ಲೋಕದರ್ಶನ ವರದಿ
ಮುದ್ದೇಬಿಹಾಳ 11: ರಾಜ್ಯದಲ್ಲಿ ಪ್ರವಾಹ, ಅತಿವೃಷ್ಟಿ ಪರಿಣಾಮ ಸಾಕಷ್ಟು ಜನರಿಗೆ ತೊಂದರೆ ಆಗಿದ್ದರೂ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸುವಲ್ಲಿ ಬಿಜೆಪಿಯ ಬಿ.ಎಸ್.ಯಡಿಯೂರಪ್ಪ ನೇತೃತ್ವದ ಏಕವ್ಯಕ್ತಿ ಸರ್ಕಾರ ಸಂಪೂರ್ಣ ವಿಫಲಗೊಂಡಿದೆ. ಮಂತ್ರಿ ಮಂಡಲ ಇಲ್ಲದ್ದರಿಂದ ಅಧಿಕಾರಿಗಳ ಮೇಲೆ ನಿಯಂತ್ರಣ ಹೇರುವವರು ಯಾರೂ ಇಲ್ಲದಂತಾಗಿ ಪ್ರವಾಹ ಪರಿಸ್ತಿತಿ ಎದುರಿಸಲು ಸಹಕಾರದ ಕೊರತೆ ಎದ್ದು ಕಾಣುತ್ತಿದೆ ಎಂದು ಮಾಜಿ ಸಚಿವ ಸಿ.ಎಸ್.ನಾಡಗೌಡ ಟೀಕಿಸಿದ್ದಾರೆ.
ಇ ಲ್ಲಿನ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸಂಜೆ ಕಾಂಗ್ರೆಸ್ ಧುರೀಣರೊಂದಿಗೆ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸಕ್ತ ಪರಿಸ್ಥಿತಿ ಎದುರಿಸಲು ಸಕರ್ಾರ ಮತ್ತು ಅಧಿಕಾರಿಗಳು ಸಮರೋಪಾದಿಯಲ್ಲಿ ಸಂತ್ರಸ್ತರ ನೆರವಿಗೆ ಧಾವಿಸಬೇಕಿತ್ತು. ಮಂತ್ರಿಮಂಡಲ ಇದ್ದಿದ್ದರೆ ಅಧಿಕಾರಿಗಳನ್ನು ಚುರುಕುಗೊಳಿಸುವ ಕೆಲಸ ನಡೆಯುತ್ತಿತ್ತು. ಆದರೆ ಸಿಎಂ ಯಡಿಯೂರಪ್ಪ ಅವರು ಪ್ರವಾಹದಿಂದ ಜನರು ಸಾವನ್ನಪ್ಪುತ್ತಿರುವಾಗ ಮಂತ್ರಿ ಮಂಡಲ ವಿಸ್ತರಣೆಗೋಸ್ಕರ ದೆಹಲಿಗೆ, ದೇವಸ್ಥಾನಗಳಿಗೆ ತಿರುಗಾಡಿ ಕಾಲಹರಣ ಮಾಡಿ ಇದೀಗ ಪರಿಸ್ಥಿತಿ ಕೈ ಮೀರುವ ಹಂತ ತಲುಪಿದಾಗ ಓಡಾಡುತ್ತಿರುವುದು ತಮಗೆ ಸೀರಿಯಸ್ನೆಸ್ ಇಲ್ಲ ಎನ್ನುವುದನ್ನು ತೋರಿಸಿಕೊಟ್ಟಂತಾಗಿದೆ ಎಂದು ಲೇವಡಿ ಮಾಡಿದರು.
ಕೃಷ್ಣೆಗೆ ಮಹಾ ಪ್ರವಾಹದಿಂದ ಬಸವಸಾಗರ ಹಿನ್ನೀರಿನಲ್ಲಿ ಸಿಕ್ಕು ಮುದ್ದೇಬಿಹಾಳ ತಾಲೂಕಿನ ನದಿ ದಂಡೆಯ ಜನರು ಬೆಳೆ ಹಾನಿ ಅನುಭವಿಸಿದ್ದಾರೆ. ಇವರಲ್ಲಿ ಕಬ್ಬು ಬೆಳೆಗಾರರೇ ಹೆಚ್ಚು ನಷ್ಟ ಅನುಭವಿಸಿದ್ದಾರೆ. ಇಂಥವರಿಗೆ ಎಕರೆಗೆ ಕನಿಷ್ಠ ರು.1 ಲಕ್ಷ ಪರಿಹಾರ ಕೊಡಬೇಕು. ಹಿನ್ನೀರಲ್ಲಿ ಮುಳುಗಡೆ ಆಗುವ ಪ್ರದೇಶವನ್ನು ಅತ್ಯಾಧುನಿಕ ತಂತ್ರಜ್ಞಾನ ಗೂಗಲ್ ಟ್ಯಾಪಿಂಗ್ ಬಳಸಿಕೊಂಡು ಮರು ಸಮೀಕ್ಷೆ ಮಾಡಿ ಬೆಳೆ ಹಾನಿ ಅನುಭವಿಸಿದ ಎಲ್ಲ ರೈತರಿಗೂ ಪರಿಹಾರ ಕೊಡಲು ಕ್ರಮ ಕೈಕೊಳ್ಳಬೇಕು. ಈ ಹಿಂದೆ ಮುಳುಗಡೆ ಆದ ಜಮೀನಿನಲ್ಲಿ ಬೆಳೆದ ಬೆಳೆ ಹಾನಿಗೆ ಪರಿಹಾರ ಕೊಡಲು ಬರುವುದಿಲ್ಲ ಎನ್ನುವ ಸಬೂಬು ಹೇಳಬಾರದು. ಅಧಿಕಾರಿಗಳು ಜನಪರ ಧೋರಣೆ ತೋರಿಸಬೇಕು ಎಂದು ನಾಡಗೌಡರು ಒತ್ತಾಯಿಸಿದರು.
ಕಾಂಗ್ರೆಸ್ನ ಹಿರಿಯ ಮುಖಂಡರಾದ ಆರ್.ಬಿ.ಪಾಟೀಲ ವಕೀಲರು, ಎಸ್.ಎಸ್.ಮಾಲಗತ್ತಿ ವಕೀಲರು, ರಾಯನಗೌಡ ತಾತರಡ್ಡಿ, ಬಸನಗೌಡ ಪಾಟೀಲ, ಸಂಗನಗೌಡ ಪಾಟೀಲ ಕವಡಿಮಟ್ಟಿ, ಮಹ್ಮದರಫೀಕ ಶಿರೋಳ, ಸದ್ದಾಂ ಕುಂಟೋಜಿ, ಗೋಪಿ ಮಡಿವಾಳರ, ಪ್ರಭುರಾಜ ಕಲಬುಗರ್ಿ, ಮಹಿಬೂಬ ಗೊಳಸಂಗಿ, ಪಿಂಟೂ ಸಾಲಿಮನಿ, ಅನಿಲ ನಾಯಕ, ಅಶೋಕ ಅಜಮನಿ, ಶಿವು ಶಿವಪುರ, ಅಮೀನ ಮುಲ್ಲಾ, ಲಕ್ಷ್ಮಣ ಲಮಾಣಿ ಮತ್ತಿತರರು ಇದ್ದರು.
ಸಂತ್ರಸ್ತರಿಗೆ ಪರಿಹಾರ ಸಂಗ್ರಹ ಇಂದು:
ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗೆ ನೆರವಾಗಲು ಮುದ್ದೇಬಿಹಾಳ ಪಟ್ಟಣದಲ್ಲಿ ಆ.10ರಂದು ಕಾಂಗ್ರೆಸ್ ಧುರೀಣರು, ಕಾರ್ಯಕರ್ತರು ಮತ್ತು ವಿವಿಧ ಘಟಕಗಳ ಸದಸ್ಯರ ನೇತೃತ್ವದಲ್ಲಿ ಸಂತ್ರಸ್ತರಿಗೆ ಪರಿಹಾರ ನಿಧಿ ಸಂಗ್ರಹಿಸಲಾಗುತ್ತದೆ.
ಪ್ರವಾಹಪೀಡಿತ ಸ್ಥಳಕ್ಕೆ ಭೇಟಿ
ಆ.10ರಂದು ಸಂತ್ರಸ್ತಿಗೆ ನಿಧಿ ಸಂಗ್ರಹಣೆ ಕಾರ್ಯ ನಡೆಯಲಿರುವುದರಿಂದ ಆ.11ರಂದು ಪ್ರವಾಹದಿಂದ ತೊಂದರೆಗೊಳಗಾಗಿರುವ ಮುದ್ದೇಬಿಹಾಳ ತಾಲೂಕಿನ ಗಂಗೂರ, ಕಮಲದಿನ್ನಿ, ಕುಂಚಗನೂರ, ಮುದೂರ ಮತ್ತಿತರ ಗ್ರಾಮಗಳಿಗೆ ಭೇಟಿ ನೀಡಿ ಪರಿಶೀಲಿಸಿದರು
-ಮಾಜಿ ಸಚಿವ ಸಿ.ಎಸ್.ನಾಡಗೌಡರು