ಮುಧೋಳ ಬಂದ್ ಸಂಪೂರ್ಣ ಯಶಸ್ವಿ

ಲೋಕದರ್ಶನ ವರದಿ

ಮುಧೋಳ 27: ಮುಧೋಳ ನಗರದ ಜನತೆಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಜನಪ್ರತಿನಿಧಿಗಳ ಹಾಗೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ಇಚ್ಚಾಶಕ್ತಿ ಕೊರತೆಯಿಂದಾಗಿ ಸಾರ್ವಜನಿಕರು ತಮ್ಮ ಹಕ್ಕುಗಳನ್ನು ಪಡೆದುಕೊಳ್ಳಲು ಇಂದು ಬೀದಿಗಿಳಿದು ಹೋರಾಟ ಮಾಡುವ ಪರಿಸ್ಥಿತಿ ಈಗ ಒದಗಿಬಂದಿದೆ.

ಮುಧೋಳ ನಗರದ ಸಾರ್ವಜನಿಕರಿಗೆ ಸಿಗಬೇಕಾದ ಮೂಲಭೂತ ಸೌಕರ್ಯಗಳನ್ನು ಒದಗಿಸುವಂತೆ ಒತ್ತಾಯಿಸಿ ನಗರ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಪಕ್ಷಾತೀತವಾಗಿ, ಜಾತ್ಯಾತೀತವಾಗಿ, ವಿವಿಧ ಸಂಘ-ಸಂಸ್ಥೆಗಳ ಆಶ್ರಯದಲ್ಲಿ ಹಾಗೂ ಸಮಸ್ತ ರೈತರ ಹಾಗೂ ಸಾರ್ವಜನಿಕರ ಬೆಂಬಲದೊಂದಿಗೆ ಗುರುವಾರ ಹಮ್ಮಿಕೊಂಡಿದ್ದ ಮುಧೋಳ ಬಂದ್ ಕರೆ ಸಂಪೂರ್ಣ ಯಶಸ್ವಿಯಾಗಿದೆ ಇದು ಮುಧೋಳದ ಇತಿಹಾಸದಲ್ಲಿಯೇ ಪ್ರಥಮ ಎಂದು ಹೇಳಬಹುದಾಗಿದೆ.

ನಗರ ಹಿತರಕ್ಷಣಾ ಸಮಿತಿ ಆಶ್ರಯದಲ್ಲಿ ಗುರುವಾರ ಮುಧೋಳ ಬಂದ ಕರೆ ಘೋಷಣೆ ಆಗುತ್ತಿದ್ದಂತೆ ತಾಲೂಕಾ ಆಡಳಿತವು ಎಚ್ಚತ್ತುಗೊಂಡು ಗುರುವಾರ ಬೆಳಗಿನ ಜಾವ 5 ಗಂಟೆಯೊಳಗಾಗಿ ಬೆಳಗಾವಿ-ವಿಜಯಪುರ ರಾಜ್ಯ ಹೆದ್ದಾರಿಯು ನಗರದ ಮಧ್ಯಭಾಗದಲ್ಲಿ ಹಾಯ್ದು ಹೋಗಿರುವ ಶಿವಾಜಿ ಸರ್ಕಲ್ನಿಂದ ಮಲ್ಲಮ್ಮ ನಗರದ ಕ್ರಾಸ್ ವರೆಗೆ ಇರುವ ಅಕ್ಕಪಕ್ಕದ ಅತೀಕ್ರಮಣ ಮಾಡಿಕೊಂಡಿರುವ ಹಾಗೂ ಕೇಶಿಪ್ದಿಂದ ಪರಿಹಾರ ಪಡೆದಿಕೊಂಡಿರುವ ಕಟ್ಟಡಗಳ ತೆರವು ಕಾಯರ್ಾಚರಣೆ ಆರಂಭಗೊಳಿಸಿರುವದನ್ನು ಕಂಡು ಸಾರ್ವಜನಿಕರಿಗೆ ಭಾರಿ ಆಶ್ಚರ್ಯ ಉಂಟು ಮಾಡಿತು.  ತೆರವು ಕಾಯರ್ಾಚರಣೆ ಆರಂಭವಾಗುವದನ್ನು ಗಮನಿಸಿದ ಸಾರ್ವಜನಿಕರು ಇನ್ನೇನು ಮುಧೋಳ ಬಂದ್ ಕರೆ ಹಿಂಪಡೆಯಲಿದ್ದಾರೆಂಬ ಚಚರ್ೆಗಳು ಆರಂಭವಾಗುತ್ತಿದ್ದಂತೆ ಒಂದೆಡೆ ಅಧಿಕಾರಿಗಳು ಅಂಗಡಿ-ಮುಗ್ಗಟ್ಟುಗಳ ತೆರವು ಕಾಯರ್ಾಚರಣೆಯಲ್ಲಿ ತೊಡಗಿದ್ದರೆ ಇತ್ತ ಕಡೆ ಮುಧೋಳ ಬಸ್ ನಿಲ್ದಾಣ ಬಳಿಯ ಬಸವೇಶ್ವರ ಸರ್ಕಲ್ನಲ್ಲಿ ನಗರ ಹಿತರಕ್ಷಣಾ ಸಮಿತಿಯವರು ಮುಧೋಳ ಬಂದ್ ಕರೆ ನೀಡಿರುವ ಅಹ್ವಾನದಂತೆ ನಿಗದಿತ ಸಮಯಕ್ಕೆ ಜಮಾವಣೆಗೊಂಡು ತಾವು ಹಮ್ಮಿಕೊಂಡಿರುವ ಅನಿಧರ್ಿಷ್ಟ ಸತ್ಯಾಗ್ರಹವನ್ನು ಯಥಾಸ್ಥಿತಿ ಆರಂಭಿಸಿದರು.

ನಗರ ಹಿತರಕ್ಷಣಾ ಸಮಿತಿಯ ಮುಖಂಡರಾದ ಡಾ.ಸಂಜಯ ಘಾರಗೆ, ಡಾ.ಮೋಹನ ಬಿರಾದಾರ, ಡಾ.ಶಿವಾನಂದ ಕುಬಸದ, ಡಾ.ವ್ಹಿ.ಎನ್.ನಾಯಿಕ ಡಾ.ಸತೀಶ ಮಲಘಾಣ, ವಕೀಲರರಾದ ಪ್ರಕಾಶ  ವಸದ, ಐ.ಎಚ್.ಅಂಬಿ, ಸತೀಶ ಬಂಡಿವಡ್ಡರ, ಎಸ್.ಆರ್.ದಿವಾಣ,  ಬಿ.ಪಿ.ಹಿರೇಸೋಮಣ್ಣವರ, ಕಿಶೋರ ಮಸೂರಕರ, ಕಲ್ಲಪ್ಪ ಸಬರದ, ಕೆ.ಟಿ.ಪಾಟೀಲ, ಆರ್.ವ್ಹಿ.ಕರೆಹೊನ್ನ, ಶಂಕರ ನಾಯ್ಕ ಸೇರಿದಂತೆ ಇತರೆ ಗಣ್ಯರು ವೇದಿಕೆ ಮೂಲಕ ಮಾತನಾಡಿ ಮುಧೋಳ ನಗರಕ್ಕೆ ಬೇಕಾಗಿರುವ ಮೂಲಭೂತ ಸೌಲಭ್ಯಗಳನ್ನು ಸಂಪೂರ್ಣ ಈಡೇರಿಸುವವರೆಗೆ ತಾವು ಹಮ್ಮಿಕೊಂಡಿರುವ ಅನಿಧರ್ಿಷ್ಟ ಅವದಿಯ ಮುಷ್ಕರವನ್ನು ಯಾವುದೇ ಕಾರಣಕ್ಕೂ ಹಿಂಪಡೆಯುವಂತಿಲ್ಲ, ಇದು ಯಾವುದೇ ಪಕ್ಷಕ್ಕೆ, ವ್ಯಕ್ತಿಗೆ, ಸಂಘಟನೆಗೆ ಸಂಬಂಧಿಸಿದಲ್ಲ ನಮ್ಮ ಹೋರಾಟ ಸಾರ್ವಜನಿಕರ ಪರವಾಗಿದ್ದು ಸಾರ್ವಜನಿಕರ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಹೋರಾಟ ಮಾಡುತ್ತಿದ್ದೇವೆ, ನಮ್ಮ ಹೋರಾಟಕ್ಕೆ ನಗರದ ಜನತೆಯು ಸಂಪೂರ್ಣ ಬೆಂಬಲ ವ್ಯಕ್ತಪಡಿಸಿದ್ದಾರೆ ಅದಕ್ಕಾಗಿ ತಾವು ಕೃತಜ್ಞತೆ ಸಲ್ಲಿಸುವದಾಗಿ ತಿಳಿಸಿದರು, ನಂತರ ಬಸವೇಶ್ವರ ಸರ್ಕಲ್ದಿಂದ ಹೊರಟ ಪ್ರತಿಭಟನೆಯು ಜಡಗಾಬಾಲಾ ಸರ್ಕಲ್, ಕಲ್ಮೇಶ್ವರ ಸರ್ಕಲ್, ಗಾಂಧೀ ಸರ್ಕಲ್, ಶಿವಾಜಿ ಸರ್ಕಲ್, ಅಂಬೇಡ್ಕರ ಸರ್ಕಲ್ ಮೂಲಕ ಹಾಯ್ದು ಮತ್ತೆ ಬಸವೇಶ್ವರ ಸರ್ಕಲ್ ಬಳಿಯ ವೇದಿಕೆಗೆ ಬಂದು ತಲುಪಿತು, ಇದೆ ಸಂದರ್ಭದಲ್ಲಿ ವಕೀಲರ ಸಂಘದವರು ತಮ್ಮ ನ್ಯಾಯಾಲಯದ ಕಾರ್ಯಕಲಾಪವನ್ನು ಸ್ಥಗಿತಗೊಳಿಸಿ ಹೋರಾಟಕ್ಕೆ ತಮ್ಮ ಬೆಂಬಲ ಸೂಚಿಸಿದರು,ರಸ್ತೆ ಅಗಲೀಕರಣಗೊಳಿಸಲು ಮುಂದಾಗಿರುವ ಸಕರ್ಾರದ ವಿರುದ್ದ ನ್ಯಾಯಾಲಯಕ್ಕೆ ತಡೆಯಾಜ್ಞೆ ತರಲು ಯಾರಾದರೂ ಮುಂದಾದರೆ ಅಂತಹವರ ವಿರುದ್ದ ಪ್ರಕರಣಗಳನ್ನು ತೆಗೆದುಕೊಳ್ಳುವದಿಲ್ಲ ಅಷ್ಟೇ ಅಲ್ಲ ಬೇರೆ ಕಡೆ ತಡೆಯಾಜ್ಞೆ ತರಲು ಮುಂದಾದರೆ ಅಲ್ಲಿಯ ವಕೀಲರಿಗೆ ವಿನಂತಿಸಿ ಪ್ರಕರಣ ಕೈಗೆತ್ತಿಕೊಳ್ಳದಂತೆ ನೋಡಿಕೊಳ್ಳಲಾಗುವುದು ಎಂದು ವಕೀಲರ ಸಂಘದ ಪರವಾಗಿ ಪ್ರಕಾಶ ವಸದ ವೇದಿಕೆ ಮೂಲಕ ಸಾರ್ವಜನಿಕರಿಗೆ ತಿಳಿಸಿದರು. 

ನಗರ ಹಿತರಕ್ಷಣಾ ಸಮಿತಿಯ ಮುಖಂಡ ಡಾ.ಸಂಜಯ ಘಾರಗೆ ಮಾತನಾಡಿ ಅನಿಧರ್ಿಷ್ಟ ಹೋರಾಟಕ್ಕೆ ಪ್ರತಿದಿನ ಒಂದೊಂದು ಸಂಘಟನೆಯವರು ಭಾಗವಹಿಸಲು ಅವಕಾಶ ನೀಡಲಾಗಿದೆ ಕಾರಣ ಈ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಸರ್ವರಿಗೂ ತಾವು ಅಭಿನಂದಿಸುವದಾಗಿ ಹೇಳಿದರು.

ಜಮಖಂಡಿ ಉಪವಿಭಾಗಾಧಿಕಾರಿ ವಿಕ್ರಮ್, ತಹಸೀಲ್ದಾರ ಡಿ.ಜಿ.ಮಹಾತ್, ನಗರಸಭೆ ಪೌರಾಯುಕ್ತ ರಮೇಶ ಜಾಧವ, ಡಿವೈಎಸ್ಪಿ ಆರ್.ಕೆ.ಪಾಟೀಲ, ಸಿಪಿಐ ಕರೆಯಪ್ಪ ಬನ್ನೆ, ಪಿಎಸ್ಐ ಶ್ರೀಶೈಲ ಬ್ಯಾಕೋಡ, ಜಿಲ್ಲೆಯ ವಿವಿಧ ತಾಲೂಕಿನ ಪೊಲೀಸ್ ಅಧಿಕಾರಿಗಳು, ಕಂದಾಯ, ಹೆಸ್ಕಾಂ, ಪಿಡಬ್ಲೂಡಿ, ನಗರ ಸಭೆ, ಭೂಮಾಪನ ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿಯವರ ನೇತೃತ್ವದಲ್ಲಿ 6 ಜೆಸಿಬಿ ಮೂಲಕ ಕಟ್ಟಡಗಳ ತೆರವು ಕಾಯರ್ಾಚರಣೆ ಹಮ್ಮಿಕೊಳ್ಳಲಾಗಿತ್ತು, ತೆರವು ಕಾಯರ್ಾಚರಣೆ ಹಮ್ಮಿಕೊಂಡಿರುವ ಸಾರ್ವಜನಿಕರು ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದರು, ತೆರವು ಕಾಯರ್ಾಚರಣೆ ಸಂದರ್ಭದಲ್ಲಿ ಕೆಲವು ಅಂಗಡಿಗಳ ಮಾಲಿಕರು ಸಹಕರಿಸಿದರೆ, ಇನ್ನೂ ಕೆಲವು ಅಂಗಡಿ ಮಾಲಿಕರು ತಮಗೆ ತೆರವುಗೊಳಿಸಲು ಕಾಲಾವಧಿ ನೀಡಬೇಕಾಗಿತ್ತು ಅಧಿಕಾರಿಗಳ ಜೊತೆ ವಾಗ್ವಾದ ನಡೆಯಿತು,ಇದಕ್ಕೆ ಕ್ಯಾರೆ ಅನ್ನದೆ ಅಧಿಕಾರಿಗಳು ಯಥಾಸ್ಥಿತಿ ತೆರವು ಕಾಯರ್ಾಚರಣೆಗೆ ಮುಂದಾದರು.

  ಮುಧೋಳದ ಇತಿಹಾಸದಲ್ಲಿ ಇದೇ ಪ್ರಥಮ ಭಾರಿಗೆ ಸಾರ್ವಜನಿಕರು ಸ್ವಯಂ ಪ್ರೇರಿತರಾಗಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು ಅಲ್ಲದೆ ದೊಡ್ಡ ಮತ್ತು ಸಣ್ಣ ಪ್ರಮಾಣದ ವ್ಯಾಪಾರಸ್ಥರು ತಮ್ಮ ಅಂಗಡಿ ಮುಗ್ಗಟ್ಟುಗಳನ್ನು ಸ್ವಯಂ ಪ್ರೇರಣೆಯಿಂದ ಬಂದ್ ಮಾಡಿದ್ದರು ನಗರದ ಯಾವುದೇ ಮೂಲೆಯಲ್ಲಿಯೂ ಸಹ ಸಣ್ಣ-ಪುಟ್ಟ ಅಂಗಡಿಗಳು,ಡಬ್ಬಾ ಅಂಗಡಿಗಳು ಕೂಡಾ ತೆರೆದಿರುವುದು ಎಲ್ಲಿಯಾ ಕಂಡು ಬರಲಿಲ್ಲ ಇದನ್ನು ಗಮನಿಸಿದರೆ ನಗರದ ಜನತೆಗೆ ಮೂಲಭೂತ ಸೌಲಭ್ಯಗಳ ಕೊರತೆಯಿಂದಾಗಿ ರೋಷಿ ಹೋಗಿ ಬಂದ್ ಕರೆಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿರುವುದು ವಿಶೇಷ

ನಗರದಲ್ಲಿ ಸಾರಿಗೆ ಸಂಸ್ಥೆಯ ಬಸ್ಗಳು, ಆಟೋಗಳು ಸೇರಿದಂತೆ ಯಾವುದೇ ಖಾಸಗಿ ವಾಹನಗಳ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು,ನಗರದ ಸಕರ್ಾರಿ, ಅನುದಾನ ಮತ್ತು ಅನುದಾನ ರಹಿತ ಶಾಲೆಗಳು ಬಂದ್ ಸಂಘಟಕರ ಮನವಿಗೆ ಸ್ಪಂದಿಸಿ ಶಾಲೆಗೆ ರಜೆ ಷೋಷಿಸಿದ್ದವು, ಸಕರ್ಾರಿ ಕಚೇರಿಗಳು ಎಂದಿನಂತೆ ಕಾರ್ಯನಿರ್ವಹಿಸಿದರೂ ಯಾರ್ವಜನಿಕರಿಲ್ಲದೆ ಬಿಕೋ ಎನ್ನುತ್ತಿದ್ದವು. ಒಟ್ಟಾರೆ ಮುಧೋಳ ಬಂದ್ ಕರೆ ಶಾಂತರೀತಿಯಿಂದ ಸಂಪೂರ್ಣ ಯಶಸ್ವಿಯಾಗಿದೆ, ಇದು ಮುಧೋಳದ ಇತಿಹಾಸದಲ್ಲಿ ಪ್ರಥಮ ಎಂದೇ ಹೇಳಬಹುದು.