ತೆಗೆ ಡಾ. ಸಿದ್ದಲಿಂಗ ಸ್ವಾಮಿಗಳ ಹೆಸರು ನಾಮಕರಣ ಮಾಡಬೇಕು ಎಂದು ಅಭಿಪ್ರಾಯವ್ಯಕ್ತಪಡೆಸಿದರು.
ಸದಸ್ಯ ಹಣಮಂತ ಸುಣಗಾರ ಮಾತನಾಡಿ, ಗದುಗಿನ ತೋಂಟದರ್ಯ ಲಿಂ. ಡಾ. ಸಿದ್ದಲಿಂಗ ಸ್ವಾಮಿಗಳ ಹೆಸರಿನಲ್ಲಿ ಸಮುದಾಯಭವನ ನಿಮರ್ಿಸಲು ಆಗ್ರಹಿಸಿದರು. ಕಳೆದ 5 ವರ್ಷಗಳಿಂದ ಸದಸ್ಯರ ಗೌರವಧನನೀಡಿಲ್ಲ. ಎಲ್ಲ ಸದಸ್ಯರ ಗೌರವಧನವನ್ನು ಸಭಾಭವನ ನಿಮರ್ಾಣ ಮಾಡಲು ಎಲ್ಲ ಸದಸ್ಯರು ಗೌರವಧನ ನೀಡಬೇಕು ಎಂದು ಸದಸ್ಯರಲ್ಲಿ ಮನವಿ ಮಾಡಿಕೊಂಡರು. ಮಾಜಿ ಉಪಾಧ್ಯಕ್ಷೆ, ಹಾಲಿ ಸದಸ್ಯೆ ಗಂಗುಬಾಯಿ ಕಳ್ಳಿಮಠ ಮಾತನಾಡಿ, ನಮಗೆ ನೀಡಬೇಕಾದ ಗೌರವಧನ ನೀಡಿ. ಡಾ. ಸಿದ್ದಲಿಂಗ ಸ್ವಾಮಿಗಳ ಹೆಸರಿನಲ್ಲಿ ನಿಮರ್ಿಸುವ ಸಮುದಾಯಭವನ ನಾವೇ ಬೇಕಾದರೆ ಹಣ ನೀಡುತ್ತೇವೆ ಎಂದು ಹೇಳಿದರು.
ಪುರಸಭೆ ಅಧ್ಯಕ್ಷ ಬಾಷಾಸಾಬ ತಾಂಬೋಳಿ ಮಾತನಾಡಿ, ಪಟ್ಟಣದ ಅಭಿವೃದ್ಧಿಗಾಗಿ ಶ್ರಮಿಸೋಣ. ಪಟ್ಟಣದ ಅಭಿವೃದ್ಧಿಗೆ ಸದಸ್ಯರು ನೀಡುವ ಸಲಹೆಗಳಿಗೆ ನನ್ನ ಒಪ್ಪಿಗೆಯಿದೆ. ಪೌರಕಾಮರ್ಿಕರ ವೇತನ ನೀಡುಲು ಅನುದಾನ ಕಡಿಮೆಯಿದ್ದು ಜಿಲ್ಲಾಧಿಕಾರಿಗಳೊಂದಿಗೆ ಚಚರ್ೆಮಾಡಿ ಹೆಚ್ಚಿನ ಅನುದಾನ ನೀಡಬೇಕು ಎಂದು ಮನವಿಮಾಡಿಕೊಳ್ಳಲಾಗುವುದು. ಪುರಸಭೆ ಜಮೆಯಾಗಬೇಕಾದ ತೆರಿಗೆಯನ್ನು ಕಡ್ಡಾಯವಾಗಿ ಸಂಗ್ರಹಿಸಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು. ಬರಗಾಲವಿದ್ದಕಾರಣ ಪಟ್ಟಣದ ಎಲ್ಲಾವಾರ್ಡಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಬರಬಾರದು ಆದ್ದರಿಂದ ಬರಗಾಲಕಾಮಗಾರಿ ಯೋಜನೆಯಲ್ಲಿ ಒಂದು ಕೋಟಿ ಹಣ ಬಿಡುಗಡೆ ಮಾಡಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದರು. ಪುರಸಭೆ ಮುಖ್ಯಾಧಿಕಾರಿ ಬಸವರಾಜ ಹಿರೇಮಠ, ಸದಸ್ಯರಾದ ಮಂಜುನಾಥ ಬಿಜಾಪೂರ, ಗೋಲ್ಲಾಳ ಬಂಕಲಗಿ, ಚಂದ್ರಶೇಖರ ಅಮಲಿಹಾಳ ಸೇರಿದಂತೆ ಎಲ್ಲ ಸದಸ್ಯರು ಸಭೆಯಲ್ಲಿ ಭಾಗವಹಿಸಿದ್ದರು.