ಲೋಕದರ್ಶನ ವರದಿ
ಸಂಕೇಶ್ವರ 28: ಜ. ಅಗ್ನಿಶಾಮಕ ಠಾಣಾ ಅಧಿಕಾರಿಗಳಾದ ಎಂ ಬಿ ಮುಧೋಳ ಇವರಿಗೆ ರಾಷ್ಟ್ರಪತಿ ಪದಕವನ್ನು ಗಣರಾಜ್ಯೋತ್ಸವ ಅಂಗವಾಗಿ ರಾಜ್ಯ ಭವನದಲ್ಲಿ ರಾಜ್ಯಪಾಲರಾದ ವಾಜುಭಾಯಿ ವಾಲಾ ಅವರ ಹಸ್ತದಿಂದ ಪದಕ ಪ್ರಧಾನ ಮಾಡಿ ಗೌರವಿಸಲಾಯಿತು. ಸಂಕೇಶ್ವರ ಅಗ್ನಿಶಾಮಕ ಠಾಣೆಯ ವತಿಯಿಂದ ಸೋಮವಾರ ದಿ.28ರಂದು ಅಗ್ನಿಶಾಮಕ ಠಾಣೆಯ ಸಹಾಯಕ ಅಧಿಕಾರಿ ಆರ್ ಎಮ್ ಪುಜಾರಿ ಇವರು ಅಧಿಕಾರಿ ಎಂ.ಬಿ.ಮುಧೋಳ ಇವರಗೆ ಪುಷ್ಪಹಾರ ನೀಡಿ ಮತ್ತು ಸಿಬ್ಬಂದಿಗಳಿಂದ ಶಾಲ ಹಣ್ಣು ನೀಡಿ ಸತ್ಕರಿಸಲಾಯಿತು. ಕಾರ್ಯಕ್ರಮದಲ್ಲಿ ಮಾತನಾಡುತ್ತ ಎಂ ಬಿ ಮುಧೋಳ ಅಗ್ನಿಶಾಮಕ ಜವಾನರು ತಮ್ಮ ಸೇವೆಯಲ್ಲಿ ಪ್ರಾಮಾಣಿಕ ದಕ್ಷತೆಯಿಂದ ಸೇವೆ ಸಲ್ಲಿಸಿ ಠಾಣೆಯ ಹೆಸರಿಗೆ ಗೌರವ ತರಬೇಕು ಎಂದು ಹೇಳಿದರು. ಕಾರ್ಯಕ್ರಮಕ್ಕೆ ಅಗ್ನಿಶಾಮಕ ಠಾಣಾ ಸಿಬ್ಬಂದಿ ಉಪಸ್ಥಿತರಿದ್ದರು.