ಲೋಕದರ್ಶನ ವರದಿ
ಮುದ್ದೇಬಿಹಾಳ 24: ನಮ್ಮ ಪೂರ್ವಜರು ಗಿಡ, ಮರಗಳ ಮಹತ್ವ ಅರಿತು ಅವುಗಳು ನಾಶವಾಗದಂತೆ ದೈವಿ ಸ್ವರೂಪ ನೀಡಿ ರಕ್ಷಿಸಿದ್ದರು ಎಂದು ಎಂ.ಜಿ.ವಿ.ಸಿ. ಮಹಾವಿದ್ಯಾಲಯದ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಎಸ್.ವಿ.ಗುರುಮಠ ಹೇಳಿದರು.
ಪಟ್ಟಣದ ಹುಡ್ಕೋದಲ್ಲಿರುವ ಉದ್ಯಾನವನದಲ್ಲಿ ತಾಲ್ಲೂಕು ಶರಣ ಸಾಹಿತ್ಯ ಪರಿಷತ್ತು ಹಾಗೂ ಹಸಿರು ತೋರಣ ಗೆಳೆಯರ ಬಳಗ ಸಹಯೋಗದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಹಾಗೂ ಲಿಂ.ಗುರುಸಂಗಪ್ಪ ಕಲ್ಲಪ್ಪ ರಾಂಪೂರ ಮತ್ತು ಲಿಂ.ಯಶವಂತರಾಯ ಮರಾಠೆ ಸ್ಮರಣಾರ್ಥ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ವಚನ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ ವಿಷಯದ ಮೇಲೆ ಉಪನ್ಯಾಸ ನೀಡಿ ಮಾತನಾಡಿದರು.
ದೇವಸ್ಥಾನಗಳಲ್ಲಿ ಪಂಚವೃಕ್ಷಗಳಾದ ಅರಳಿ, ಅತ್ತಿ, ಬಿಲ್ವ, ಬೇವು ಹಾಗೂ ಬನ್ನಿ ಮರಗಳನ್ನು ನೆಟ್ಟು, ಅವುಗಳಿಗೆ ದೇವರ ಪಟ್ಟ ನೀಡಿದ್ದು ದೇವಸ್ಥಾನಗಳ ಸುತ್ತಲೂ ಬಾವಿ, ಕೆರೆ, ಸರೋವರ ನಿರ್ಮಿಸಿದ್ದು ಹಿರಿಯರ ಬುದ್ಧಿವಂತಿಕೆ ಯೋಜನೆಯಾಗಿತ್ತು ಎಂದರು.
ಸಭೆಯನ್ನುದ್ದೇಶಿಸಿ ಹಸಿರು ತೋರಣ ಗೆಳೆಯರ ಬಳಗದ ಅಧ್ಯಕ್ಷ ನಾಗಭೂಷಣ ನಾವದಗಿ, ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಬಸವರಾಜ ನಾಲತವಾಡ, ವಕೀಲೆ ಜಯಾ ವಿ.ಸಾಲಿಮಠ, ಪ್ರಭು ಕಡಿ, ಕೆ.ಆರ್.ಕಾಮಟೆ, ಎಂ.ಎಸ್.ಮಾಲಗತ್ತಿ ಮಾತನಾಡಿದರು. ಸಮಾರಂಭದಲ್ಲಿ ವಿದ್ಯಾಭಾರತಿ ಸಂಸ್ಥೆಗೆ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷರಾಗಿ ನೇಮಕವಾದ ಪ್ರಭುಲಿಂಗ ಕಡಿ ಅವರನ್ನು ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮಹಾಂತಪ್ಪ ನಾವದಗಿ, ಎಸ್.ಜಿ.ವಿ.ಸಿ. ಟ್ರಸ್ಟ ಕಾರ್ಯಾಧ್ಯಕ್ಷ ಅಶೋಕ ತಡಸದ, ಚಂದ್ರಶೇಖರ ನಾಗರಾಳ, ಎಂ.ಬಿ.ಗುಡಗುಂಟಿ, ಎಂ.ಬಿ.ಪಾಟೀಲ, ನಿವೃತ್ತ ಪ್ರಾಚಾರ್ಯ ಎಸ್.ಜಿ.ನಂದಿ, ಡಾ.ಪಿ.ಎಚ್.ಉಪ್ಪಲದಿನ್ನಿ, ಡಾ.ಆರ್.ಎಚ್.ಸಜ್ಜನ ಸೇರಿದಂತೆ ಶರಣ ಸಾಹಿತ್ಯ ಪರಿಷತ್ತು ಹಾಗೂ ಹಸಿರು ತೋರಣ ಗೆಳೆಯರ ಬಳಗದ ಸದಸ್ಯರು ಇದ್ದರು. ಬಾಪುಗೌಡ ಪಾಟೀಲ ಪ್ರಾರ್ಥಿಸಿದರು. ಶಿಕ್ಷಕ ಎಲ್.ಎಂ.ಚಲವಾದಿ ಸ್ವಾಗತಿಸಿದರು. ಸಿದ್ದನಗೌಡ ಬಿಜ್ಜೂರ ನಿರೂಪಿಸಿದರು. ಬಿ.ಎಸ್.ಮೇಟಿ ವಂದಿಸಿದರು.