ಮುದ್ದೇಬಿಹಾಳ: ಮಿನಿ ವಿಧಾನಸೌದ: ದಲಿತರ ಕುಂದುಕೊರತೆ ಸಭೆ

ಲೋಕದರ್ಶನ ವರದಿ

ಮುದ್ದೇಬಿಹಾಳ 05: ಇಂದಿನ ದಿನಗಳಲ್ಲಿ ದಲಿತರು ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ ಎಂದು ಹೇಳುವುದು ವಿಷಾಧನೀಯ ಸಂಗತಿಯಾಗಿದೆ. ಮುದ್ದೇಬಿಹಾಳ ತಾಲೂಕಿನ ಕೆಲ ಗ್ರಾಮಗಳಲ್ಲಿ ದಲಿತರಿಗೆ ಕ್ಷೌರಿ ಮಾಡಲು ಕೆಲವರು ಹಿಂಜರಿಯುತ್ತಿದ್ದಾರೆ. ಇಂತಹ ಪರಿಸ್ಥಿತಿಯನ್ನು ತಾಲೂಕಾ ಮಟ್ಟದ ಅಧಿಕಾರಿಗಳು ತಡೆಗಟ್ಟಬೇಕು ಎಂದು ತಾಲೂಕಾ ದಲಿತ ಮುಖಂಡರು ಆಗ್ರಹಿಸಿದರು.

ಸಭೆಯನ್ನು ಮೊಟಕು ಗೊಳಿಸಲು ಮುಂದಾದ ದಲಿತ ಮುಖಂಡರು:

ಸಭೆಯಲ್ಲಿ ದಲಿತ ಮುಖಂಡರು ತಮ್ಮ ಕುಂದು ಕೊರೆತೆ ಹೇಳುವ ಸಂದರ್ಭದಲ್ಲಿ ತಹಸೀಲ್ದಾರ ಪಾಟೀಲ ಅವರು ಯಾವುದೇ ರೀತಿಯಾಗಿ ಗಲಾಟೆ ಮಾಡದಂತೆ ಶಾಂತಿ ರೀತಿಯಾಗಿ ವರ್ತಿಸಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಭೆಗೆ ಯಾವಬ್ಬ ಅಧಿಕಾರಿಯೂ ಬರಲು ಹಿಂಜರೆಯುತ್ತಾರೆ ಎಂದು ಹೇಳಿದಾಗ ಅವರೊಂದಿಗೆ ವಾಗ್ವಾದಕ್ಕೆ ಇಳಿದ ದಲಿತ ಮುಖಂಡರು ಯಾವುದೇ ಸಭೆ ಮಾಡಿದರೂ ದಲಿತರಿಗೆ ಅನ್ಯಾಯವಾಗುತ್ತಿರುವುದನ್ನು ತಪ್ಪಿಸಲು ಸಾದ್ಯವಾಗುತ್ತಿಲ್ಲ ಎಂದರು.

ವಿವಿಧ ಗ್ರಾಮಗಳಲ್ಲಿನ ದಲಿತ ಸಮಸ್ಯೆಗಳು:

ಮುದ್ದೇಬಿಹಾಳ ತಾಲೂಕಿನ ತಾರನಾಳ, ಪಡೇಕನೂರ, ಸರೂರ, ಅಗಸಬಾಳ, ಕಾರಕೂರ ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ದಲಿತ ಕೇರಿಗಳು ಅಶುದ್ಧತೆಯಿಂದ ಕೂಡಿದೆ. ಅಲ್ಲದೇ ಕೆಲವರು ದಲಿತರೊಂದಿಗೆ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ. ಇಂತಹ ಸಮಸ್ಯೆಗಳನ್ನು ಅಧಿಕಾರಿಗಳು ಖುದ್ದಾಗಿ ಬೇಟಿ ನೀಡಿ ಬಗೆಹರಿಸಬೇಕು ಎಂದು ದಲಿತ ಮುಖಂಡರು ತಹಸೀಲ್ದಾರ ಅವರಿಗೆ ತಿಳಿಸಿದರು.

ಮಟನ್ ಮಾರಕೇಟ್ ಬಂದ್ ಮಾಡಿ:

ಮುದ್ದೇಬಿಹಾಳ ಪಟ್ಟಣದ ದಲಿತರು ಹೆಚ್ಚಿನ ಸಂಖ್ಯೆಯಲ್ಲಿರುವ ನೇತಾಜಿ ನಗರಕ್ಕೆ ಹೊಂದಿಕೊಂಡಿರುವ  ರಸ್ತೆಯ ಅಕ್ಕಪಕ್ಕದಲ್ಲಿ ಕೆಲವರು ಮಾಂಸ ಮಾರಾಟದ ಅಂಗಡಿಗಳನ್ನು ಇಟ್ಟಿದ್ದು ಇದರಿಂದ ಅಲ್ಲಿನ ನಿವಾಸಿಗರಿಗೆ ತೊಂದರೆಯಾಗುತ್ತಿದೆ. ಅಂಗಡಿಗಳನ್ನು ಬಂದ್ ಮಾಡಿಸಿ ಸೂಕ್ತ ಸ್ಥಳಕ್ಕೆ ಸ್ಥಳಾಂತರಿಸಬೇಕು 

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಎನ್.ಆರ್.ಉಂಡಿಗೇರಿ, ತಾಪಂ ಪ್ರಭಾರಿ ಇಓ ಪ್ರಕಾಶ ದೇಸಾಯಿ, ದಲಿತಮುಖಂಡರಾದ ಡಿ.ಬಿ.ಮುದೂರ, ರೇವಣಪ್ಪ ಹರಿಜನ, ಸಿ.ಜಿ.ವಿಜಯಕರ, ಅಶೋಕ ಅಜಮನಿ, ಆಶೋಕ ಇರಕಲ್ಲ, ಭಲಬೀಮ ನಾಯಕಮಕ್ಕಳ, ಪರಶುರಾಮ ನಾಲತವಾಡ, ರವಿ ನಾಯಕ, ಶೆಟ್ಟೆಪ್ಪ ಭೋವಿ, ಶಿವಪುತ್ರಪ್ಪ ಅಜಮನಿ, ದೇವೆಂದ್ರಪ್ಪ ವಾಲಿಕಾರ, ದಲೀಪ ಜಾನ್ವೇಕರ, ಪ್ರಕಾಶ ಸರೂರ, ದೇವರಾಜ ಹಂಗರಗಿ ಸೇರಿದಂತೆ ತಾಲೂಕಾ ಮಟ್ಟದ ಅಧಿಕಾರಿಗಳು ಇದ್ದರು.