ಮುಗಳಖೋಡ : ಕೃಷಿ ಅಭಿಯಾನ-2019 ಇಲಾಖೆಯ ನಡೆ ರೈತರ ಮನೆಯ ಬಾಗಿಲ ಕಡೆ

ಮುಗಳಖೋಡ 03; ಪಟ್ಟಣದ ಯಲಾಲ್ಲಿಂಗೇಶ್ವರ ಮಠದ ಆವರಣದಲ್ಲಿ ಇಂದು ಕುಡಚಿ ಹೋಬಳಿ ಮಟ್ಟದ ಸಮಗ್ರ ಕೃಷಿ ಮಾಹಿತಿ ಅಭಿಯಾನಕ್ಕೆ ಕೇಂದ್ರ ರೈಲ್ವೆ ರಾಜ್ಯ ಸಚಿವ ಸುರೇಶ ಅಂಗಡಿ ಉದ್ಘಾಟಿಸಿ  ಚಾಲನೆ ನೀಡಿದರು. 

  ಕೇಂದ್ರ ಸರಕಾರದಿಂದ ವಿವಿಧ ಬೆಳೆಗಳಿಗೆ ಕನಿಷ್ಠ ಪ್ರೋತ್ಸಾಹ ಧನವನ್ನು ನೀಡುತ್ತಿದ್ದು ಇದರ ಸದುಪಯೋಗ ಪಡೆದುಕೊಳಬೇಕು ಮತ್ತು ಕೃಷಿಯನ್ನು ಒಂದು ಉದ್ಯಮ ರೀತಿಯಲ್ಲಿ ಅಭಿವೃದ್ಧಿ ಪಡಿಸಲು ಕೇಂದ್ರ ಸರಕಾರ ಸದಾ ರೈತರ ಹಾಗೂ ಕೃಷಿ ಇಲಾಖೆ ಜೊತೆ ಇರುವುದಾಗಿ ತಿಳಿಸಿದರು.  

ಕುಡಚಿ ಶಾಸಕ ಪಿ.ರಾಜೀವ ರವರು ಕೃಷಿ ಅಭಿಯಾನವನ್ನು ಪ್ರತಿಯೊಬ್ಬ ರೈತರ ಸಮಸ್ಯಗಳಿಗೆ ಪರಿಹಾರ ನೀಡುವಂತಾಗಬೇಕು. ಸಮಗ್ರ ಕೃಷಿ ಅಭಿಯಾನದ ಸದುಪಯೋಗವನ್ನು ಪ್ರತಿಯೊಬ್ಬ ರೈತರ ಪಡೆದುಕೊಂಡು ಕೃಷಿಯಲ್ಲಿ ತಮ್ಮ ಆಥರ್ಿಕ ಮಟ್ಟ ಹೆಚ್ಚಿಸಿಕೊಳ್ಳಲು ತಿಳಿಸಿದರು.

ಸಹಾಯಕ ನಿದರ್ೆಶಕ ಎಮ್. ಸಿ. ಮಣ್ಣಿಕೇರಿ ಮಾತನಾಡಿ ಸಮಗ್ರ ಕೃಷಿ ಅಭಿಯಾನ ಯೋಜನೆ ಅಡಿಯಲ್ಲಿ ಸಹೋದರ ಇಲಾಖೆಗಲಾದ ತೋಟಗಾರಿಕೆ. ರೇಷ್ಮೆ ಇಲಾಖೆ. ಅರಣ್ಯ ಹಾಗೂ ಪಶು ಸಂಗೋಪನೆ ಇಲಾಖೆಯ ಅಧಿಕಾರಿಗಳು   ಪ್ರತಿ ಒಂದು ಗ್ರಾಮ ಪಂಚಾಯತಿಗಳಿಗೆ ಭೇಟಿನೀಡಿ ತಮ್ಮ ತಮ್ಮ ಇಲಾಖೆಗಳ ಸೌಲಭ್ಯಗಳ ಬಗ್ಗೆ ತಿಳಿಸಿ ಸ್ಥಳಿಯ ಸಮಸ್ಯೆಗಳಿಗೆ ಪರಿಹಾರ ನೀಡುವರು.

ಚಿಕ್ಕೋಡಿ ಸಂಸದರಾದ ಅಣ್ಣಾಸಾಹೇಬ ಜೊಲ್ಲೆ, ನಿಪ್ಪಾಣಿ ಶಾಸಕಿ ಶಶಿಕಲಾ ಜೊಲ್ಲೆ, ಕೃಷಿ ಅಧಿಕಾರಿ ರಘುನಾಥ ಪಾಟೀಲ, ತೋಟಗಾರಿಕೆ ಇಲಾಖೆ ಅಧಿಕಾರಿ ಈರಣ್ಣ ಬಟ್ಟಕುರಿಕಿ,  ಹಾಗೂ ಎಸ್.ಕೆ.ಕುಂಬಾರ, ಎಮ್.ಸಿ.ಶೇಟಗಾರ, ಟಿ.ಎಸ್.ಪವಾರ, ಡಿ.ಡಿ.ಪಾರ್ಥನಳ್ಳಿ, ಎಸ್.ಎಮ್.ಹೊನ್ನಳಿ, ಕೃಷಿ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.